Fake News - Kannada
 

ಬಿಬಿಸಿ ಕಚೇರಿಯ ಹೊರಗಿನ ಆಂಟಿ – ವ್ಯಾಕ್ಸ್ ಪ್ರತಿಭಟನೆಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ನರೇಂದ್ರ ಮೋದಿ ಅವರ ಸಾಕ್ಷ್ಯಚಿತ್ರಕ್ಕೆ ಲಿಂಕ್ ಮಾಡಿ ರವಾನಿಸಲಾಗಿದೆ

0

ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆಗಳ ಕುರಿತು ಬಿಬಿಸಿ ಸಾಕ್ಷ್ಯಚಿತ್ರದ ಬೆಳಕಿನಲ್ಲಿ, ಅವರ ವಿವಾದಾತ್ಮಕ ಸಾಕ್ಷ್ಯಚಿತ್ರದ ವಿರುದ್ಧ ಲಂಡನ್‌ನ ಬಿಬಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ಬೃಹತ್ ಜನಸಮೂಹದ ವೀಡಿಯೊದೊಂದಿಗೆ ಸಾಮಾಜಿಕ  ಜಾಲತಾಣದ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನು ವಾಸ್ತವವಾಗಿ ಪರಿಶೀಲಿಸೋಣ.

ಕ್ಲೇಮ್ : ಜನರು ಸಾಕ್ಷ್ಯಚಿತ್ರದ ವಿರುದ್ಧ ಲಂಡನ್‌ನ BBC ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು.

ಫ್ಯಾಕ್ಟ್ : ಈ ದೃಶ್ಯಗಳು ಈ ತಿಂಗಳ ಆರಂಭದಲ್ಲಿ ಲಂಡನ್‌ನಲ್ಲಿರುವ BBC ಪ್ರಧಾನ ಕಛೇರಿಯ ಹೊರಗೆ ನಡೆಸಲಾದ ವ್ಯಾಕ್ಸ್ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿವೆ. ಸುದ್ದಿ ಸಂಸ್ಥೆಗಳು ಈ ಪ್ರತಿಭಟನೆಗಳನ್ನು ವರದಿ ಮಾಡಿವೆ. ಈ ಪ್ರತಿಭಟನೆಯ ಲೈವ್ ಸ್ಟ್ರೀಮ್ ದೃಶ್ಯಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಪ್ರಧಾನಿ ಮೋದಿ ಕುರಿತ ವಿವಾದಾತ್ಮಕ ಸಾಕ್ಷ್ಯಚಿತ್ರದ ವಿರುದ್ಧ ಭಾರತೀಯ ವಲಸೆಗಾರರು ಬಿಬಿಸಿಯ ಹೊರಗೆ ಪ್ರತಿಭಟನೆ ನಡೆಸಿರುವುದು ನಿಜವಾದರೂ ವೈರಲ್ ದೃಶ್ಯಗಳು ಈ ಪ್ರತಿಭಟನೆಗಳಿಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುತ್ತಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ವಿರೋಧಿಸಿ ಭಾರತೀಯ ವಲಸೆಗಾರರು ಲಂಡನ್‌ನ ಬಿಬಿಸಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದು ನಿಜ. ಮೋದಿಯನ್ನು ಕೆಟ್ಟದಾಗಿ ತೋರಿಸಿದ್ದಕ್ಕಾಗಿ ಬಿಬಿಸಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹಲವಾರು ಸುದ್ದಿ ಸಂಸ್ಥೆಗಳು ಈ ಪ್ರತಿಭಟನೆಗಳನ್ನು ವರದಿ ಮಾಡಿವೆ, ಅವುಗಳಲ್ಲಿ ಕೆಲವನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದಾಗಿದೆ.

