Fake News - Kannada
 

ತ್ರಿಪುರಾ ಹಿಂಸಾಚಾರದ ಸಂದರ್ಭದಲ್ಲಿ ಜಿಹಾದ್​ಗೆ ಕರೆ ನೀಡುವ ಮಸೀದಿಯ ದೃಶ್ಯಗಳೆಂದು ಘಟನೆಗೆ ಸಂಬಂಧವಿಲ್ಲದ ಸಿರಿಯಾದ ಹಳೆಯ ವಿಡಿಯೊ ಹಂಚಿಕೆಯಾಗಿದೆ

0

ಮುಸ್ಲಿಮರ ವಿರುದ್ಧದ ಹಿಂಸಾಚಾರವನ್ನು ಎದುರಿಸಲು ತ್ರಿಪುರಾದ ಮಸೀದಿಯೊಂದು ಜಿಹಾದ್​ಗೆ (ಪವಿತ್ರ ಯುದ್ಧಕ್ಕೆ) ಕರೆ ನೀಡಿದ ಇತ್ತೀಚಿನ ದೃಶ್ಯ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಪೋಸ್ಟ್​ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರವನ್ನು ಎದುರಿಸಲು ಜಿಹಾದ್​ಗೆ ಕರೆ ನೀಡುವ ಮಸೀದಿಯ ವೀಡಿಯೊ.

ಸತ್ಯಾಂಶ: ಪೋಸ್ಟ್​ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಫೆಬ್ರವರಿ 2020ರಲ್ಲಿ ಟರ್ಕಿಶ್ ಸೇನೆಯ ವಿರುದ್ಧ ಜಿಹಾದ್ ಘೋಷಿಸುವ ಇಡ್ಲಿಬ್​ನಲ್ಲಿರುವ ಮಸೀದಿಗಳ ಹಳೆಯ ದೃಶ್ಯಗಳನ್ನು ತೋರಿಸುತ್ತದೆ. ಪೋಸ್ಟ್​ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದಾಗಿದೆ ಮತ್ತು ತ್ರಿಪುರಾದಲ್ಲಿ ಇತ್ತೀಚಿನ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್​ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೊದ ಸ್ಕ್ರೀನ್​ಶಾಟ್​ಗಳ ರಿವರ್ಸ್ ಸರ್ಚ್ ಮಾಡಿದಾಗ, ಇದೇ ರೀತಿಯ ವಿಡಿಯೊವನ್ನು ಯೂಟ್ಯೂಬ್ ಬಳಕೆದಾರರು 07 ಫೆಬ್ರವರಿ 2020ರಂದು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಈ ಯೂಟ್ಯೂಬ್ ಚಾನೆಲ್ ಇದನ್ನು ಇಡ್ಲಿಬ್​ನಲ್ಲಿರುವ ಮಸೀದಿಯು ಜಿಹಾದ್​​ಗೆ (ಪವಿತ್ರ ಯುದ್ಧಕ್ಕೆ) ಕರೆ ನೀಡುತ್ತಿರುವುದು ಎಂದು ವರದಿ ಮಾಡಿದೆ. ಈ ಕೀವರ್ಡ್​ಗಳನ್ನು ಬಳಸಿಕೊಂಡು ನಾವು ವಿಶ್ವಾಸಾರ್ಹ ಮೂಲಗಳನ್ನು ಹುಡುಕಿದಾಗ, 07 ಫೆಬ್ರವರಿ 2020ರಂದು ಟರ್ಕಿಶ್ ಸುದ್ದಿ ವೆಬ್​ಸೈಟ್ ‘ಯೆನಿಯಾಕಿಟ್’ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ವೀಡಿಯೊ ಕಂಡುಬಂದಿದೆ. ಈ ಲೇಖನವನ್ನು “ಮಸೀದಿಗಳಿಂದ ಸಿರಿಯನ್ನರಿಗೆ ಕರೆ: ಜಿಹಾದ್​ಗೆ ನಾವು ಹೋಗೋಣ, ಯುವಜನರೇ, ಜಿಹಾದ್​ಗೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.

ಹಸನ್ ಸಿವ್ರಿ ಎಂಬ ಪತ್ರಕರ್ತ 07 ಫೆಬ್ರವರಿ 2020ರಂದು ಅದೇ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಹಸನ್ ಸಿವ್ರಿ, ಇಡ್ಲಿಬ್​ನಲ್ಲಿನ ವಿರೋಧಿಬಣದ ನಿಯಂತ್ರಣದಲ್ಲಿರುವ ಮಸೀದಿಗಳು, ಇಡ್ಲಿಬ್​ನ ಕಡೆಗೆ ಸಾಗುತ್ತಿರುವ ಟರ್ಕಿಶ್ ಸೇನಾ ಬೆಂಗಾವಲಿನ ವಿರುದ್ಧ ಹೋರಾಡಲು ಜಿಹಾದ್​ಗಾಗಿ ಜನರಿಗೆ ಕರೆ ನೀಡಿವೆ ಎಂದು ವರದಿ ಮಾಡಿದ್ದಾರೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್​ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದು ಮತ್ತು ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಇಲ್ಲಿನ ಘಟನೆಗೆ ಸಂಬಂಧವಿಲ್ಲದ ಸಿರಿಯಾದ ಹಳೆಯ ವೀಡಿಯೊವನ್ನು, “ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರದಲ್ಲಿ ಹೋರಾಡಲು ಜಿಹಾದ್​ಗೆ ಕರೆ ನೀಡುವ ಮಸೀದಿಯ ದೃಶ್ಯಗಳು” ಎಂದು ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll