Fake News - Kannada
 

ಈ ವೈರಲ್ ವೀಡಿಯೊದಲ್ಲಿ ಕಂಡುಬರುವ ಮಹಿಳೆ ಕೋಲ್ಕತ್ತಾದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಅಲ್ಲ

0

ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಹೋಸ್ಪಿಟಲ್ನಲ್ಲಿ ಇತ್ತೀಚೆಗೆ ಟ್ರೈನಿ ಡಾಕ್ಟರ್ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯ ಹಿನ್ನೆಲೆಯಲ್ಲಿ (09 ಆಗಸ್ಟ್ 2024), ಗಾಯಗಳೊಂದಿಗೆ ಬಾಲಕಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಇದರ ಹಿಂದಿರುವ ನಿಜಾಂಶವನ್ನು ತಿಳಿಯೋಣ. 

ಕ್ಲೇಮ್: ಕೋಲ್ಕತ್ತಾದಲ್ಲಿ ಇತ್ತೀಚೆಗೆ ಚಾಕುವಿನಿಂದ ಇರಿದು ಕೊಲ್ಲಲ್ಪಟ್ಟ ಬಾಲಕಿಯ ಸಾವಿನ ಕೊನೆಯ ಕ್ಷಣದಲ್ಲಿ ತೆಗೆದ ವೀಡಿಯೊ.

ಫ್ಯಾಕ್ಟ್: ಅತ್ಯಾಚಾರಕ್ಕೊಳಗಾದ ಬಾಲಕಿಯ ಮೂಲ ಫೋಟೋ ವೈರಲ್ ವೀಡಿಯೊದಲ್ಲಿರುವ ಹುಡುಗಿಯ ಹೋಲಿಕೆಗಳಿಗೆ ಹೋಲಿಕೆಯಾಗುವುದಿಲ್ಲ. ಪೊಲೀಸರಾಗಲೀ ಅಥವಾ ಮಾಧ್ಯಮಗಳಾಗಲೀ ಕೊನೆಯ ಕ್ಷಣದ ಯಾವುದೇ ವೀಡಿಯೊವನ್ನು ಉಲ್ಲೇಖಿಸಿಲ್ಲ. ಕೋಲ್ಕತಾ ಪೊಲೀಸರ ಪ್ರಕಾರ, ಆಕೆಯ ಗಾಯಗಳ ತೀವ್ರತೆ ಮತ್ತು ಅವಳು ಸಾವನ್ನಪ್ಪಿದ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ದಾಳಿಯ ಸಮಯದಲ್ಲಿ ಅಥವಾ ನಂತರ ಅವಳು ತನ್ನನು ರೆಕಾರ್ಡ್ ಮಾಡುವಂತಹ ಸಾಧ್ಯತೆಯಿಲ್ಲ. ವೀಡಿಯೊದಲ್ಲಿರುವ ವ್ಯಕ್ತಿಯ ಹೆಸರನ್ನು ಜೀನತ್ ರೆಹಮಾನ್ ಎಂದು ಪೋಸ್ಟ್ ಹಂಚಿಕೊಂಡಿರುವುದನ್ನು ಎಂದು ನಾವು ಗಮನಿಸಿದ್ದೇವೆ. ಆದಾಗ್ಯೂ, ಜೀನತ್ ರೆಹಮಾನ್ ಅವರ ಇನ್ಸ್ಟಾಗ್ರಾಮ್ ಪೇಜ್ ಮತ್ತು ಫೇಸ್ಬುಕ್ ಪೇಜ್  ಲಭ್ಯವಿಲ್ಲ. ಆದರೆ, ನಾವು ಅವರ ಯೂಟ್ಯೂಬ್ ಚಾನೆಲ್ನ ವೀಡಿಯೊಗಳು ಮತ್ತು ಫೋಟೋಗಳನ್ನು ಪರಿಶೀಲಿಸಿದಾಗ, ವೈರಲ್ ವೀಡಿಯೊದಲ್ಲಿ ಜೀನತ್ ರೆಹಮಾನ್ ಮತ್ತು ವೈರಲ್ ವಿಡಿಯೋದಲ್ಲಿರುವ ಮಹಿಳೆಯ ನಡುವೆ ಹೋಲಿಕೆಗಳಿವೆ ಎಂದು ಗಮನಿಸಿದ್ದೇವೆ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಆಗುತ್ತಿರುವ ವೀಡಿಯೊವನ್ನು ಸರಿಯಾಗಿ ಗಮನಿಸಿದಾಗ, ಈ ವೀಡಿಯೊವನ್ನು ಮೊಟ್ಟಮೊದಲು 15 ಆಗಸ್ಟ್ 2024 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ನೋಡಿದರೆ, ಅತ್ಯಾಚಾರಕ್ಕೊಳಗಾದ ಬಾಲಕಿಯ ಮೂಲ ಫೋಟೋ ಮತ್ತು ವೈರಲ್ ವೀಡಿಯೊದಲ್ಲಿನ ಹುಡುಗಿಗೆ ಹೋಲಿಕೆಯಾಗುವುದಿಲ್ಲ. ಜೊತೆಗೆ ಪೊಲೀಸರಾಗಲೀ ಅಥವಾ ಯಾವುದೇ ಮೀಡಿಯಾವಾಗಲಿ  ಕೊನೆಯ ಕ್ಷಣದ ಯಾವುದೇ ವೀಡಿಯೊವನ್ನು ನೀಡಿಲ್ಲ.

ಕೋಲ್ಕತಾ ಪೊಲೀಸರ ಪ್ರಕಾರ, ಆಸ್ಪತ್ರೆಯ ಆವರಣದಲ್ಲಿ ಮಹಿಳೆಯ ದೇಹವು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವಳ ಗಾಯಗಳ ತೀವ್ರತೆ ಮತ್ತು  ಸಾವನ್ನಪ್ಪಿದ ಸಂದರ್ಭಗಳನ್ನು ಗಮನಿಸಿದರೆ, ದಾಳಿಯ ಸಮಯದಲ್ಲಿ ಅಥವಾ ನಂತರ (ಇಲ್ಲಿ ಮತ್ತು ಇಲ್ಲಿ) ತನ್ನನ್ನು ರೆಕಾರ್ಡ್ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ. 

ಈ ವೀಡಿಯೊದ ಮೂಲವನ್ನು ನಾವು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆದರೆ, ವೀಡಿಯೊದಲ್ಲಿರುವ ವ್ಯಕ್ತಿಯ ಹೆಸರನ್ನು ಜೀನತ್ ರೆಹಮಾನ್ ಎಂದು ಪೋಸ್ಟ್ ನಲ್ಲಿ ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ.  ಜೀನತ್ ರೆಹಮಾನ್ ಅವರ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪೇಜ್  ಲಭ್ಯವಿಲ್ಲ. ಆದರೆ, ಅವರು ತಮ್ಮ ಫೇಸ್ಬುಕ್ ಬಯೋದಲ್ಲಿ ತಾನೊಬ್ಬ ಕಲಾವಿದ ಎಂದು ಉಲ್ಲೇಖಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ವೀಡಿಯೊದ ಬಗ್ಗೆ ಸ್ಪಷ್ಟತೆಗಾಗಿ ನಾವು ಜೀನತ್ ರೆಹಮಾನ್ ಅವರನ್ನು ಸಂಪರ್ಕಿಸಿದ್ದು, ನಾವು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ.

ಜೀನತ್ ರೆಹಮಾನ್ ತಮ್ಮ ಮೇಕ್ಅಪ್ ಆರ್ಟಿಸ್ಟ್ ವೀಡಿಯೊಗಳನ್ನು ಬೂಮ್ ಲೈವ್ ಫ್ಯಾಕ್ಟ್ – ಚೆಕ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾವು ಇದನ್ನು ನೋಡಿದಾಗ, 2020 ರಲ್ಲಿ, ಜೀನತ್ ಅತ್ಯಾಚಾರದ ವಿರುದ್ಧದ ಗಾಯಗಳ ಮೇಕಪ್ನೊಂದಿಗೆ ಇರುವ  ಪೋಸ್ಟ್ ಅನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದಲ್ಲದೆ, ನಾವು ಅವರ ಯೂಟ್ಯೂಬ್ ಚಾನೆಲ್ ಅನ್ನು ಸಹ ಕಂಡುಕೊಂಡಿದ್ದೇವೆ. ಅವರು ಪೋಸ್ಟ್ ಮಾಡಿದ ವೀಡಿಯೊಗಳು ಮತ್ತು ಫೋಟೋಗಳನ್ನು ನೋಡಿದಾಗ, ವೈರಲ್ ವೀಡಿಯೊದಲ್ಲಿ (ಇಲ್ಲಿ ಮತ್ತು ಇಲ್ಲಿ) ಜೀನತ್ ರೆಹಮಾನ್ ಮತ್ತು ಮಹಿಳೆಯ ನಡುವೆ ಹೋಲಿಕೆಗಳಿವೆ ಎಂದು ನಾವು ಗಮನಿಸಿದ್ದೇವೆ. ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಮತ್ತು ಜೀನತ್ ನಡುವಿನ ಹೋಲಿಕೆಯನ್ನು ಕೆಳಗೆ ನೋಡಬಹುದು. 

ಕೊನೆಯದಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿ ಕಂಡುಬರುವ ಮಹಿಳೆಯನ್ನು ಕಲ್ಕತ್ತಾದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll