Fake News - Kannada
 

ಕುಂಭಮೇಳದಲ್ಲಿ ಸಿದ್ಧ ಸಂತರು ಬೆಂಕಿಯಲ್ಲಿ ಮಲಗಿದರು ಸಹ ಸುಟ್ಟು ಹೋಗಲಿಲ್ಲ ಎಂದು ಫೈರ್ ಯೋಗಿ ಸಾಕ್ಷ್ಯಚಿತ್ರದ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ಕುಂಭಮೇಳದಲ್ಲಿ 400 ಸಿದ್ಧ ಸಂತರು ತಮ್ಮ ದೇಹವನ್ನು ಬೆಂಕಿಯ ದೇವತೆಗೆ ಅರ್ಪಿಸಿಕೊಳ್ಳುತ್ತಿದ್ದರೂ ಅವರಿಗೆ ಏನೂ ಆಗಲಿಲ್ಲ ಎಂಬುದನ್ನು ಬಿಬಿಸಿ ವೀಡಿಯೊ ಮಾಡಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಬೆಂಕಿ ಹಾಕಿದ ಕಟ್ಟಿಗೆಯ ಮೇಲೆ ಮಲಗಿರುವ ಸಂತರಿಗೆ ಏನೂ ಆಗಲಿಲ್ಲ ಮತ್ತು ಬೆಂಕಿ ನಂದಿಸುವ ರಾಸಾಯನಿಕಗಳು ಸಹ ಅಲ್ಲಿ ಸಿಕ್ಕಿಲ್ಲ ಎಂದು ಪೋಸ್ಟ್ ಮೂಲಕ ಪ್ರತಿಪಾದಿಸಲಾಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕುಂಭಮೇಳದ ಸಮಯದಲ್ಲಿ ಸುಮಾರು 400 ಸಿದ್ಧ ಸಂತರು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುತ್ತಿರುವುದನ್ನು ಬಿಬಿಸಿ ತಂಡವು ವಿಡಿಯೋ ಮಾಡಿದೆ.

ನಿಜಾಂಶ: ಈ ವೀಡಿಯೊವನ್ನು ಕುಂಭಮೇಳದಲ್ಲಿ ಬಿಬಿಸಿ ತಂಡ ಚಿತ್ರೀಕರಣ ಮಾಡಿಲ್ಲ; ಈ ವಿಡಿಯೋ ತಂಜಾವೂರಿನಲ್ಲಿ ಯೋಗಿ ರಾಮಬಾಹು ಸ್ವಾಮಿ ನಡೆಸಿದ ಅಪರೂಪದ ಅಗ್ನಿ ಆಚರಣೆಯ ಕುರಿತು ‘ದಿ ಫೈರ್ ಯೋಗಿ’ಎಂಬ ಸಾಕ್ಷ್ಯತ್ರಿವಾಗಿದೆ.  ತಮಿಳುನಾಡಿನಲ್ಲಿ ಯೋಗಿಯ ಪ್ರಯಾಣದ ವೀಡಿಯೊ ಇದಾಗಿದೆ. ಕುಂಭಮೇಳದ ಸಮಯದಲ್ಲಿ ಸುಮಾರು 400 ಸಿದ್ಧ ಸಂತರು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುತ್ತಿರುವುದನ್ನು ಬಿಬಿಸಿ ತಂಡವು ವೀಡಿಯೋ ಚಿತ್ರೀಕರಣ ಮಾಡಿದೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಪೋಸ್ಟ್ ಮೂಲಕ ಹೇಳುತ್ತಿರುವುದು ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್ ತೆಗೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ದೃಶ್ಯಗಳೊಂದಿಗೆ ಯೂಟ್ಯೂಬ್ ವೀಡಿಯೊವನ್ನು ಕಂಡುಬಂದಿದೆ. ಮೊದಲ ಮೂರು ನಿಮಿಷಗಳು ಈ ಯೂಟ್ಯೂಬ್ ವೀಡಿಯೋದಿಂದ ತೆಗೆದುಕೊಂಡು ವೈರಲ್ ಮಾಡಿರುವುದನ್ನು ಕಾಣಬಹುದಾಗಿದೆ. ‘ದಿ ಫೈರ್ ಯೋಗಿ’ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊವನ್ನು 23 ಮಾರ್ಚ್ 2011 ರಂದು ಅಪ್‌ಲೋಡ್ ಮಾಡಲಾಗಿದೆ. ಆ ಯೂಟ್ಯೂಬ್ ವೀಡಿಯೋ ವಿವರಣೆಯಲ್ಲಿ, ‘ದಿ ಫೈರ್ ಯೋಗಿ’ ಒಂದು ವಿಶಿಷ್ಟವಾದ ಉಸಿರಾಟದ ತಂತ್ರವನ್ನು ಬಳಸಿಕೊಂಡು ಮಾಡಲು ಸಾಧ್ಯವಾಗುವ ಯೋಗಿಯ ಪ್ರಯಾಣದ ಸಾಕ್ಷ್ಯಚಿತ್ರವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಕುಂಭಮೇಳ ಅಥವಾ ಬಿಬಿಸಿ ತಂಡವು ಸಿದ್ಧ ಸಂತರನ್ನು ಚಿತ್ರೀಕರಿಸುವುದನ್ನು ವೀಡಿಯೊ ಉಲ್ಲೇಖಿಸಿಲ್ಲ.

