Fake News - Kannada
 

ಮುಂಬೈನ ಲಾಲ್‌ಬೌಚಾ ರಾಜ ಗಣಪತಿ ಮಂಟಪದ ದೃಶ್ಯಗಳೆಂದು ಸ್ಪೇನ್‌ನ ‘ಫೆಸ್ಟಿವಲ್ ಆಫ್ ಸ್ಯಾನ್ ಫರ್ಮಿನ್’ ನ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ದಕ್ಷಿಣ ಮುಂಬೈನಲ್ಲಿರುವ ಲಾಲ್‌ಬಾಗ್ಚಾ ರಾಜ (ಗಣಪತಿ) ಮಂಟಪಕ್ಕೆ ಸಂಬಂಧಿಸಿದ ದೃಶ್ಯಗಳು ಎನ್ನುವ ವೀಡಿಯೊ ಕ್ಲಿಪ್‌ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ, ಈ ವೀಡಿಯೊದ ಹಿಂದಿನ ಸತ್ಯಾಸತ್ಯತೆಯನ್ನು ತಿಳಿಯೋಣ. 

ಕ್ಲೇಮ್: ಮುಂಬೈನ ಲಾಲ್‌ಬೌಚಾ ರಾಜ (ಗಣೇಶ) ಮಂಟಪಕ್ಕೆ ಸಂಬಂಧಿಸಿದ ದೃಶ್ಯಗಳು.

ಫ್ಯಾಕ್ಟ್: ವೈರಲ್ ವೀಡಿಯೋದಲ್ಲಿನ ಮೊದಲ ಕ್ಲಿಪ್ ಮುಂಬೈನ ಲಾಲ್ಬೌಚಾ ರಾಜ (ಗಣೇಶ) ಮಂಟಪಕ್ಕೆ ಸಂಬಂಧಿಸಿದ ದೃಶ್ಯಗಳಲ್ಲ. ಬದಲಾಗಿ, ಇದು ಸ್ಯಾನ್ ಫರ್ಮಿನ್ ಫೆಸ್ಟಿವಲ್ ದೃಶ್ಯಗಳನ್ನು ತೋರಿಸುತ್ತಿದೆ. ಇದನ್ನು  ಪ್ಯಾಂಪ್ಲೋನಾ, ನವಾರ್ರೆ, ಸ್ಪೇನ್‌ನಲ್ಲಿ ವಾರ್ಷಿಕ ಹಬ್ಬವಾಗಿ ಆಚರಿಸಲಾಗುತ್ತದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಕ್ಲೈಮ್ ಅನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸೀರಿಚಿಂಗ್ ನಡೆಸಿದ್ದೇವೆ. ಇದು 17 ಫೆಬ್ರವರಿ 2024 ರಂದು ‘ಟ್ರಿಪ್‌ಸ್ಕೌಟ್’ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಈ ಇನ್ಸ್ಟಾಗ್ರಾಮ್ ವೀಡಿಯೊವು ವೈರಲ್ ವೀಡಿಯೊದಲ್ಲಿರುವ ದೃಶ್ಯಗಳನ್ನು ಹೋಲುವ ಕ್ಲಿಪಿಂಗ್ಸ್  ಅನ್ನು ಒಳಗೊಂಡಿದೆ. ಇಲ್ಲಿ ನೀಡಿದ ವಿವರಣೆಯ ಪ್ರಕಾರ, ಈ ದೃಶ್ಯಗಳು ಸ್ಪೇನ್‌ನ ಪಾಂಪ್ಲೋನಾದಲ್ಲಿ ವಾರ್ಷಿಕ ಹಬ್ಬವಾಗಿ ನಡೆಯುವ ‘ಫೆಸ್ಟಿವಲ್ ಆಫ್ ಸ್ಯಾನ್ ಫೆರ್ಮಿನ್‘ಗೆ ಸಂಬಂಧಿಸಿವೆ ಮತ್ತು ಸ್ಪ್ಯಾನಿಷ್ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ. ಪ್ಯಾಂಪ್ಲೋನಾ ಸ್ಪೇನ್‌ನ ನವಾರ್ರೆ ಪ್ರಾಂತ್ಯದ ರಾಜಧಾನಿಯಾಗಿದೆ.

ಪ್ಯಾಂಪ್ಲೋನಾ ಫಿಯೆಸ್ಟಾ ಹೆಸರಿನ ಯುಟ್ಯೂಬ್  ಚಾನಲ್ 02 ಜನವರಿ 2024 ರಂದು ಅದೇ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ. ವೀಡಿಯೊದಲ್ಲಿನ ಶೀರ್ಷಿಕೆಯ ಪ್ರಕಾರ, ಇದುಪ್ಯಾಂಪ್ಲೋನಾ, ನವಾರ್ರೆ, ಸ್ಪೇನ್ ನಲ್ಲಿ ನಡೆದ  ‘ಫೆಸ್ಟಿವಲ್ ಆಫ್ ಸ್ಯಾನ್ ಫರ್ಮಿನ್’ ನಲ್ಲಿ ಚುಪಿನಾಜೋ ಎನ್ನುವ ಬುಲ್ಸ್ ಓಟದ ವಾರದ ಉದ್ಘಾಟನಾ ಸಮಾರಂಭವನ್ನು ತೋರಿಸುತ್ತದೆ.  ಮತ್ತೊಂದು Instagram ಖಾತೆ @pamplona_fiesta, ಸಹ ಅದೇ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಈ ದೃಶ್ಯಗಳು ಸ್ಯಾನ್ ಫೆರ್ಮಿನ್ ಫೆಸ್ಟಿವಲ್ ನ  ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದ್ದು, ಪ್ಯಾಂಪ್ಲೋನಾದ ಸಿಟಿ ಹಾಲ್ ಬಳಿ ನೆರೆದಿದ್ದ ಜನ ಸಮೂಹವನ್ನು ತೋರಿಸುತ್ತಿದೆ ಎಂದು ತಿಳಿಸಿದೆ. 

ತದನಂತರ ನಾವು ‘ಫೆಸ್ಟಿವಲ್ ಆಫ್ ಸ್ಯಾನ್ ಫರ್ಮಿನ್’ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಸಂಬಂಧಿತ ಕೀವರ್ಡ್ನಗಳೊಂದಿಗೆ ಹುಡುಕಾಡಿದ್ದೇವೆ. ಈ ಮೂಲಕ ಈವೆಂಟ್ ಕುರಿತು ಹಲವಾರು ಸುದ್ದಿ ಲೇಖನಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡಿದ್ದೇವೆ. ಈ ಲೇಖನಗಳ ಪ್ರಕಾರ, ಹಬ್ಬವನ್ನು ಪ್ರತಿ ವರ್ಷ ಜುಲೈ 06 ರಿಂದ 14 ರವರೆಗೆ ಆಚರಿಸಲಾಗುತ್ತದೆ, ಇದರ ಪ್ರಮುಖ ಸೆಳೆತವೆಂದರೆ ‘ಬುಲ್ಸ್ ಓಟ’ (ಇಲ್ಲಿ, ಇಲ್ಲಿ).

ನಾವು ನಂತರ ಗೂಗಲ್ ಮ್ಯಾಪ್ ಅನ್ನು ಬಳಸಿಕೊಂಡು ಪ್ಯಾಂಪ್ಲೋನಾದ ಸಿಟಿ ಹಾಲ್ ಅನ್ನು ಜಿಯೋಲೊಕೇಟೆಡ್ ಮಾಡಿದೆವು. ವೀಡಿಯೋ ಕ್ಲಿಪ್‌ನಲ್ಲಿರುವ ದೃಶ್ಯಾವಳಿಗಳನ್ನು ಪಾಂಪ್ಲೋನಾದ ಸಿಟಿ ಹಾಲ್‌ನೊಂದಿಗೆ ಹೋಲಿಸಿದಾಗ, ವೈರಲ್ ಕ್ಲಿಪ್ ಪ್ಯಾಂಪ್ಲೋನಾದ ಸಿಟಿ ಹಾಲ್ ಅನ್ನು ಒಳಗೊಂಡಿದೆ ಮತ್ತು ‘ಫೆಸ್ಟಿವಲ್ ಆಫ್ ಸ್ಯಾನ್ ಫರ್ಮಿನ್’ಗೆ ಸಂಬಂಧಿಸಿದ ಹೆಚ್ಚಿನ ವೀಡಿಯೊಗಳಿಗೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ.  ಪಾಂಪ್ಲೋನಾದ ಸಿಟಿ ಹಾಲ್ ಅನ್ನು ಇಲ್ಲಿ ಕಾಣಬಹುದು. ಈ ಎಲ್ಲಾ ಮಾಹಿತಿಯಿಂದ, ವೈರಲ್ ವೀಡಿಯೊ ಕ್ಲಿಪ್ ಮುಂಬೈನ ಲಾಲ್ಬೌಚಾ ರಾಜ (ಗಣೇಶ) ಮಂಟಪದ ದೃಶ್ಯಗಳನ್ನು ತೋರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಾಗಿ, ಇದು ಸ್ಯಾನ್ ಫರ್ಮಿನ್ ಫೆಸ್ಟಿವಲ್ ನ  ದೃಶ್ಯಗಳನ್ನು ತೋರಿಸುತ್ತದೆ, ಇದನ್ನು ವಾರ್ಷಿಕವಾಗಿ ಪ್ಯಾಂಪ್ಲೋನಾ, ನವಾರ್ರೆ, ಸ್ಪೇನ್‌ನಲ್ಲಿ ಆಚರಿಸಲಾಗುತ್ತದೆ. 2024 ರ ಲಾಲ್‌ಬೌಚಾ ರಾಜ (ಗಣೇಶ) ಮಂಟಪಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಪೇನ್‌ನ ‘ಫೆಸ್ಟಿವಲ್ ಆಫ್ ಸ್ಯಾನ್ ಫರ್ಮಿನ್’ ನ ವೀಡಿಯೊವನ್ನು ಮುಂಬೈನ ಲಾಲ್‌ಬೌಚಾ ರಾಜ ಗಣಪತಿ ಮಂಟಪಕ್ಕೆ ಸಂಬಂಧಿಸಿದ ದೃಶ್ಯಗಳಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll