ಸುಶಾಂತ್ ಸಿಂಗ್ ರಜಪೂತ್ ಅವರನ್ನು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಕ್ರಿಕೆಟರ್ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಿಕೊಂಡಿರುವ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಡಿಟ್ ಮಾಡಲಾದ ಟ್ವೀಟ್ ಎಂದು ಫ್ಯಾಕ್ಟ್ಲಿ ಪತ್ತೆ ಹಚ್ಚಿದೆ. ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕ್ರಿಕೆಟರ್ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿಲ್ಲ. ಖ್ಯಾತ ಬಾಲಿವುಡ್ ನಟರಾದ ಸುಶಾಂತ್ ಸಿಂಗ್ ರಜಪೂತ್ 2020ರ ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಸುಶಾಂತ್ ಅವರ ಅಕಾಲಿಕ ಮರಣಕ್ಕೆ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ತಮ್ಮ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಅವರನ್ನು ಪ್ರತಿಭಾನ್ವಿತ ನಟ ಎಂದು ಉಲ್ಲೇಖಿಸಿದ್ದಾರೆ. ಯಾರೋ ಆ ಟ್ವೀಟ್ ಅನ್ನು ಎಡಿಟ್ ಮಾಡಿ ‘ನಟ’ ಎಂಬ ಪದದ ಬದಲಿಗೆ ‘ಕ್ರಿಕೆಟರ್’ ಎಂದು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉಳಿದ ಎಲ್ಲಾ ಪದಗಳು ಮೂಲ ಟ್ವೀಟ್ ನಲ್ಲಿ ಇರುವಂತೆಯೇ ಇವೆ.
ಮೂಲಗಳು:
ಪ್ರತಿಪಾದನೆ –
1. ಫೇಸ್ಬುಕ್ ಪೋಸ್ಟ್ (ಆರ್ಕೈವ್)
ನಿಜಾಂಶ –
1. ರಾಹುಲ್ ಗಾಂಧಿ ಟ್ವೀಟ್ – https://twitter.com/RahulGandhi/status/1272167327459508224
“ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ವಿಷಾದನೀಯ. ಯುವ ಪ್ರತಿಭಾನ್ವಿತ ನಟ ಇಷ್ಟು ಬೇಗ ನಿರ್ಗಮಿಸಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳು” (ಟ್ವಿಟರ್ ಪಠ್ಯ)