Fake News - Kannada
 

ನಜ್ಮಾ ನಜೀರ್ ಅವರ ಫೋಟೋಗಳನ್ನು ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಎಂದು ತಪ್ಪಾಗಿ ಹಂಚಿಕೆ

0

ಕರ್ನಾಟಕದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲಿ, ಪುರುಷರ ಗುಂಪೊಂದು ಜೈ ಶ್ರೀರಾಮ್ ಎಂದು ಕೂಗುತ್ತ ಸುತ್ತುವರೆಯಲು ಬಂದಾಗ ಅವರನ್ನು ಧೈರ್ಯವಾಗಿ ಎದುರಿಸಿದ ವಿದ್ಯಾರ್ಥಿನಿಯು ‘ಅಲ್ಲಾ-ಹು-ಅಕ್ಬರ್’ ಎಂದು ಕೂಗುವ ಮೂಲಕ ಯುವಕರಿಗೆ ಸವಾಲೆಸೆದಿದ್ದಾರೆ. ಬುರ್ಖಾ ಧರಿಸಿದ ವಿದ್ಯಾರ್ಥಿನಿಯು ಬೇರೆ ಬೇರೆ ಉಡುಪುಗಳಲ್ಲಿರುವ ಫೋಟೊಗಳನ್ನು ಹೋಲಿಕೆ ಮಾಡುವ ಮೂಲಕ ಹುಡುಗಿಯ ಹೆಸರು ಮುಸ್ಕಾನ್ ಖಾನ್ ಎಂದ  ವೈರಲ್ ಮಾಡುತ್ತಿದ್ದಾರೆ.  ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಮುಸ್ಕಾನ್ ಖಾನ್ ಶಾಲೆಯಲ್ಲಿ ಬುರ್ಖಾದಲ್ಲಿ ಮತ್ತು ಇತರ ಸ್ಥಳಗಳಲ್ಲಿ ಬೇರೆ ಉಡುಪುಗಳಲ್ಲಿ ಇರುತ್ತಾಳೆ ಎಂದು ಪ್ರತಿಪಾದಿಸಲಾಗಿದೆ.

ನಿಜಾಂಶ: ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಬುರ್ಖಾ ಧರಿಸದ ಮಹಿಳೆ ಮುಸ್ಕಾನ್ ಖಾನ್ ಅಲ್ಲ. ಚಿತ್ರಗಳಲ್ಲಿನ ಬುರ್ಖಾಧಾರಿ ಮಹಿಳೆ ಮುಸ್ಕಾನ್ ಖಾನ್ ಆಗಿದ್ದರೆ, ಬುರ್ಖಾ ರಹಿತ ಮಹಿಳೆ ನಜ್ಮಾ ನಜೀರ್ ಜನತಾ ದಳ (ಜಾತ್ಯತೀತ) – ಕರ್ನಾಟಕ ಸಮಿತಿ ಸದಸ್ಯರಾಗಿರುವ ರಾಜಕಾರಣಿ). ಅಲ್ಲದೆ, ವೈರಲ್ ಚಿತ್ರಗಳಲ್ಲಿ ಒಂದು ಫೋಟೋವನ್ನು ಎಡಿಟ್ ಆಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫೋಟೋಗಳಲ್ಲಿ ಬುರ್ಖಾ ಧರಿಸದ ಯುವತಿಯ ಬಗ್ಗೆ ಸರ್ಚ್ ಮಾಡಿದಾಗ ಆಕೆ ನಜ್ಮಾ ನಜೀರ್ ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಕೆಲವು ಫೋಟೋಗಳನ್ನು ನಜ್ಮಾ ಅವರ ಫೇಸ್‍ಬುಕ್ ಅಕೌಂಟ್‍ನಲ್ಲಿ ಕಾಣಬಹುದು. ಅವರು ಜನತಾ ದಳ (ಜಾತ್ಯತೀತ) – ಕರ್ನಾಟಕ ಸದಸ್ಯರಾಗಿರುವ ರಾಜಕಾರಣಿ. ಅವರ ಕೆಲವು ಚಿತ್ರಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅಲ್ಲದೆ, ಪೋಸ್ಟ್‌ನಲ್ಲಿರುವ ನಜ್ಮಾ ನಜೀರ್ ಅವರ ಎಡಿಟ್ ಮಾಡಿರುವ ಮೂಲ ಫೋಟೋ ಅಭ್ಯವಾಗಿದ್ದು. ಚಿತ್ರವನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಅದೇ ರೀತಿ ಜೆಡಿಎಸ್ ನಾಯಕಿ ನಜ್ಮಾ ನಜೀರ್ ಅವರ ಮತ್ತೊಂದು ಚಿತ್ರ, ಇದರಲ್ಲಿ ಅವರು ಪ್ರಕಾಶ್ ರಾಜ್, ಕನ್ಹಯ್ಯಾ ಕುಮಾರ್, ಶೆಹ್ಲಾ ರಶೀದ್ ಮತ್ತು ಇತರರೊಂದಿಗೆ ಕಾಣಬಹುದಾಗಿದೆ, ನಜ್ಮಾ ನಜೀರ್ ಅವರನ್ನು ಮುಸ್ಕಾನ್ ಖಾನ್ ಎಂದು ಗುರುತಿಸುವ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಆದಾಗ್ಯೂ, ಅದೇ ಫೋಟೋ 2019 ರಲ್ಲಿ ನಜ್ಮಾ ನಜೀರ್ ಅವರ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಕಂಡುಬಂದಿದೆ.

ಬುರ್ಖಾ ಧರಿಸಿ ಜೈ ಶ್ರೀರಾಮ್ ಎಂದು ಘೀಳಿಟ್ಟು ಓಡಿಬಂದ ಪುಂಡರ ಗುಂಪನ್ನು ಎದರಿಸಿದ ವಿದ್ಯಾರ್ಥಿನಿ  ಮುಸ್ಕಾನ್ ಖಾನ್ ರವರು ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನವನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ನಜ್ಮಾ ನಜೀರ್ ಅವರ ಫೋಟೋಗಳನ್ನು ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಎಂದು ತಪ್ಪಾಗಿ ಹಂಚಿಕೆ.

Share.

Comments are closed.

scroll