Fake News - Kannada
 

ಕಿಲಿಮಂಜಾರೋ ಪರ್ವತದ ಗಗನ ದೃಶ್ಯಗಳನ್ನು ಕೈಲಾಸ ಪರ್ವತದ ದೃಶ್ಯಗಳೆಂದು ಹಂಚಿಕೊಳ್ಳಲಾಗುತ್ತಿದೆ

0

ಕೈಲಾಸ ಪರ್ವತದ ವಿಹಂಗಮ ವೀಕ್ಷಣೆಯ ದೃಶ್ಯಗಳು, ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಶೇರ್‍ ಆಗುತ್ತಿದೆ. ಭಾರತ ಸರ್ಕಾರದ ಪ್ರಯತ್ನಗಳ ಫಲವಾಗಿ ಮೊಟ್ಟಮೊದಲ ಬಾರಿಗೆ ಕೈಲಾಸ ಶಿಖರದ ಮೇಲಿನ ದೃಶ್ಯಗಳನ್ನು ನೋಡಬಹುದಾಗಿದೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕೈಲಾಸ ಪರ್ವತದ ವಿಹಂಗಮ ದೃಶ್ಯಗಳನ್ನು ತೋರಿಸುತ್ತಿರುವ ವಿಡಿಯೋ

ಸತ್ಯಾಂಶ; ಈ ವಿಡಿಯೋದಲ್ಲಿ ಕಾಣಿಸುತ್ತಿರುವುದು ಆಫ್ರಿಕಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವೇ ಹೊರತು ಚೈನಾ ಆಕ್ರಮಿತ ಟಿಬೆಟ್ ಪ್ರಾಂತ್ಯದಲ್ಲಿರುವ ಕೈಲಾಸ ಪರ್ವತವಲ್ಲ. ರಿಜ್ವಾನ್ ರೆಮ್ತುಲ್ಲಾ ಎನ್ನುವ ಒಬ್ಬ ಪೈಲಟ್, ಕಿಲಿಮಂಜಾರೋ ಪರ್ವತವನ್ನು 360 ಡಿಗ್ರಿ ಸುತ್ತಾತ್ತ ಈ ಗಗನ ದೃಶ್ಯಗಳನ್ನು ರಿಕಾರ್ಡ್‌ ಮಾಡಿದ್ದಾನೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದ ಸ್ಕ್ರೀನ್ ಷಾಟ್‌ಗಳನ್ನು ರಿವರ್ಸ್‌ ಇಮೇಜ್ ಸರ್ಚ್‌ ಮಾಡಿ ಹುಡುಕಿದಾಗ ಇದೆ ದೃಶ್ಯಗಳಿರುವ ವಿಡಿಯೋವನ್ನು ‘Tanzania Budget Safaris’  ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ 25 ಜುಲೈ 2017 ರಂದು ಪೋಸ್ಟ್ ಮಾಡಿರುವುದು ತಿಳಿಯುತ್ತದೆ. ಈ ವಿಡಿಯೋದಲ್ಲಿ ಕಾಣಿಸುತ್ತಿರುವುದು ಆಫ್ರೀಕಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತ ಎಂದು ವಿವರಣೆಯಲ್ಲಿ ಹೇಳಿದ್ದಾರೆ. ರಿಜ್ವಾನ್ ರಮ್ತುಲ್ಲಾ ಎನ್ನುವ ಒಬ್ಬ ಪೈಲಟ್, ಟಾಂಜಾನಿಯಾದಲ್ಲಿರುವ ಕಿಲಿಮಂಜಾರೋ ಪರ್ವತವನ್ನು 360 ಡಿಗ್ರಿಗಳಲ್ಲಿ ಸುತ್ತತ್ತಾ ಈ ದೃಶ್ಯಗಳನ್ನು ಚಿತ್ರಿಕರಿಸಿರುವುದಾಗಿ ಹಲವಾರು ಟ್ರಾವೆಲ್ ವೆಬ್ಸೈಟ್‌ಗಳು, ಈ ವಿಡಿಯೋವನ್ನು ಪೇಸ್ಬುಕ್‌ನಲ್ಲಿ ಹಂಚಿಕೊಂಡಿವೆ. ಈ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ನೋಡಬಹುದು. 

ಪೋಸ್ಟ್‌ನಲ್ಲಿ ಷೇರ್‍ ಮಾಡುತ್ತಿರುವ ಅದೇ ದೃಶ್ಯಗಳನ್ನು ಒಳಗೊಂಡಿರುವ ವಿಡಿಯೋವನ್ನು ’Daily News Digital’ ಸುದ್ದಿ ಸಂಸ್ಥೆ ತಮ್ಮ ಯೂಟ್ಯೂಬ್ ಚಾನೆಲ್ ಷೇರ್‍ ಮಾಡಿದೆ. ಈ ವಿಡಿಯೋದಲ್ಲಿ ಕಾಣಿಸುತ್ತಿರುವುದು ಆಫ್ರಿಕಾ ದೇಶದಲ್ಲಿನ ಕಿಲಿಮಂಜಾರೋ ಪರ್ವತ ಎಂದು ಈ ಸುದ್ದಿವಾಹಿನಿ ಸ್ಪಷ್ಟ ಪಡಿಸಿದೆ.

ಚೈನಾ ಆಕ್ರಮಿತ ಟಿಬೆಟ್ ಪ್ರಾಂತ್ಯದಲ್ಲಿನ ’ Mountain KAngrinboqe’ (ಚೈನಾ ದೆಶದಲ್ಲಿ ಕೈಲಾಸ ಪರ್ವತದ ’ Mountain Kangrinboqe’  ಎಂದು ಕರಿಯುತ್ತಾರೆ) ಪೋಟೋಗಳನ್ನು ’VIBET’ ಸುದ್ದಿಸಂಸ್ಥೆ ತಮ್ಮ ಲೇಖನದಲ್ಲಿ ಪ್ರಕಟಿಸಿದೆ. ಕೈಲಾಸ ಪರ್ವತ ವಿಹಂಗಮ ವೀಕ್ಷಣೆಯ ದೃಶ್ಯಗಳನ್ನು ಈ ಲೇಖನದಲ್ಲಿ ನೋಡಬಹುದು. ಚೈನಾ ಸುದ್ದಿ ಸಂಸ್ಥೆ’CGTN’ ಕೈಲಾಸ ಪರ್ವತದ ವಿಹಂಗಮ ವೀಕ್ಷಣೆಯ ದೃಶ್ಯಗಳನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಕಟಿಸಿದೆ. ಈ ವಿಡಿಯೋದಲ್ಲಿ ಕಾಣೀಸುತ್ತಿರುವ ಕೈಲಾಸ ಪರ್ವತ ದೃಶ್ಯಗಳಿಗೂ, ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿರುವ ವಿಡಿಯೋದಲ್ಲಿನ ದೃಶ್ಯಗಳಿಗೆ ಹೋಲಿಕೆ ಇಲ್ಲ. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿರುವುದು ಆಫ್ರಿಕಾದಲ್ಲಿನ ಕಿಲೋಮಂಜಾರೋ ಪರ್ವತವೆಂದು, ಕೈಲಾಸ ಪರ್ವತವಲ್ಲವೆಂದು ಖಚಿತವಾಗಿ ಹೇಳಬಹುದು.

ಒಟ್ಟಿನಲ್ಲಿ, ಕಿಲಿಮಂಜಾರೋ ಪರ್ವತದ ವಿಹಂಗಮ ವೀಕ್ಷಣೆಯ ದೃಶ್ಯಗಳನ್ನು ಕೈಲಾಸ ಪರ್ವತದ ದೃಶ್ಯಗಳೆಂದು ಹಂಚಿಕೊಳ್ಳುತ್ತಿದ್ದಾರೆ.

Share.

About Author

Comments are closed.

scroll