Fake News - Kannada
 

ಯುಗದ ಅವಧಿಯಲ್ಲಿ ಒಂದು ದಿನ ತಪ್ಪಿಹೋಗಿದೆ ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ; ಬೈಬಲ್ ಹೇಳುವುದೆಲ್ಲ ಸತ್ಯ ಎಂದು ನಾಸಾ ಗುರುತಿಸುತ್ತದೆ ಎಂಬ ವಾದವೇ ಸುಳ್ಳು

0

ನಾಸಾ ವಿಜ್ಞಾನಿಗಳು ತಮ್ಮ ಪ್ರಯೋಗಗಳ ಭಾಗವಾಗಿ ಕಾಲಂ ನಲ್ಲಿ ಒಂದು ದಿನ ಕಳೆದುಹೋಗಿದೆ ಎಂದು ಕಂಡುಹಿಡಿದಿರುವ ಬೈಬಲ್‌ನ ಕಥೆಗಳು ನಿಜವೆಂದು ಹೇಳಿಕೊಳ್ಳುವ ಪೋಸ್ಟ್, ಹಾಗೆಯೇ ಕೆಲವೊಂದು ಸಂದರ್ಭದಲ್ಲಿ ದೇವರು ಸೂರ್ಯನನ್ನು ನಿಶ್ಚಲಗೊಳಿಸುತ್ತಾನೆ ಮತ್ತು ಸೂರ್ಯನು ಹತ್ತು ಡಿಗ್ರಿಗಳಷ್ಟು ಹಿಂದಕ್ಕೆ ಚಲಿಸುವಂತೆ ಮಾಡುತ್ತಾನೆ ಎಂದು  ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ  ಹಂಚಿಕೊಳ್ಳಲಾಗಿದೆ.. ಇವು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: NASA ವು  ಯುಗದಲ್ಲಿ ಒಂದು ದಿನ ತಪ್ಪಿಹೋಗಿದೆ ಎಂದು ಕಂಡುಹಿಡಿದಿದೆ, ಆ ಮೂಲಕ ಬೈಬಲ್‌ನಲ್ಲಿ ಉಲ್ಲೇಖಿಸಲಾದ ಕೆಲವು ವಿಷಯಗಳು ನಿಜವೆಂದು ಸಾಬೀತುಪಡಿಸುತ್ತದೆ.

ನಿಜಾಂಶ: ಬೈಬಲ್‌ನಲ್ಲಿ ಹೇಳಿರುವಂತೆ ಸೂರ್ಯನು ನಿಶ್ಚಲವಾಗಿರುತ್ತಾನೆ  ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನಾಸಾ ಹೇಳಿಕೊಂಡಿದೆ. ಅಲ್ಲದೆ  ಯುಗದ ಅವಧಿಯಲ್ಲಿ ಒಂದು ದಿನ ತಪ್ಪಿಹೋಗಿರುವುದನ್ನು ನಾಸಾ ಅಥವಾ ಇನ್ನಾವುದೇ ಸಂಶೋಧನಾ ಸಂಸ್ಥೆಗಳು ಕಂಡುಕೊಂಡಿರುವ ಮಾಹಿತಿ ಇಲ್ಲ. ಆದಾಗ್ಯೂ ಯಾವುದೇ ವೈಜ್ಞಾನಿಕ ಆಧಾರವಿಲ್ಲದ  ಈ ಸುದ್ದಿಯು  ನಾಸಾ ಸ್ಥಾಪನೆಯಾಗುವ ಮೊದಲಿನಿಂದಲೂ ಹರಿದಾಡುತ್ತಿದೆ. ಹಾಗಾಗಿ  ಈ  ಪೋಸ್ಟ್‌ನ ಮೂಲಕ ಮಾಡಿದ ಪ್ರತಿಪಾದನೆಗಳು ತಪ್ಪಾಗಿವೆ.

ಈ ಅವಧಿಯಲ್ಲಿ ಒಂದು ದಿನ ತಪ್ಪಿಹೋಗಿದೆ ಎಂದು NASA ಅಥವಾ ಯಾವುದೇ ಇತರ ಸಂಶೋಧನಾ ಸಂಸ್ಥೆಯು ಕಂಡುಹಿಡಿದಿರುವ ಯಾವುದೇ ಮಾಹಿತಿಯಿಲ್ಲ. ಅಂತೆಯೇ ಬೈಬಲ್‌ನಲ್ಲಿ ಹೇಳಿರುವಂತೆ ಸೂರ್ಯ ನಿಶ್ಚಲವಾಗಿರುತ್ತಾನೆ ಅಥವಾ ಹತ್ತು ಡಿಗ್ರಿ ಗಳಷ್ಟು ಹಿಂದಕ್ಕೆ ಹೋಗುತ್ತಾನೆ  ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

1997 ರಲ್ಲಿ NASA ಈ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ , ಭೌತಶಾಸ್ತ್ರದ ನಿಯಮಗಳ ಪ್ರಕಾರ ಸೂರ್ಯನು ನಿಶ್ಚಲವಾಗಿರುವಂತೆ ಗೋಚರಿಸಲು ಎರಡು ಸಂಭವನೀಯ ವಿವರಣೆಗಳಿವೆ, 1) ಭೂಮಿಯು ತನ್ನ ಅಕ್ಷದ  ಸುತ್ತ ತಿರುಗುವುದನ್ನು ನಿಲ್ಲಿಸಿದಾಗ, ಅಥವಾ 2) ಸೌರವ್ಯೂಹದಲ್ಲಿ ಸೂರ್ಯನು ಒಂದು ನಿರ್ದಿಷ್ಟ ಮಾದರಿಯಲ್ಲಿ ತಿರುಗಿದಾಗ ಭೂಮಿಯ ಮೇಲಿರುವ ನಮಗೆ ಸೂರ್ಯನು ನಿಶ್ಚಲವಾಗಿರುವಂತೆ ತೋರುತ್ತದೆ.

ಆದರೆ,  ಈ ಎರಡು ಘಟನೆಗಳು ಸಂಭವಿಸಿವೆ ಎಂಬುದಕ್ಕೆ ಹಾಗೂ ಸೂರ್ಯನು ನಿಶ್ಚಲನಾಗುತ್ತಾನೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ನಾಸಾ ಹೇಳಿದೆ. ಆದಾಗ್ಯೂ ಬೈಬಲ್ ಹೇಳುವುದೆಲ್ಲವೂ ಸತ್ಯ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ನಾಸಾ ಹೇಳಿದೆ. ಸೂರ್ಯನು  ನಿಶ್ಚಲನಾಗಿರುತ್ತಾನೆ ಎಂದು ಹೇಳುವ ಲೇಖನವು ನಾಸಾ ರಚನೆಯಾಗುವ ಮೊದಲಿನಿಂದಲೂ ಪ್ರಚಾರದಲ್ಲಿದೆ ಎಂದು ತಿಳಿದುಬಂದಿದೆ.

ಹಿಂದೆ, ಇದೇ ಸುದ್ದಿ ವೈರಲ್ ಆಗಿದ್ದಾಗ, ಹ್ಯಾರಿ ರಿಮ್ಮರ್ ಎಂಬ ಬರಹಗಾರ ತನ್ನ ಪುಸ್ತಕವಾದ ದಿ ಹಾರ್ಮನಿ ಆಫ್ ಸೈನ್ಸ್ ಅಂಡ್ ಸ್ಕ್ರಿಪ್ಚರ್‌ನಲ್ಲಿ ಇದೇ ರೀತಿಯ ಕಥೆಯನ್ನು ಬರೆದಿದ್ದು ಸ್ನಾಪ್ಸ್ ಎಂಬ ‌‌‌‌ಫ್ಯಾಕ್ಟ್ ಚೆಕ್ ಸಂಸ್ಥೆಯು ಈ ವರದಿ ತಪ್ಪೆಂದು ತಿಳಿಸಿರುವ ಪುರಾವೆ ಇದೆ.

ಈ ಪೋಸ್ಟ್‌ನ ಪೇಪರ್‍ ಕ್ಲಿಪ್ ನಲ್ಲಿ ಯುಗದಲ್ಲಿ ಒಂದು ದಿನವು ಕಳೆದುಹೋಗಿದೆ ಎಂಬುದನ್ನು ನಾಸಾ ವಿಜ್ಞಾನಿಗಳು ಕಂಡುಹಿಡಿದಿರುವುದಾಗಿ ಸ್ಪೇಸ್ ಪ್ರೋಗ್ರಾಂ ಕನ್ಸಲ್ಟೆಂಟ್ ಹೇಳಿದ್ದಾರೆ ಎಂದು ಹೆರಾಲ್ಡ್ ಹಿಲ್ ವರದಿ ಮಾಡಿತ್ತು. ಮೇರಿಲ್ಯಾಂಡಿನಲ್ಲಿರುವ ನಾಸಾ ಕಾರ್ಯಾಲಯವು ಹೆರಾಲ್ಡ್ ಹಿಲ್ ವರದಿಯನ್ನು ತಳ್ಳಿಹಾಕಿರುವುದಾಗಿ ಪ್ರಕಟಣೆಯನ್ನು ಹೊರಡಿಸಿರುವುದಾಗಿ ಸ್ನ್ಯಾಪ್ಸ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ.

ಮೇಲಿನ ಪುರಾವೆಗಳಿಂದ ಈ ಪೋಸ್ಟ್‌ನಲ್ಲಿ ಬೈಬಲ್ ಅನ್ನು ಬೆಂಬಲಿಸಿ ಹೇಳಿರುವ ವಿಷಯವು ಅವೈಜ್ಞಾನಿಕ ಎಂದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ, ಯುಗದಲ್ಲಿ ಒಂದು ದಿನ ತಪ್ಪಿಹೋಗಿದೆ ಎಂಬ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ; ಬೈಬಲ್ ಹೇಳುವುದೆಲ್ಲ ಸತ್ಯ ಎಂದು ನಾಸಾ ಗುರುತಿಸುತ್ತದೆ ಎಂಬ ವಾದ ಸುಳ್ಳಾಗಿದೆ.

Share.

About Author

Comments are closed.

scroll