ಆದಾಗ್ಯೂ, ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ಈ ಪ್ರತಿಭಟನೆಗಳಿಗೆ ಸಂಬಂಧಿಸಿಲ್ಲ. ಈ ದೃಶ್ಯಗಳು ವಾಸ್ತವವಾಗಿ ಲಂಡನ್‌ನಲ್ಲಿರುವ BBC ಪ್ರಧಾನ ಕಛೇರಿಯ ಹೊರಗೆ ಇತ್ತೀಚಿಗೆ ನಡೆಸಲಾದ  ಆಂಟಿ-ವ್ಯಾಕ್ಸರ್ಸ್ ಪ್ರತಿಭಟನೆಯನ್ನು ತೋರಿಸುತ್ತವೆ. ವೈರಲ್ ವೀಡಿಯೊವನ್ನು ಸರಿಯಾಗಿ ಗಮನಿಸಿದ ನಂತರ, ನಾವು ವಾಟರ್‌ಮಾರ್ಕ್ ಅನ್ನು ಗುರುತಿಸಬಹುದು, ಅದು ‘ORACLE FILMS’ ಎಂದು ತೋರಿಸುತ್ತದೆ. ಇದರಿಂದ ಒಂದು ಕ್ಯೂಲ್  ತೆಗೆದುಕೊಂಡು, ಸಂಬಂಧಿತ ಕೀವರ್ಡ್‌ಗಳೊಂದಿಗಿನ ಇಂಟರ್ನೆಟ್ ಹುಡುಕಾಟವು ‘ORACLE FILMS‘ ಹೆಸರಿನ Twitter ಹ್ಯಾಂಡಲ್‌ಗೆ ನಮ್ಮನ್ನು ಕರೆದೊಯುತ್ತದೆ. ಈ ಖಾತೆಯು ಇತರ ಕೆಲವು ದೃಶ್ಯಗಳ ಜೊತೆಗೆ, ಅದೇ ವೈರಲ್ ವೀಡಿಯೊವನ್ನು 23 ಜನವರಿ 2023 ರಂದು ಹಂಚಿಕೊಂಡಿದೆ. ಈ ಟ್ವೀಟ್‌ಗಳ ಪ್ರಕಾರ, ದೃಶ್ಯಗಳು ಆಂಟಿ-ವ್ಯಾಕ್ಸೆಸರ್‌ಗಳ (COVID-19) ‘ಲಸಿಕೆ ಗಾಯಗೊಂಡ ಮತ್ತು ದುಃಖಿತರನ್ನು ಗುರುತಿಸಿ’ ಪ್ರತಿಭಟನೆಗಳನ್ನು ತೋರಿಸುತ್ತವೆ.

ಇದಲ್ಲದೆ, ಕನ್ಸರ್ವೇಟಿವ್ ಪಕ್ಷದ ಸಂಸದ ಆಂಡ್ರ್ಯೂ ಬ್ರಿಡ್ಜೆನ್ ಸಹ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದರು ಮತ್ತು ಲಸಿಕೆಗಳ ಬಲಿಪಶುಗಳ ಪರವಾಗಿ ಮಾತನಾಡಿದರು. ಈ ಪ್ರತಿಭಟನೆಗಳ ಕೆಲವು ದೃಶ್ಯಗಳನ್ನು ಹಲವಾರು ಕಡೆ ವೀಕ್ಷಿಸಬಹುದು. ಪ್ರತಿಭಟನೆಯನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು. ತದನಂತರ BBC (ಇಲ್ಲಿ ಮತ್ತು ಇಲ್ಲಿ) ಹೊರಗಿನ ವ್ಯಾಕ್ಸ್ ವಿರೋಧಿ ಪ್ರತಿಭಟನೆಗಳ ಬಗ್ಗೆ ಸುದ್ದಿ ವರದಿಗಳನ್ನು ನೀಡಿತು. ದಿ ಇಂಡಿಪೆಂಡೆಂಟ್‌ನ ಅಂತಹ ಒಂದು ವರದಿಯು ಈ ಪ್ರತಿಭಟನೆಗಳನ್ನು 21 ಜನವರಿ 2023 ರಂದು ವರದಿ ಮಾಡಿದೆ. ಈ ವರದಿಯಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ವೈರಲ್ ವೀಡಿಯೊದಲ್ಲಿರುವಂತೆಯೇ ಅದೇ ಸ್ಥಳವನ್ನು ತೋರಿಸುತ್ತವೆ.

ಇವೆಲ್ಲವೂ ವೈರಲ್ ದೃಶ್ಯಗಳು ಲಂಡನ್‌ನ ಬಿಬಿಸಿ ಕಚೇರಿಯ ಹೊರಗೆ ಇತ್ತೀಚೆಗೆ ನಡೆದ ವ್ಯಾಕ್ಸ್ ವಿರೋಧಿ ಪ್ರತಿಭಟನೆಗಳಿಂದ ಬಂದವು ಮತ್ತು ಮೋದಿಯ ಕುರಿತು ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿಲ್ಲ ಎಂದು ಮೂಲಗಳು ತಿಳಿಸುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, BBC ಕಛೇರಿಯ ಹೊರಗಿನ ವ್ಯಾಕ್ಸ್ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಮೋದಿಯ ಕುರಿತಾದ ಸಾಕ್ಷ್ಯಚಿತ್ರಕ್ಕೆ ಲಿಂಕ್ ಮಾಡುವ ಮೂಲಕ ರವಾನಿಸಲಾಗಿದೆ.

Share.

Comments are closed.

scroll