Fake News - Kannada
 

ಕಣಿವೆಯಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನ ವಿಡಿಯೋ ಪಾಕಿಸ್ತಾನದ್ದು, ಹಿಮಾಚಲ ಪ್ರದೇಶದ್ದಲ್ಲ!

0

ಕಿನ್ನೌರ್‌ನಲ್ಲಿ ಸಂಭವಿಸಿದ ಭೂಕುಸಿತ ದುರಂತದ ನಂತರ ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರು ಸಿಲುಕಿಕೊಂಡಿರುವ ದೃಶ್ಯಗಳು ಎಂದು ಹೇಳಿಕೊಂಡು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ವಿಡಿಯೋದಲ್ಲಿ ಸಾವಿರಾರು ವಾಹನಗಳು ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುವ ವಿಡಿಯೋ.

ಸತ್ಯ: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದಿದ್ದ ಭಾರೀ ಟ್ರಾಫಿಕ್ ಜಾಮ್ ಅನ್ನು ಈ ವಿಡಿಯೋ ತೋರಿಸುತ್ತದೆ. ಈದ್-ಉಲ್-ಅಧಾ ಆಚರಣೆಯ ಭಾಗವಾಗಿ ಸಾವಿರಾರು ಪ್ರವಾಸಿಗರು ಪಾಕಿಸ್ತಾನದ ಮನ್ಸೆಹ್ರಾ ಜಿಲ್ಲೆಯ ಕಘಾನ್ ಕಣಿವೆಗೆ ಭೇಟಿ ನೀಡಿದ್ದರು. ಈ ವೇಳೆ ಕಘಾನ್ ಕಣಿವೆಗೆ ಹೋಗುವ ಮನ್ಸೆಹ್ರಾ-ನರನ್-ಜಲ್‌ಖಾಡ್ ರಸ್ತೆಯಲ್ಲಿ ಸಾವಿರಾರು ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದವು. ಹಂಚಿಕೊಳ್ಳಲಾಗಿರುವ ಈ ವಿಡಿಯೋಕ್ಕೂ ಹಿಮಾಚಲ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಹುಡುಕಿದಾಗ, ಪಾಕಿಸ್ತಾನ ಮೂಲದ ‘ ARY’ ಸುದ್ದಿ ಚಾನೆಲ್ ಪ್ರಕಟಿಸಿದ ಯೂಟ್ಯೂಬ್ ವೀಡಿಯೋದಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದಿವೆ. ಈ ಸುದ್ದಿ ವಾಹಿನಿಯು ಪಾಕಿಸ್ತಾನದ ಕಘಾನ್ ಕಣಿವೆಯಲ್ಲಿ ಭಾರೀ ಟ್ರಾಫಿಕ್ ಜಾಮ್‌ನ ದೃಶ್ಯಗಳು ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ರೀತಿಯಾಗಿ ಹಲವಾರು ಪಾಕಿಸ್ತಾನದ ಸುದ್ದಿ ವೆಬ್‌ಸೈಟ್‌ಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಇದೇ ರೀತಿಯ ವೀಡಿಯೊಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈದ್-ಉಲ್-ಅಧಾ ಆಚರಣೆಯನ್ನು ಸಮಯದಲ್ಲಿ ಸಾವಿರಾರು ಪ್ರವಾಸಿಗರು ಪಾಕಿಸ್ತಾನದ ಕಘಾನ್ ಕಣಿವೆಗೆ ಭೇಟಿ ನೀಡಿದ್ದರು. ಸಾವಿರಾರು ವಾಹನಗಳು ಕನ್ಘಾನ್ ಕಣಿವೆಗೆ ಹೋಗುವ ಮನ್ಸೆಹ್ರಾ-ನರನ್-ಜಲ್‌ಖಾಡ್ ರಸ್ತೆಯಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದವು. ಪಾಕಿಸ್ತಾನದ ಕಘಾನ್ ಕಣಿವೆಯ ಬಳಿ ನಡೆದ ಈ ಬೃಹತ್ ಟ್ರಾಫಿಕ್ ಜಾಮ್ ಕುರಿತು ಹಲವಾರು ಸುದ್ದಿ ವೆಬ್‌ಸೈಟ್‌ಗಳು ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಪಾಕಿಸ್ತಾನದ ಈ ಟ್ರಾಫಿಕ್ ಜಾಮ್‌ನ ದೃಶ್ಯಗಳನ್ನು ಹಿಮಾಚಲ ಪ್ರದೇಶದ್ದು ಎಂದು ಹಂಚಿಕೊಂಡಿರುವ ಬಗ್ಗೆ, ಹಿಮಾಚಲ ಪ್ರದೇಶ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಆ ವಿಡಿಯೋಗೂ ಹಿಮಾಚಲ ಪ್ರದೇಶಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದಲ್ಲಿನ ಟ್ರಾಫಿಕ್ ಜಾಮ್‌ನ ವೀಡಿಯೊವನ್ನು ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll