Fake News - Kannada
 

ರಾಮ ಮಂದಿರವನ್ನು ನಿರ್ಮಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿಲ್ಲ

0

ರಾಮ ಮಂದಿರವನ್ನು ನಿರ್ಮಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಆ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ರಾಮ ಮಂದಿರವನ್ನು ನಿರ್ಮಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.

ನಿಜಾಂಶ: ಕಪಿಲ್ ಸಿಬಲ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಅಂತಹ ಹೇಳಿಕೆಯನ್ನು ಅವರು ಮಾಡಿದ್ದಾರೆ ಎಂದು ಖಚಿತಪಡಿಸುವುದಕ್ಕೆ ಯಾವುದೇ ವಿಶ್ವಾಸಾರ್ಹ ಮೂಲದಿಂದ ಮಾಹಿತಿ ದೊರಕಿಲ್ಲ. ಅಯೋಧ್ಯೆಯ ರಾಮಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪಿನ ನಂತರ, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ಕಪಿಲ್ ಸಿಬಲ್ ಹೇಳಿದ್ದಾರೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಗೂಗಲ್ ನಲ್ಲಿ ‘ರಾಮಮಂದಿರವನ್ನು ನಿರ್ಮಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಪಿಲ್ ಸಿಬಲ್ ಅವರು ಹೇಳಿದರು’, ಎಂಬ ಕೀವರ್ಡ್ ಗಳೊಂದಿಗೆ ಹುಡುಕಿದಾಗ, ಅದರ ಹುಡುಕಾಟ ಫಲಿತಾಂಶಗಳಲ್ಲಿ ಯಾವುದೇ ಸಂಬಂಧ ಪಟ್ಟ ಮಾಹಿತಿ ಸಿಕ್ಕಿಲ್ಲ. ಕಪಿಲ್ ಸಿಬಲ್ ನಿಜವಾಗಿಯೂ ಅಂತಹ ಹೇಳಿಕೆ ನೀಡಿದ್ದರೆ, ಭಾರತದ ಎಲ್ಲಾ ಪ್ರಮುಖ ಪತ್ರಿಕೆಗಳು ಮತ್ತು ಚಾನೆಲ್ ಗಳು ಈ ಹೇಳಿಕೆಯನ್ನು ವರದಿ ಮಾಡಿರುತ್ತಿದ್ದವು. ಆದರೆ ಕಪಿಲ್ ಸಿಬಲ್ ಆ ಹೇಳಿಕೆ ನೀಡಿದ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ವರದಿ ಮಾಡಿಲ್ಲ. ಅಯೋಧ್ಯೆ ರಾಮಮಂದಿರ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ 2019 ರ ನವೆಂಬರ್ ನಲ್ಲಿ ನೀಡಿದ ತೀರ್ಪಿನ ನಂತರ, ಕಪಿಲ್ ಸಿಬಲ್ ಇದೇ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹೇಳುವ ಪೋಸ್ಟ್ ಗಳು (‘ನಾನು ಜೀವಂತವಾಗಿರುವವರೆಗೂ ರಾಮಮಂದಿರವನ್ನು ನಿರ್ಮಿಸಲು ಬಿಡುವುದಿಲ್ಲ’) ವೈರಲ್ ಆಗಿವೆ. ವಾಸ್ತವವಾಗಿ ಆ ಹೇಳಿಕೆ ಸುಳ್ಳೆಂದು ಫ್ಯಾಕ್ಟ್ಲಿ ಸಾಬೀತುಪಡಿಸಿದೆ ಮತ್ತು ಆ ಫ್ಯಾಕ್ಟ್-ಚೆಕ್ ವರದಿಯನ್ನು ಇಲ್ಲಿ ಓದಬಹುದು.

ಅಲ್ಲದೆ, ಅಯೋಧ್ಯೆ ರಾಮಮಂದಿರ ವಿವಾದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಮಾಧ್ಯಮಗಳೊಂದಿಗೆ ಮಾತನಾಡಿದ ಕಪಿಲ್ ಸಿಬಲ್, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ತೀರ್ಪು ನೀಡುವ ಮೊದಲು, ಕಪಿಲ್ ಸಿಬಲ್ ಹೇಳಿದ್ದು ‘ದೇವರು ಬಯಸಿದಾಗ ಮಾತ್ರ ರಾಮ ಮಂದಿರವನ್ನು ನಿರ್ಮಿಸಲಾಗುವುದು. ಮೋದಿ ಅವರ ಆಜ್ಞೆಯ ಮೇರೆಗೆ ಇದನ್ನು ನಿರ್ಮಿಸಲಾಗುವುದಿಲ್ಲ. ವಿಷಯ ನ್ಯಾಯಾಲಯದಲ್ಲಿದೆ’ ಎಂದು. ಕಪಿಲ್ ಸಿಬಲ್ ಅವರ ಆ ಹೇಳಿಕೆಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ರಾಮ ಮಂದಿರವನ್ನು ನಿರ್ಮಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿಲ್ಲ.

Share.

About Author

Comments are closed.

scroll