Fake News - Kannada
 

ವಿಡಿಯೋದಲ್ಲಿನ ರೈಲು ಅದಾನಿಯದ್ದಲ್ಲ

0

ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ರೈಲಿನ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಇದು ಅದಾನಿ ರೈಲ್ವೇಸ್ ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಅದು ನಿಜವೇ ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ

ಪ್ರತಿಪಾದನೆ: ಅದಾನಿ ರೈಲ್ವೇಸ್‌ನ ವಿಡಿಯೋ

ನಿಜಾಂಶ: ವಿಡಿಯೋದಲ್ಲಿನ ರೈಲು ಅದಾನಿಯದ್ದಲ್ಲ. ಅದು ಭಾರತೀಯ ರೈಲ್ವೇ ಇಲಾಖೆಗೆ ಸೇರಿದೆ. ರೈಲಿನ ಮೇಲಿನ ಜಾಹೀರಾತು ಮಾತ್ರ ಅದಾನಿ ಗ್ರೂಪ್‌ಗೆ ಸಂಬಂಧಿಸಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದಲ್ಲಿನ ರೈಲಿನ ಮೇಲೆ ಪಶ್ಚಿಮ ರೈಲ್ವೆ, ವಡೋದರಾ ಎಂದು ಬರೆದಿದೆ. ಈ ಕೀವರ್ಡ್‌ಗಳನ್ನು ಬಳಸಿ ಹುಡುಕಾಡಿದಾಗ ಇದೇ ರೀತಿಯ ರೈಲಿನ ಮೇಲೆ ಅಕ್ಷರಗಳಿರುವ ವಿಡಿಯೋಗೆ ಸಂಬಂಧಿಸಿದ ಪಶ್ಚಿಮ ರೈಲ್ವೆಯ ಟ್ವೀಟ್‌ ಒಂದು ದೊರೆತಿದೆ. ಆ ಟ್ವೀಟ್‌ನಲ್ಲಿ “ಪಶ್ಚಿಮ ರೈಲ್ವೇಯು 10 ರೈಲು ಬೋಗಿಗಳಿಗೆ ಬ್ರಾಂಡಿಂಗ್ ಜಾಹೀರಾತು ಪಡೆದಿದೆ. ವಡೋದರಾದಲ್ಲಿ 10 ಎಲೆಕ್ಟ್ರಿಕ್ ಟ್ರೈನ್‌ಗಳಿಗೆ ಎಲೆಕ್ಟ್ರಿಕ್ ಲೋಕೊ ಶೆಡ್ ಹಾಕಲಾಗಿದ್ದು ಇದು 1.05 ಕೋಟಿ ಲಾಭ ತಂದುಕೊಡಲಿದೆ. ಅಲ್ಲದೇ 8 ಲಕ್ಷ ಬಣ್ಣ ಬಳಿಯುವ ಹಣ ಉಳಿಸಿದೆ” ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಾಗಿ ವಿಡಿಯೋದಲ್ಲಿನ ರೈಲು ಅದಾನಿ ಗ್ರೂಪ್‌ದ್ದಲ್ಲ ಎಂದು ತಿಳಿಯಬಹುದು. ಅದು ಭಾರತೀಯ ರೈಲ್ವೇಯ ರೈಲು ಆಗಿದ್ದು, ರೈಲಿನ ಮೇಲಿನ ಜಾಹೀರಾತು ಮಾತ್ರ ಅದಾನಿ ಗ್ರೂಪ್‌ಗೆ ಸಂಬಂಧಿಸಿದೆ. ಈ ಕುರಿತು ಪ್ರೆಸ್ ಇನ್‌ಫರ್ಮೇಶನ್ ಬ್ಯೂರೋ ಸಹ ಸ್ಪಷ್ಟೀಕರಣ ನೀಡಿದೆ.

ಅದಾನಿ ಗ್ರೂಪ್ ಅಲ್ಲದೆ ಇನ್ನಿತರ ಕಂಪನಿಗಳು ಸಹ ಭಾರತೀಯ ರೈಲ್ವೆಯ ರೈಲು ಭೋಗಿಗಳ ಮೇಲೆ ತಮ್ಮ ಜಾಹೀರಾತುಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಭಾರತೀಯ ರೈಲ್ವೇಯು ಟಿಕೆಟ್ ದರವಲ್ಲದ ಆದಾಯ ಹೆಸರಿನಲ್ಲಿ ವಾಣಿಜ್ಯ ಜಾಹೀರಾತುಗಳನ್ನು ಸ್ವೀಕರಿಸುತ್ತದೆ. ಕೋವಿಡ್ 19 ಕುರಿತ ಸಂದೇಶಗಳನ್ನು ಸಹ ರೈಲುಗಳಲ್ಲಿ ಪ್ರದರ್ಶಿಸಲಾಗುತ್ತದೆ. 2020ರ ಜುಲೈನಲ್ಲಿ ರೈಲ್ವೇ ಸಚಿವ ಪಿಯೂಶ್ ಗೋಯಲ್ ರೈಲ್ವೇ ಖಾಸಗೀಕರಣದ ಕುರಿತು ಹೇಳಿದ ಹೇಳಿಕೆಗಳನ್ನು ಇಲ್ಲಿ ನೋಡಬಹುದು.

ಒಟ್ಟಿನಲ್ಲಿ ವಿಡಿಯೋದಲ್ಲಿನ ರೈಲು ಅದಾನಿಯದ್ದಲ್ಲ. ಅದು ಭಾರತೀಯ ರೈಲ್ವೇ ಇಲಾಖೆಗೆ ಸೇರಿದೆ. ರೈಲಿನ ಮೇಲಿನ ಜಾಹೀರಾತು ಮಾತ್ರ ಅದಾನಿ ಗ್ರೂಪ್‌ಗೆ ಸಂಬಂಧಿಸಿದೆ.

Share.

About Author

Comments are closed.

scroll