Fake News - Kannada
 

ಮನೆಯಲ್ಲಿ ಕೋವಿಡ್ ಮೆಡಿಕಲ್ ಕಿಟ್ ಇಟ್ಟುಕೊಳ್ಳುವುದು ಅಗತ್ಯ ಎಂಬ ಸಂದೇಶ ಟಾಟಾ ಹೆಲ್ತ್‌ ನದಲ್ಲ

0

ಮನೆಯಲ್ಲಿ ಕೋವಿಡ್ ಮೆಡಿಕಲ್ ಕಿಟ್ ಇಟ್ಟುಕೊಳ್ಳುವುದು ಅಗತ್ಯ ಎಂಬ ಸಂದೇಶವನ್ನು ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ. ಸಂದೇಶದಲ್ಲಿ ಕೋವಿಡ್-19 ನ ಮೂರು ಹಂತಗಳು ಮತ್ತು ಅದರ ಚಿಕಿತ್ಸೆಗಾಗಿ ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಪರಿಕರಗಳನ್ನು ವಿವರಿಸಲಾಗಿದೆ. ಈ ಲಿಂಕ್ ಅನ್ನು ಟಾಟಾ ಹೆಲ್ತ್‌ ಕಳಿಸಿದ್ದು, ಲಿಂಕ್‌ನಲ್ಲಿರುವ ಶಿಫಾರಸ್ಸುಗಳನ್ನು ಟಾಟಾಹೆಲ್ತ್ ನೀಡಿದೆ ಎನ್ನಲಾಗಿದೆ. ಟಾಟಾಹೆಲ್ತ್ ಈ ರೀತಿಯ ಶಿಫಾರಸ್ಸಗಳನ್ನು ನೀಡಿದೆಯೇ ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಕೋವಿಡ್-19 ನ ಮೂರು ಹಂತಗಳು ಮತ್ತು ಅದರ ಚಿಕಿತ್ಸೆಗಾಗಿ ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಪರಿಕರಗಳ ಬಗ್ಗೆ ಟಾಟಾಹೆಲ್ತ್ ಸೂಚನೆ ನೀಡಿದೆ.

ನಿಜಾಂಶ: ಸಂದೇಶದೊಂದಿಗಿರುವ ಲಿಂಕ್ ತಮ್ಮ ಕಂಪನಿಯದ್ದಾಗಿದೆ, ಆದರೆ ಆ ಸಂದೇಶವನ್ನು ಕಂಪನಿ ಕಳಿಸಿಲ್ಲ ಎಂದು ಟಾಟಾ ಹೆಲ್ತ್ ಸ್ಪಷ್ಟಪಡಿಸಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಆ ಸಂದೇಶವನ್ನು ಟ್ವಿಟ್ಟರ್‌ ಬಳಕೆದಾರರೊಬ್ಬರು ಟಾಟಾ ಹೆಲ್ತ್ ಗೆ ಟ್ಯಾಗ್ ಮಾಡಿ ಸಂದೇಶದ ಅಧಿಕೃತತೆಯ ಬಗ್ಗೆ ಪ್ರಶ್ನಿಸಿದಾಗ ಆ ಸಂದೇಶವನ್ನು ತಾವು ಕಳಿಸಿಲ್ಲ ಎಂದು ಟಾಟಾ ಹೆಲ್ತ್ ಸ್ಪಷ್ಟಪಡಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಪರಿಶೀಲಿಸಲಾಗದ ಮಾಹಿತಿಯನ್ನು ನಮ್ಮ ವೆಬ್ ಸೈಟ್ ಲಿಂಕ್‌ ಜೊತೆಗೆ ಹಂಚಿಕೊಳ್ಳಲಾಗುತ್ತಿದೆ. ಆ ಸಂದೇಶಕ್ಕೂ ಟಾಟಾ ಹೆಲ್ತ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಎಚ್ಚರಿಕೆ ಸಂದೇಶವನ್ನು ಕಳುಹಿಸಿದೆ. “ದಯವಿಟ್ಟು ಪರಿಶೀಲಿಸಲಾಗದ ಈ ಮಾಹಿತಿಯನ್ನು ಬಳಸುವ ಮುನ್ನ ಕೋವಿಡ್ 19ಗೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಮಾಹಿತಿಗಾಗಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಆನ್‌ಲೈನ್‌ ನಲ್ಲಿ ವೈದ್ಯರನ್ನು ಸಂಪರ್ಕಿಸಿ.” ಎಂಬುದು ಟ್ವೀಟ್ ನ ಪಠ್ಯ.

ಸಂದೇಶದಲ್ಲಿರು ವಕೋವಿಡ್ -19ನ ಮೂರು ಹಂತಗಳ ಬಗ್ಗೆ ಹುಡುಕಿದಾಗ ಯಾವುದೇ ಖ್ಯಾತಸಂಸ್ಥೆ ಆ ಕುರಿತು ವಿವರಿಸಿರುವ ಮಾಹಿತಿ ಕಂಡುಬಂದಿಲ್ಲ. ಆದರೆ ಇತ್ತೀಚೆಗೆ ವಿಜ್ಞಾನಿಗಳು ವೈರಸ್ ರೋಗಿಯ ದೇಹದಲ್ಲಿ ಉಲ್ಬಣಗೊಳ್ಳುವ ಮೂರು ಹಂತಗಳ ಕುರಿತು ಚರ್ಚಿಸಿರುವುದು ಕಂಡುಬಂದಿದೆ.ಅದರಂತೆ

  • ಮೊದಲಹಂತ: (ಸೋಂಕಿನಹಂತ) ದೇಹದಲ್ಲಿ ವೈರಸ್  ಹಲವು ಪಟ್ಟು ಹೆಚ್ಚಳಗೊಳ್ಳುತ್ತವೆ ಮತ್ತು ಸಣ್ಣ ಮಟ್ಟದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದು ಸಾಮಾನ್ಯ ಶೀತ ಅಥವಾ ಜ್ವರ ಇರಬಹುದೇ ಎಂಬ ಗೊಂದಲ ಹುಟ್ಟಿಸುತ್ತದೆ.
  • ಎರಡನೇಹಂತ (ಶ್ವಾಸಕೋಸದ ಹಂತ): ಇದು ರೋಗನಿರೋಧಕ ಶಕ್ತಿಯ ಮೇಲೆ ತೀವ್ರ ದಾಳಿ ನಡೆಸುತ್ತದೆ.ಇದರಿಂದ ಪ್ರಾಥಮಿಕ ಹಂತದ ರೋಗಲಕ್ಷಣಗಳಾದ ಒಣಕೆಮ್ಮು, ಉಸಿರಾಟದ ಸಮಸ್ಯೆ ಮತ್ತು ಆಮ್ಲಜನಕ ಕೊರತೆ ಉಂಟಾಗುತ್ತದೆ.
  • ಮೂರನೇಹಂತ (ಉಲ್ಬಣಗೊಂಡ ಹಂತ): ರೋಗ ತೀವ್ರವಾಗಿ ಹೃದಯ, ಕಿಡ್ನಿ ಮತ್ತು ಇತರ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ.

ಅಲ್ಲದೇ ಸಂದೇಶದಲ್ಲಿ ಹೇಳಿಕೊಂಡಂತೆ, ಕೋವಿಡ್ 19 ನಿಯಂತ್ರಣಕ್ಕೆ ಹಬೆಯನ್ನು ಉಸಿರಾಟದ ಮೂಲಕ ಎಳೆದುಕೊಳ್ಳುವುದು, ಬಿಸಿನೀರಿನ ಮೂಲಕ ಗಾರ್ಗ್ಲಿಮ್ಗ್ ಮಾಡುವುದು ಮತ್ತಿತರ ವಿಧಾನಗಳ ಕೋವಿಡ್ ನಿಂದ ಗುಣಮುಖರಾಗಲು ಪರಿಣಾಮಕಾರಿ ಎಂಬುದರ  ಕುರಿತು ಫ್ಯಾಕ್ಟ್ಲಿ ಈಗಾಗಲೇ ಫ್ಯಾಕ್ಟ್ ಚೆಕ್ ನಡೆಸಿದೆ. ಸಂಬಂಧಿಸಿದ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಹುಡುಗನೊಬ್ಬ ಜಿಂಕೆಮರಿಯನ್ನು ರಕ್ಷಿಸುವ ಹಳೆಯ ಫೋಟೋಗಳನ್ನು ಅಸ್ಸಾಂನ ಯುವ ಬಾಹುಬಲಿ ಎಂದು ತಪ್ಪಾಗಿ ಬಿಂಬಿಸಲಾಗಿದೆ.

Share.

About Author

Comments are closed.

scroll