Fake News - Kannada
 

ಬ್ರಿಟೀಷ್ ಮಹಿಳೆ ಹಾಡಿರುವ ಸಂಸ್ಕೃತ ಶ್ಲೋಕಗಳನ್ನು ಸ್ಪೇನ್‌ ರೇಡಿಯೋ ಚಾನೆಲ್‌ನಲ್ಲಿ ಹಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಸ್ಪೇನ್‌ನ ರೇಡಿಯೊ ಚಾನೆಲ್‌ನಲ್ಲಿ ಮಹಿಳೆಯೊಬ್ಬರು ಸಂಸ್ಕೃತದಲ್ಲಿ ಹಾಡುಗಳನ್ನು ಹಾಡಿರುವ ವೀಡಿಯೊ ಇದು, ‘ನಮ್ಮ ಭಾರತದ ಬಗ್ಗೆ ಜಗತ್ತು ಹೇಗೆ ಭಾವಿಸುತ್ತದೆ. ನೀವೂ ಹಾಡನ್ನು ಹಾಡಿ ಮತ್ತು ಸನಾತನ ಧರ್ಮದ ಮಹತ್ವ ಅರಿಯಿರಿ’ ಎಂಬ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಎಷ್ಟು ಸತ್ಯ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ರತಿಪಾದನೆ: ಸ್ಪೇನ್‌ನ ರೇಡಿಯೊ ಚಾನೆಲ್‌ನಲ್ಲಿ ಮಹಿಳೆಯೊಬ್ಬರು ಸಂಸ್ಕೃತದಲ್ಲಿ ಶ್ಲೋಕಗಳನ್ನು ಹಾಡುತ್ತಿರುವ ವೀಡಿಯೊ.

ನಿಜಾಂಶ: ವೀಡಿಯೊದಲ್ಲಿ ಸಂಸ್ಕೃತದಲ್ಲಿ ಹಾಡುತ್ತಿರುವುದು ಬ್ರಿಟಿಷ್ ಮಹಿಳೆ ಗೇಬ್ರಿಯೆಲಾ ಬರ್ನೆಲ್. ಅವರು ವಿಡಿಯೋದಲ್ಲಿ ‘ಭೋಜನಂ ಮಂತ್ರ’ ಎಂಬ ಸಂಸ್ಕೃತ ಮಂತ್ರವನ್ನು ಹಾಡುತ್ತಿದ್ದಾರೆ. ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನ್ ಕೂಡ ಗೇಬ್ರಿಯೆಲ್ಲಾ ಬರ್ನೆಲ್ ಅವರು ಬ್ರಿಟನ್‌ನಲ್ಲಿ ಭಾರತೀಯ ಭಾಷಾ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದಾರೆ. ಅವರು ‘ಬ್ರಿಟನ್‌ಗೆ ಭಾರತದ ಸಾಂಸ್ಕೃತಿಕ ರಾಯಭಾರಿ’ ಎಂದು ಟ್ವೀಟ್ ಮಾಡಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ವಿಡಿಯೋ ಯೂಟ್ಯೂಬ್ ನಲ್ಲಿ ಸಿಕ್ಕಿದೆ. ಅವರು ‘ಭೋಜನಂ ಮಂತ್ರ’ ಎಂಬ ಸಂಸ್ಕೃತ ಮಂತ್ರವನ್ನು ಪಠಿಸುತ್ತಿದ್ದರು ಎಂದು ಹೇಳಲಾಗಿದೆ. ವೀಡಿಯೊವನ್ನು ನವೆಂಬರ್ 10, 2019 ರಂದು ಗಯಾ ಸಂಸ್ಕೃತ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬ್ರಿಟನ್‌ನ ಗೇಬ್ರಿಯೆಲಾ ಬರ್ನೆಲ್ ಅವರು ಹಾಡಿದ್ದಾರೆ ಎಂದು ವೀಡಿಯೊದ ವಿವರಣೆ ನೀಡಿರುವುದು ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಿಳಿದುಬಂದಿದೆ.

ಗೇಬ್ರಿಯೆಲಾ ಬರ್ನೆಲ್ ಅವರನ್ನು ಗೂಗಲ್ ಸರ್ಚ್ ಮಾಡಿದಾಗ ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನ್ ಅವರ ಬಗ್ಗೆ ಟ್ವೀಟ್ ಮಾಡಿರುವುದು ತಿಳಿದುಬಂದಿದೆ. ಗೇಬ್ರಿಯೆಲಾ ಬರ್ನೆಲ್ ಅವರು ಭಾರತೀಯ ಭಾಷೆಯಾದ ಸಂಸ್ಕೃತವನ್ನು ಪ್ರಚಾರ ಮಾಡುವ ವೀಡಿಯೊದೊಂದಿಗೆ,  ಅವರು ‘ಬ್ರಿಟನ್‌ಗೆ ಭಾರತದ ಸಾಂಸ್ಕೃತಿಕ ರಾಯಭಾರಿ’ ಎಂಬ ಬಿರುದನ್ನು ಗಳಿಸಿರುವ ಕುರಿತು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.

ಚಿಕ್ಕಂದಿನಿಂದಲೂ ಸಂಸ್ಕೃತ ಕಲಿಯಲು ತನ್ನ ಪೋಷಕರು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ವಿಡಿಯೋ ಸಂದರ್ಶನದಲ್ಲಿ ಗೇಬ್ರಿಯೆಲ್ಲಾ ಹೇಳಿದ್ದಾರೆ. ಗೇಬ್ರಿಯೆಲ್ಲಾ ಬರ್ನೆಲ್ ಒಬ್ಬ ಬ್ರಿಟಿಷ್ ಸಂಸ್ಕೃತ ವಿದ್ವಾಂಸರು ಎಂದು ಹೇಳಲಾಗುತ್ತದೆ. ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು ಮತ್ತು ಲಂಡನ್‌ನಲ್ಲಿ ಸಂಸ್ಕೃತದಲ್ಲಿ ತರಗತಿಗಳನ್ನು ಮಾಡುತ್ತಿದ್ದರು ಎಂದು ವೆಬ್‌ಸೈಟ್‌ಗಳಲ್ಲಿ ತಿಳಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೇ, ಬ್ರಿಟಿಷ್ ಮಹಿಳೆ ಹಾಡಿದ ಸಂಸ್ಕೃತ ಮಂತ್ರಗಳನ್ನು ಸ್ಪೇನ್‌ನ ರೇಡಿಯೊ ಚಾನೆಲ್‌ನಲ್ಲಿ ಮಹಿಳೆಯೊಬ್ಬರು ಸಂಸ್ಕೃತದಲ್ಲಿ ಹಾಡುಗಳನ್ನು ಹಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll