Fake News - Kannada
 

ಪಂಜಾಬ್‌ನಲ್ಲಿ ನಡೆದ ಯುವತಿಯ ಹತ್ಯೆಯನ್ನು ರಾಜಸ್ಥಾನದ ಘಟನೆ ಎಂದು ಕೋಮುವಾದದ ರೂಪನೀಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ  ಪೋಸ್ಟ್ವೊಂದರಲ್ಲಿ (ಇಲ್ಲಿ) ರಾಜಸ್ಥಾನದಲ್ಲಿ ಅಬಿದ್ ಎಂಬ ಮುಸ್ಲಿಂ ವ್ಯಕ್ತಿ ನೀಲಂ ಎಂಬ ಮಹಿಳೆಯ ಮೃತ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಕಾಲುವೆಗೆ ಎಸೆದಿದ್ದಾನೆ ಎಂದು ಹೇಳಲಾಗುತ್ತಿದೆ. ಆ ವ್ಯಕ್ತಿ ಆಕೆಯನ್ನು  ಮದುವೆಯಾಗಿ ಐದು ತಿಂಗಳಾಗಿತ್ತು ಎಂದು ಹೇಳಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಅಬಿದ್ ಎಂಬ ಮುಸ್ಲಿಂ ವ್ಯಕ್ತಿ ತನ್ನ ಹಿಂದೂ ಪತ್ನಿ ನೀಲಂಳನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ರಾಜಸ್ಥಾನದ ಕಾಲುವೆಯಲ್ಲಿ ಎಸೆದಿದ್ದಾನೆ.

ಫ್ಯಾಕ್ಟ್: ಈ ಘಟನೆ ನಡೆದಿದ್ದು ರಾಜಸ್ಥಾನದಲ್ಲಲ್ಲ, ಪಂಜಾಬ್‌ನಲ್ಲಿ. ವರದಿಗಳ ಪ್ರಕಾರ, ಚಂಡೀಗಢದಲ್ಲಿ ಗಗನಸಖಿ ತರಬೇತಿ ಪಡೆಯುತ್ತಿದ್ದ ಸಂತ್ರಸ್ತೆ ನಿಶಾ ಸೋನಿ ಜನವರಿ 20, 2025 ರಂದು ನಾಪತ್ತೆಯಾದಳು, ನಂತರ ಆಕೆಯ ಸಹೋದರಿ ಪೊಲೀಸ್ ದೂರು ದಾಖಲಿಸಿದ್ದರು. ಆಕೆಯ ಗೆಳೆಯ ನಿಶಾಳನ್ನು ಭಾಕ್ರಾ ಕಾಲುವೆಯ ಸೇತುವೆಗೆ ಕರೆದೊಯ್ದು ನೀರಿಗೆ ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ. ಆಕೆಯ ಮೃತದೇಹ ಜನವರಿ 22, 2025 ರಂದು ಪಟಿಯಾಲಾದ ಪಾಸಿಯಾನ ಸೇತುವೆ ಬಳಿ ಪತ್ತೆಯಾಗಿತ್ತು. ರೋಪರ್ ಪೊಲೀಸರು ಆರೋಪಿಯನ್ನು ಜನವರಿ 23, 2025 ರಂದು ಆತನನ್ನು ಬಂಧಿಸಿ, ಐದು ದಿನಗಳ ಕಾಲ ರಿಮಾಂಡ್ ಮಾಡಿದ್ದರು. ಆರೋಪಿ ಯುವರಾಜ್ ಸಿಂಗ್ ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ. ಹೆಚ್ಚುವರಿಯಾಗಿ, ಸಿಂಗ್ ಭಗವಂತಪುರ ಪೊಲೀಸ್ ಠಾಣೆಯು ಆರೋಪಿಯು ಸಿಖ್ ಸಮುದಾಯದವನು ಎಂದು ದೃಢಪಡಿಸಿದೆ ಮತ್ತು ಈ ಪ್ರಕರಣಕ್ಕೆ ಯಾವುದೇ ಕೋಮು ಆಯಾಮವಿಲ್ಲ ಎಂದು ತಿಳಿಸಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ವೈರಲ್ ಪೋಸ್ಟ್‌ನ ಗೂಗಲ್ ಲೆನ್ಸ್ ಹುಡುಕಾಟವು ಪೋಸ್ಟ್‌ನ ಅದೇ ಚಿತ್ರವನ್ನು ಒಳಗೊಂಡ ಹಲವಾರು ಸುದ್ದಿ ವರದಿಗಳನ್ನು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) (ಇಲ್ಲಿ, ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮಗೆ ತೋರಿಸಿದೆ. ಈ ವರದಿಗಳ ಪ್ರಕಾರ, ಚಂಡೀಗಢದಲ್ಲಿ ಗಗನಸಖಿ ತರಬೇತಿ ಪಡೆಯುತ್ತಿದ್ದ ಹಿಮಾಚಲ ಪ್ರದೇಶದ ಮಂಡಿಯ ಜೋಗಿಂದರ್ ನಗರದ ಯುವತಿ ನಿಶಾ ಸೋನಿ ಅವರನ್ನು ಆಕೆಯ ಗೆಳೆಯ ಯುವರಾಜ್ ಸಿಂಗ್ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಪಂಜಾಬ್ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ (ಸಿಐ) ವಿಭಾಗದಲ್ಲಿ ನಿಯೋಜಿತನಾಗಿದ್ದ ಪೊಲೀಸ್ ಅಧಿಕಾರಿ ಈ ಹೇಳಿಕೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಆಕೆಯ ಮೃತದೇಹವನ್ನು  ಪಟಿಯಾಲಾದ ಭಾಕ್ರಾ ಕಾಲುವೆಯಲ್ಲಿ ವಿಲೇವಾರಿ ಮಾಡಲಾಗಿದ್ದು,. ರೋಪರ್ ಪೊಲೀಸರು 2025 ರ ಜನವರಿ 23 ರಂದು ಆರೋಪಿಯನ್ನು ಬಂಧಿಸಿ, ಮೊಹಾಲಿ ನ್ಯಾಯಾಲಯವು ಆತನನ್ನು ಐದು ದಿನಗಳ ರಿಮಾಂಡ್‌ಗೆ ಕಳುಹಿಸಿದೆ. 

ಜನವರಿ 23, 2025 ರಂದು ನ್ಯೂಸ್ 18 ಪಂಜಾಬ್ ಯೂಟ್ಯೂಬ್ ಚಾನೆಲ್‌ನಲ್ಲಿ ಡಿಎಸ್‌ಪಿ ರಾಜ್‌ಪಾಲ್ ಸಿಂಗ್ ಗಿಲ್ ಅವರ ಇಂಟರ್ವ್ಯೂ ಅನ್ನು ಒಳಗೊಂಡ ವರದಿಯನ್ನು (ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ. ನಿಶಾ ಸೋನಿ ಜನವರಿ 20, 2025 ರಂದು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ, ನಂತರ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ನಿಶಾ, ಯುವರಾಜ್ ಸಿಂಗ್ ಅವರನ್ನು ಭೇಟಿ ಮಾಡಲು ಹೋಗಿದ್ದರು ಎಂದು ಸಹೋದರಿ ಹೇಳಿಕೊಂಡಿದ್ದಾರೆ, ಆದರೆ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಫೋನ್ ಆಫ್ ಆಗಿತ್ತು. ಯುವರಾಜ್ ತಮ್ಮ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ನಿಶಾ ಅವರನ್ನು ಬೆದರಿಸುತ್ತಿದ್ದರು ಎಂದು ಸಹೋದರಿ ತಿಳಿಸಿದ್ದಾರೆ ಎಂದು ಡಿಎಸ್‌ಪಿ ಹೇಳಿದ್ದಾರೆ. ಜನವರಿ 20, 2025 ರಂದು, ಯುವರಾಜ್ ನಿಶಾ ಅವರನ್ನು ಭಾಕ್ರಾ ಕಾಲುವೆಯ ಸೇತುವೆಗೆ ಕರೆದೊಯ್ದು ನೀರಿಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಜನವರಿ 22 ರಂದು ಪಾಸಿಯಾನ ಸೇತುವೆಯ ಬಳಿ ಆಕೆಯ ಮೃತದೇಹ ಪತ್ತೆಯಾಗಿದ್ದು, ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ಎಫ್‌ಐಆರ್ ಪ್ರತಿ ನಮಗೆ ಲಭ್ಯವಾಗಿದ್ದು, ಅದರಲ್ಲಿ ಆರೋಪಿಯನ್ನು ಕರ್ನೈಲ್ ಸಿಂಗ್ ಅವರ ಮಗ ಯುವರಾಜ್ ಸಿಂಗ್ ಎಂದು ಗುರುತಿಸಲಾಗಿದೆ.

ನಾವು ಸಿಂಗ್ ಭಗವಂತಪುರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ತನಿಖೆ ನಡೆಯುತ್ತಿರುವುದರಿಂದ ಆರೋಪಿಯ ಕುರಿತಾದ ಮಾಹಿತಿ ನೀಡಲು ಅವರು ನಿರಾಕರಿಸಿದರು. ಆದರೆ, ಆರೋಪಿ ಸಿಖ್ ಸಮುದಾಯದವನು ಎಂದು ಅವರು ದೃಢಪಡಿಸಿದ್ದು, ಈ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.  

ಒಟ್ಟಾರೆಯಾಗಿ ಹೇಳುವುದಾದರೆ, ಪಂಜಾಬ್‌ನಲ್ಲಿ ನಡೆದ ಯುವತಿಯ ಕೊಲೆ ಘಟನೆಯನ್ನು ರಾಜಸ್ಥಾನದಲ್ಲಿ ನಡೆದ ಘಟನೆ ಎಂದು ತಪ್ಪಾಗಿ ಶೇರ್ ಮಾಡಲಾಗಿದೆ. 

Share.

Comments are closed.

scroll