Fake News - Kannada
 

ಈ ವಿಡಿಯೋದಲ್ಲಿರುವ ಅನಂತ ಪದ್ಮನಾಭಸ್ವಾಮಿ ವಿಗ್ರಹವನ್ನು 2023 ರಲ್ಲಿ ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲ್ಲರ್ಸ್ ರಚಿಸಿದ್ದಾರೆ

0

“3000 ವರ್ಷಗಳಷ್ಟು ಹಳೆಯದಾದ 7800 ಕೆಜಿ ಶುದ್ಧ ಚಿನ್ನ, 7,80,000 ವಜ್ರಗಳು ಮತ್ತು 780 ಕ್ಯಾರೆಟ್ ವಜ್ರಗಳಿಂದ ಮಾಡಿದ ಅನಂತ ಪದ್ಮನಾಭಸ್ವಾಮಿ ವಿಗ್ರಹ” ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ವಿಡಿಯೋದಲ್ಲಿರುವ ಪದ್ಮನಾಭ ಸ್ವಾಮಿಯ ಪ್ರತಿಮೆ 3000 ವರ್ಷಗಳಷ್ಟು ಹಳೆಯದಾಗಿದೆ.

ಫ್ಯಾಕ್ಟ್: ಈ ವೈರಲ್ ವಿಡಿಯೋದಲ್ಲಿ ಕಂಡುಬರುವ ಪದ್ಮನಾಭ ಸ್ವಾಮಿಯ ಪ್ರತಿಮೆ 3000 ವರ್ಷಗಳಷ್ಟು ಹಳೆಯದಲ್ಲ. ಈ ವೀಡಿಯೊದಲ್ಲಿರುವ  ಪ್ರತಿಮೆಯನ್ನು 2023 ರಲ್ಲಿ ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲರ್ಸ್ ರಚಿಸಿದ್ದಾರೆ. ವಿಗ್ರಹವನ್ನು ಸುಮಾರು 2.8 ಕೆಜಿ ಚಿನ್ನ ಮತ್ತು ಸುಮಾರು 75,000 ವಜ್ರಗಳಿಂದ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.

ಈ ವೈರಲ್ ವೀಡಿಯೊದ ಕುರಿತು ವಿವರಗಳಿಗಾಗಿ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಅದೇ ವೈರಲ್ ವೀಡಿಯೊವನ್ನು (ಆರ್ಕೈವ್ ಮಾಡಲಾಗಿದೆ) ಆಗಸ್ಟ್ 2023 ರಲ್ಲಿ “ilovetrichy” ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ವೀಡಿಯೊದ ವಿವರಣೆಯಲ್ಲಿ, ಈ  ವಿಗ್ರಹವನ್ನು ಶಿವನಾರಾಯಣ ಜ್ಯುವೆಲರ್ಸ್ ತಯಾರಿಸಲಾಗಿದೆ ಎಂದು ಉಲ್ಲೇಖಿಸಲಾಗಿದ್ದು,  ವಿಗ್ರಹವನ್ನು ಸುಮಾರು 2.8 ಕೆಜಿ ಚಿನ್ನ ಮತ್ತು ಸುಮಾರು 75,000 ವಜ್ರಗಳಿಂದ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಗಸ್ಟ್ 2023 ರಲ್ಲಿ, ಹಲವಾರು ಜನರು ಅದೇ ವಿಗ್ರಹದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಇದನ್ನು ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲರ್ಸ್ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ತಯಾರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 

ಈ ಮಾಹಿತಿಯ ಆಧಾರದ ಮೇಲೆ ನಾವು ಈ ಪ್ರತಿಮೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಸೂಕ್ತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ  ಹುಡುಕಾದಿದ್ದೇವೆ. ಈ ಮೂಲಕ ಅದೇ ಪ್ರತಿಮೆಯನ್ನು ತೋರಿಸುವ ಹಲವಾರು ಸುದ್ದಿ ಲೇಖನಗಳು ಕಂಡುಬಂದಿವೆ (ಇಲ್ಲಿ, ಇಲ್ಲಿ, ಇಮತ್ತು ಇಲ್ಲಿ). ಇದರ ಪ್ರಕಾರ, ಈ ಪ್ರತಿಮೆಯನ್ನು ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲರ್ಸ್ ವಿನ್ಯಾಸಗೊಳಿಸಿದ್ದಾರೆ. ಶಿವ ನಾರಾಯಣ್ ಜ್ಯುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ತುಷಾರ್ ಅಗರ್ವಾಲ್ ಮಾತನಾಡುತ್ತಾ, “ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದ ಭವ್ಯವಾದ ವಿಗ್ರಹದಿಂದ ಪ್ರೇರಿತವಾಗಿದೆ. ಇದು 8 ಇಂಚು ಎತ್ತರ ಮತ್ತು 8 ಇಂಚು ಉದ್ದ ಮತ್ತು ಈ ವಿಗ್ರಹವು ಸುಮಾರು 2.8 ಕೆಜಿ ತೂಕವಿದೆ ಅಂದಾಜು 75,000 ವಜ್ರಗಳಿಂದ ಅಲಂಕರಿಸಲ್ಪಟ್ಟ ಈ ವಜ್ರಗಳು ಸುಮಾರು 500 ಕ್ಯಾರೆಟ್‌ಗಳು ಎಂದು ಅಂದಾಜಿಸಲಾಗಿದೆ. ಪ್ರತಿಮೆಯನ್ನು ಕೊಲಂಬಿಯಾದ ಪಚ್ಚೆಗಳು ಮತ್ತು ನೈಸರ್ಗಿಕ ಬರ್ಮೀಸ್ ಮಾಣಿಕ್ಯಗಳಿಂದ ಅಲಂಕರಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ಶಿವನಾರಾಯಣನ್ ಜ್ಯುವೆಲರ್ಸ್ ಈ ಪದ್ಮನಾಭ ಸ್ವಾಮಿಯ ವಿಗ್ರಹದ ವೀಡಿಯೊವನ್ನು ಆಗಸ್ಟ್ 2023 ರಲ್ಲಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ (ಇಲ್ಲಿ). ಈ ಮೂಲಕ ವಿಡಿಯೋದಲ್ಲಿರುವ  ಪದ್ಮನಾಭ ಸ್ವಾಮಿಯ ಪ್ರತಿಮೆ 3000 ವರ್ಷಗಳಷ್ಟು ಹಳೆಯದಲ್ಲ ಎಂದು ಸ್ಪಷ್ಟಪಡಿಸಬಹುದು. 

ಕೊನೆಯದಾಗಿ ಹೇಳುವುದಾದರೆ,  ಈ ವೀಡಿಯೊದಲ್ಲಿರುವ ವಿಗ್ರಹವನ್ನು 2023 ರಲ್ಲಿ ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲರ್ಸ್ ರಚಿಸಿದ್ದು,  ಈ ವಿಗ್ರಹವನ್ನು ಸುಮಾರು 2.8 ಕೆಜಿ ಚಿನ್ನ ಮತ್ತು ಸುಮಾರು 75,000 ವಜ್ರಗಳಿಂದ ಮಾಡಲಾಗಿದೆ.

Share.

Comments are closed.

scroll