‘ದಿ ಫೈರ್ ಯೋಗಿ’ ಕುರಿತ ವೀಡಿಯೊಗಳು ಯೂಟ್ಯೂಬ್‌ನಲ್ಲಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು

‘ದಿ ಫೈರ್ ಯೋಗಿ’ ಎಂದು ಗೂಗಲ್ ಸರ್ಚ್ ಮಾಡಿದರೆ ಡಾಕ್ಯುಮೆಂಟರಿಯಲ್ಲಿ ತಂಜಾವೂರಿನಲ್ಲಿ ಯೋಗಿ ರಾಮಬಾಹು ಸ್ವಾಮಿ ನಡೆಸಿದ ಅಪರೂಪದ ಅಗ್ನಿಹೋತ್ರ ಆಚರಣೆಯ ಬಗ್ಗೆ ಮಾಹಿತಿ ಸಿಕ್ಕಿದೆ. 63 ವರ್ಷದ ಯೋಗಿ ಅವರು ಕಳೆದ 45 ವರ್ಷಗಳಿಂದ 1000 ದಿನಗಳ ಕಾಲ ಅಗ್ನಿ ಆಚರಣೆಯನ್ನು ಅಭ್ಯಾಸ ಮಾಡಿದ್ದಾರೆ ಮತ್ತು ವಿಶಿಷ್ಟವಾದ ಉಸಿರಾಟದ ತಂತ್ರವನ್ನು ಬಳಸಿಕೊಂಡು ಇದನ್ನು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

ರಾಮಬಾಹು ಸ್ವಾಮಿಯ ಕುರಿತು ಆಜ್ ತಕ್ ವಿಡಿಯೋ ವರದಿಯನ್ನೂ ಮಾಡಿದೆ. ಆದರೆ, ಕುಂಭಮೇಳದ ಸಮಯದಲ್ಲಿ ಸುಮಾರು 400 ಸಿದ್ಧ ಸಂತರು ತಮ್ಮ ದೇಹವನ್ನು ಅಗ್ನಿ ದೇವಿಗೆ ಅರ್ಪಿಸುತ್ತಿರುವುದನ್ನು ಬಿಬಿಸಿ ತಂಡವು ವೀಡಿಯೊ ಚಿತ್ರೀಕರಣ ಮಾಡಿದೆ ಎಂದು ಸೂಚಿಸಲು ನಮಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

ಒಟ್ಟಾರೆಯಾಗಿ ತಂಜಾವೂರಿನ ಯೋಗಿಯ ಮೇಲೆ ಚಿತ್ರೀಕರಿಸಿದ  ‘ದಿ ಫೈರ್ ಯೋಗಿ’ ಸಾಕ್ಷ್ಯಚಿತ್ರದ  ದೃಶ್ಯಗಳನ್ನು ಬಳಸಿಕೊಂಡು  ಕುಂಭಮೇಳದಲ್ಲಿ ಸಿದ್ಧ ಸಂತರು ಬೆಂಕಿಯಲ್ಲಿ ಮಲಗಿದರು ಸುಟ್ಟು ಹೋಗಲಿಲ್ಲ ಎಂದು ಬಿಬಿಸಿ ವಿಡಿಯೋ ಮಾಡಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll