Fake News - Kannada
 

2025 ರಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ಶಿವಾಜಿ ಜಯಂತಿ ಆಚರಣೆ ಎಂದು ದೇವಾಲಯ ಉದ್ಘಾಟನೆಯ ಡೋಲ್ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಭಾರತದಲ್ಲಿ ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಜಯಂತಿಯನ್ನು ಫೆಬ್ರವರಿ 19, 2025 ರಂದು ಆಚರಿಸಲಾಯಿತು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ಸಂದರ್ಭದಲ್ಲಿ, ಅಯೋಧ್ಯಾ ರಾಮ ಮಂದಿರದ ಮುಂದೆ ಸಮವಸ್ತ್ರ ಧರಿಸಿದ ಜನರ ಗುಂಪೊಂದು ಬ್ಯಾಂಡ್ ಮತ್ತು ಡೋಲ್‌ನ ಲಯಕ್ಕೆ ಭಜನೆಗಳನ್ನು ಪಠಿಸುತ್ತಿರುವುದನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  2025 ರಲ್ಲಿ ಅಯೋಧ್ಯಾ ರಾಮ ಮಂದಿರದಲ್ಲಿ ಶಿವಾಜಿ ಜಯಂತಿಯನ್ನು ಆಚರಿಸಲಾಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಅಯೋಧ್ಯಾ ರಾಮ ಮಂದಿರದಲ್ಲಿ ನಡೆದ  ಶಿವಾಜಿ ಜಯಂತಿ ಆಚರಣೆಯನ್ನು ವಿಡಿಯೋ ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊ ಜನವರಿ 2024 ರಲ್ಲಿ ನಡೆದ ಅಯೋಧ್ಯಾ ರಾಮ ಮಂದಿರ ಉದ್ಘಾಟನಾ ಸಮಾರಂಭದ ಮಹಾರಾಷ್ಟ್ರದ ‘ಪುನೇರಿ ಧೋಲ್ ತಾಶಾ’ ಪ್ರದರ್ಶನವನ್ನು ತೋರಿಸುತ್ತದೆ. ಛತ್ರಪತಿ ಶಿವಾಜಿ ಜಯಂತಿಯನ್ನು ಭಾರತದ ವಿವಿಧ ಭಾಗಗಳಲ್ಲಿ 19 ಫೆಬ್ರವರಿ 2025 ರಂದು ಆಚರಿಸಲಾಗಿದ್ದರೂ, ದೇವಾಲಯದಲ್ಲಿ ಆ ಆಚರಣೆ ನಡೆದಿರುವ ಬಗ್ಗೆ  ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ಆದ್ದರಿಂದ, ಈ ಕ್ಲೇಮ್ ತಪ್ಪು.

ಇದರ ಹಿಂದಿನ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಅದು ಜನವರಿ 25, 2024 ರ ಅದೇ ವೀಡಿಯೊವನ್ನು ಒಳಗೊಂಡ X ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು.  ‘ರಾಮ ​​ಮಂದಿರ ಆವರಣದೊಳಗೆ ಶಿವಗಂಜನ’, ಇದು ವೀಡಿಯೊ ಇತ್ತೀಚಿನದಲ್ಲಎಂದು ಕ್ಯಾಪ್ಶನ್ ನಲ್ಲಿ ಹೇಳಲಾಗಿದೆ. 

ಹೆಚ್ಚಿನ ಸಂಶೋಧನೆಯು ವೈರಲ್ ಕ್ಲಿಪ್ ಸೇರಿದಂತೆ ಅದೇ ಕಾರ್ಯಕ್ರಮದ ಹಲವಾರು ಯೂಟ್ಯೂಬ್ ವೀಡಿಯೊಗಳನ್ನು ನಮಗೆ ತೋರಿಸಿದೆ. ANI, NDTV ಪ್ರಾಫಿಟ್ ಮತ್ತು ಇತರ ಚಾನೆಲ್‌ಗಳು ಜನವರಿ 25, 2024 ರಂದು ಈ ಘಟನೆಯನ್ನು ವರದಿ ಮಾಡಿದ್ದವು. ಅದರಲ್ಲಿ ಒಂದು ವರದಿ  ‘ಅಯೋಧ್ಯಾ ರಾಮ ಮಂದಿರ | ಶ್ರೀ ರಾಮ ಜನ್ಮಭೂಮಿಯಲ್ಲಿ ಪುಣೆಯ ಇಂದ್ರ ಜಿಮಿಯಿಂದ ಗೂಸ್‌ಬಂಪ್ಸ್ ಪ್ರದರ್ಶನ’ ಎಂಬ ಶೀರ್ಷಿಕೆಯನ್ನು ಹೊಂದಿತ್ತು. ಹೆಚ್ಚುವರಿಯಾಗಿ, ದಿ ಎಕನಾಮಿಕ್ ಟೈಮ್ಸ್ ಕಾರ್ಯಕ್ರಮದ ಮತ್ತೊಂದು ವರ್ಷನ್ ಅನ್ನು ಪೋಸ್ಟ್ ಮಾಡಿದೆ. ಮಹಾರಾಷ್ಟ್ರದ ಪುಣೆಯ ಧೋಲ್-ತಶಾ ವಾದಕರು ಅಯೋಧ್ಯಾ ರಾಮ ಮಂದಿರದಲ್ಲಿ ಪ್ರದರ್ಶನ ನೀಡಿದರು ಎಂದು ಈ ವರದಿಯಲ್ಲಿ ಹೇಳಲಾಗಿದೆ. 

22 ಜನವರಿ 2024 ರಂದು ಪ್ರಾರಂಭವಾದ ಅಯೋಧ್ಯ ರಾಮ್ ಮಂದಿರ ಉದ್ಘಾಟನಾ ಆಚರಣೆಗಳ ಭಾಗವಾಗಿದ್ದ ಈ ಘಟನೆಯ ಬಗ್ಗೆ ಹೆಚ್ಚಿನ ಹುಡುಕಾಟ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ, ಅಯೋಧ್ಯದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ  ಭಕ್ತರು ಪ್ರದರ್ಶನ ನೀಡಿದರು.  ಹೊಸದಾಗಿ ನಿರ್ಮಿಸಲಾದ ದೇವಸ್ಥಾನದಲ್ಲಿ ಮಹಾರಾಷ್ಟ್ರ ‘ಪುನೇರಿ ಧೋಲ್ ತಾಶಾ’ ಕಾರ್ಯಕ್ರಮವು ಒಂದಾಗಿತ್ತು. ಹೆಚ್ಚುವರಿಯಾಗಿ, ಪುಣೆ ಮತ್ತು ಮಹಾರಾಷ್ಟ್ರದ ಇತರ ಭಾಗಗಳ ಭಕ್ತರು ಆಚರಣೆಗಳಲ್ಲಿ ಭಾಗವಹಿಸಿದರು, ಅಯೋಧ್ಯೆಯಲ್ಲಿ ಹನುಮಾನ್ ಗರ್ಹಿಯ ಮುಂದೆ ಸಾಂಪ್ರದಾಯಿಕ ಡೋಲ್, ಡ್ರಮ್ಸ್, ಶಂಖ ಚಿಪ್ಪುಗಳು ಮತ್ತು ಇತರ ಸಂಗೀತ ವಾದ್ಯಗಳೊಂದಿಗೆ ಪ್ರದರ್ಶನ ನೀಡಿದ್ದರು.

ಇನ್ನೂ ಹೆಚ್ಚಾಗಿ ಹೇಳುವುದಾದರೆ,  ಛತ್ರಪತಿ ಶಿವಾಜಿ ಜಯಂತಿಯನ್ನು 19 ಫೆಬ್ರವರಿ 2025 ರಂದು ಭಾರತದ ವಿವಿಧ ಭಾಗಗಳಲ್ಲಿ ಆಚರಿಸಲಾಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಆದರೆ, ಅಯೋಧ್ಯ ರಾಮ್ ದೇವಸ್ಥಾನದಲ್ಲಿ ಶಿವಾಜಿ ಜಯಂತಿಯನ್ನು ಆಚರಿಸಲಾಗಿದೆ ಎಂದು ದೃಡೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿ ನಮಗೆ ಕಂಡುಬಂದಿಲ್ಲ ಮತ್ತು ವೈರಲ್ ವೀಡಿಯೊಗೆ ಶಿವಾಜಿ ಜಯಂತಿಗೆ ಯಾವುದೇ ಸಂಪರ್ಕವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಅಯೋಧ್ಯ ದೇವಾಲಯದ ಉದ್ಘಾಟನಾ ಡೋಲ್ ವಿಡಿಯೋವನ್ನು ದೇವಾಲಯದಲ್ಲಿ ಶಿವಾಜಿ ಜಯಂತಿ ಆಚರಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll