ರೋಹಿಂಗ್ಯಾ ಮುಸ್ಲಿಮರು ಹಿಂದೂ ಮಕ್ಕಳನ್ನು ಅಪಹರಿಸಿ ಸಿಕ್ಕಿಬಿದ್ದಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಚಿಕ್ಕ ಮಗುವನ್ನು ಸೂಟ್ ಕೇಸ್ ನಲ್ಲಿಟ್ಟು ಅಪಹರಿಸಿದ ವ್ಯಕ್ತಿಯನ್ನು ಕೆಲವರು ಹಿಡಿದು ಪ್ರಶ್ನಿಸುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಪ್ರತಿಪಾದನೆ: ರೋಹಿಂಗ್ಯಾ ಮುಸ್ಲಿಮರು ಹಿಂದೂ ಮಕ್ಕಳನ್ನು ಅಪಹರಿಸಿದಾಗ ಸಿಕ್ಕಿಬಿದ್ದಿರುವ ದೃಶ್ಯಗಳು.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ನಟಿಸಿದ ವಿಡಿಯೊ ಆಗಿದೆ. ಸಾರ್ವಜನಿಕರಿಗೆ ಮನರಂಜನೆ ಮತ್ತು ಶಿಕ್ಷಣ ನೀಡುವ ಏಕೈಕ ಉದ್ದೇಶದಿಂದ ಈ ವೀಡಿಯೊವನ್ನು ರಚಿಸಲಾಗಿದೆ. ಈ ವಿಡಿಯೋವನ್ನು ರಾಜು ಭಾರತಿ ಎಂಬ ಯೂಟ್ಯೂಬ್ ಬಳಕೆದಾರರು ರಚಿಸಿದ್ದಾರೆ ಮತ್ತು ಅವರ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದರೆ, ಹಲವಾರು ವಿಡಿಯೋಗಳು ಫೇಸ್‌ಬುಕ್‌ನಲ್ಲಿ ಕಂಡುಬಂದಿವೆ. ವೀಡಿಯೊವೊಂದರಲ್ಲಿ ಕೆಂಪು ಟೋಪಿ ಧರಿಸಿದ ವ್ಯಕ್ತಿಯು ಜನಪ್ರಿಯ ಯೂಟ್ಯೂಬರ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ವಿವರಗಳನ್ನು ಆಧರಿಸಿ, ಯೂಟ್ಯೂಬ್ ಹುಡುಕಾಟದಲ್ಲಿ ವೀಡಿಯೊದಲ್ಲಿ ಕಂಡುಬರುವ ಕೆಂಪು ಟೋಪಿ ಧರಿಸಿದ ವ್ಯಕ್ತಿ ‘ಭಾರತಿ ಪ್ರಾಂಕ್’ ಯೂಟ್ಯೂಬ್ ಚಾನೆಲ್‌ನ ಮ್ಯಾನೇಜರ್ ರಾಜು ಭಾರತಿ ಎಂದು ತಿಳಿದುಬಂದಿದೆ. ರಾಜು ಭಾರತಿ ಅವರ ಅಧಿಕೃತ Instagram ಮತ್ತು Facebook ಪುಟಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ರಾಜು ಭಾರತಿ ಅವರು 27 ಡಿಸೆಂಬರ್ 2021 ರಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡ ಅದೇ ದೃಶ್ಯಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಡಿಯೋದಲ್ಲಿನ ದೃಶ್ಯಗಳು ಕಾಲ್ಪನಿಕ ಮತ್ತು ಮನರಂಜನೆ ಮತ್ತು ಸಾರ್ವಜನಿಕ ಜಾಗೃತಿಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿದೆ ಎಂದು ವಿವರಣೆಯು ಸ್ಪಷ್ಟವಾಗಿ ಹೇಳುತ್ತದೆ. ಮುಖ್ಯವಾಗಿ ವಿಡಿಯೋದಲ್ಲಿ ಎಲ್ಲಿಯೂ ಅಪಹರಣಕಾರ ಮುಸ್ಲಿಂ ಎಂದು ಹೇಳಿಲ್ಲ.
ರಾಜು ಭಾರತಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ಅನೇಕ ತಮಾಷೆ ಮತ್ತು ಸ್ಕ್ರಿಪ್ಟ್ ಮಾಡಿದ ನಾಟಕಿಯ ವೀಡಿಯೊಗಳನ್ನು ಪ್ರಕಟಿಸಿದ್ದಾರೆ. ಆ ವೀಡಿಯೊಗಳನ್ನು ಇಲ್ಲಿ, ಇಲ್ಲಿ ವೀಕ್ಷಿಸಬಹುದು. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ (ನಟಿಸಲಾಗಿದೆ) ಎಂದು ಹೇಳಬಹುದು.
ಇದುವರೆಗೂ ಇದೇ ರೀತಿಯ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಪ್ರತಿಪಾದನೆಯೊಂದಿಗೆ ಹಂಚಿಕೊಂಡಾಗ, ಆ ಪೋಸ್ಟ್‌ಗಳಿಗೆ ಸಂಬಂಧಿಸಿದ ಸತ್ಯ ಪರಿಶೀಲನೆ ಲೇಖನಗಳನ್ನು FACTLY ಪ್ರಕಟಿಸಿದೆ. ಆ ಲೇಖನಗಳನ್ನು ಇಲ್ಲಿ, ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ, ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ರೋಹಿಂಗ್ಯಾ ಮುಸ್ಲಿಮರು ಹಿಂದೂ ಮಕ್ಕಳನ್ನು ಅಪಹರಿಸುವ ದೃಶ್ಯಗಳು ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.