Fake News - Kannada
 

ಒಹಾಯೋ ಸ್ಟೇಟ್‌ಹೌಸ್‌ನಲ್ಲಿನ ಪ್ರತಿಭಟನಕಾರರ ವಿಡಿಯೋವನ್ನು “ಶ್ವೇತಭವನಕ್ಕೆ ಪ್ರತಿಭಟನಾಕಾರರು ನುಗ್ಗಿದ್ದಾರೆ” ಎಂದು ಸುಳ್ಳು ಸುದ್ದಿ ಹರಡಲಾಗಿದೆ

0

ವಾಷಿಂಗ್ಟನ್‌ ಡಿ ಸಿಯ ಶ್ವೇತಭವನಕ್ಕೆ ಪ್ರತಿಭಟನಾಕಾರರು ನುಗ್ಗಿದ್ದಾರೆ ಎಂಬ ಪ್ರತಿಪಾದಿಸಿರುವ ವಿಡಿಯೋ ಒಂದನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಿನ್ನಿಯಾಪೊಲೀಸ್‌ನಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ತೀವ್ರ ಬಲಪ್ರಯೋಗ ಮಾಡಿ ಆಫ್ರಿಕನ್-ಅಮೇರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಅವರು ನಿಧನರಾದ ನಂತರ ಅಮೆರಿಕದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಪೋಸ್ಟ್‌ ನಲ್ಲಿ ಪ್ರತಿಪಾದಿಸುವ ಸಂಗತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಪ್ರತಿಭಟನಾಕಾರರು ಶ್ವೇತಭವನಕ್ಕೆ ನುಗ್ಗುವ ವಿಡಿಯೋ.

ನಿಜಾಂಶ: ಜನರು ಜಾರ್ಜ್ ಫ್ಲಾಯ್ಡ್ ಅವರ ಹತ್ಯೆ ವಿರೋಧಿಸಿ ಒಹಾಯೋ ಸ್ಟೇಟ್‌ಹೌಸ್‌ನಲ್ಲಿ ಜನರು ಪ್ರತಿಭಟಿಸಿತ್ತಿರುವ ವಿಡಿಯೋ ಅದು, ವೈಟ್‌ಹೌಸ್‌ನಲ್ಲಿ ಪ್ರತಿಭಟಿಸಿದ್ದಲ್ಲ. ಆದ್ದರಿಂದ, ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿ ಸುಳ್ಳು.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ತಂತ್ರದ ಮೂಲಕ ಹುಡುಕಿ ಪರಿಶೀಲಿಸಿದಾಗ, ಒಹಾಯೋ ಸ್ಟೇಟ್‌ಹೌಸ್‌ನಲ್ಲಿ ನಡೆದ ಪ್ರತಿಭಟನೆಗಳ ಬಗ್ಗೆ ಅನೇಕ ಮಾಹಿತಿಗಳು ದೊರೆತಿವೆ. ಆ ಮಾಹಿತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಒಹಾಯೋ ಸ್ಟೇಟ್‌ಹೌಸ್ ಕಟ್ಟಡದ ಚಿತ್ರಗಳನ್ನು ವೈರಲ್ ಆದ ವೀಡಿಯೊದಲ್ಲಿನ ಕಟ್ಟಡದ ಚಿತ್ರಗಳೊಂದಿಗೆ ಹೋಲಿಸಿ ನೋಡಿದಾಗ ವಿಡಿಯೋದಲ್ಲಿರುವ ಕಟ್ಟಡವು ಒಹಾಯೋ ಸ್ಟೇಟ್‌ಹೌಸ್‌ ಎಂದು ದೃಢಪಟ್ಟಿದೆ. ಅದು ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವಂತೆ ಶ್ವೇತಭವನವಲ್ಲ. ‘ಶಟರ್ ಸ್ಟಾಕ್’ ಫೋಟೋ ಲೈಬ್ರರಿಯಲ್ಲಿ ಒಹಾಯೋ ಸ್ಟೇಟ್‌ಹೌಸ್‌ನ ಹೆಚ್ಚಿನ ಚಿತ್ರಗಳನ್ನು ಇಲ್ಲಿ ನೋಡಬಹುದು. ಒಹಾಯೋ ಸ್ಟೇಟ್‌ಹೌಸ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಸುದ್ದಿ ವರದಿಯನ್ನು ಇಲ್ಲಿ ಓದಬಹುದು.

ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾಗಿದ್ದ ಪಠ್ಯದೊಂದಿಗೆ ಹುಡುಕಾಟ ನಡೆಸಿದಾಗ, ನೂರಾರು ಪ್ರತಿಭಟನಾಕಾರರು ಶ್ವೇತಭವನದ ಗೇಟ್ ಹೊರಗೆ ಜಮಾಯಿಸಿದ್ದಾರೆ ಮತ್ತು ಅಮೇರಿಕಾದ ಗುಪ್ತಚರ (ಸೀಕ್ರೆಟ್ ಸರ್ವಿಸ್) ಏಜೆಂಟರುಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷತೆಗಾಗಿ ಭೂಗತ ಬಂಕರ್‌ಗಳಿಗೆ ಕರೆದೊಯ್ದಿದ್ದಾರೆ ಎಂದು ವಿವಿಧ ಸುದ್ದಿ ವರದಿಗಳು ಕಂಡುಬಂದಿವೆ.

ಸತ್ಯ ಇಷ್ಟೇ, ಒಹಾಯೋ ಸ್ಟೇಟ್‌ಹೌಸ್‌ನ ಮೇಲೆ ಪ್ರತಿಭಟನಾಕಾರರು ದಾಳಿ ಮಾಡುವ ವಿಡಿಯೋವನ್ನು ‘ಪ್ರತಿಭಟನಾಕಾರರು ಶ್ವೇತಭವನಕ್ಕೆ ನುಗಿದ್ದಾರೆ’ ಎಂದು ಸುಳ್ಳು ಸುದ್ದಿ ಹರಡಲಾಗಿದೆ.

Share.

Comments are closed.

scroll