ಉತ್ತರ ಪ್ರದೇಶದ ಪ್ರತಾಪ್‌ಗಢ್ ಜಿಲ್ಲೆಯ ಮತಗಟ್ಟೆಯೊಳಗೆ ಮಹಿಳಾ ಮತದಾರರ ಮತಗಳನ್ನು ಪೋಲಿಂಗ್ ಏಜೆಂಟ್‌ಗಳು ತಿರುಚುತ್ತಿರುವ ದೃಶ್ಯಗಳು ಎಂದು ಪ್ರತಿಪಾದಿಸಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: 2022 ರ ಯುಪಿ ಚುನಾವಣೆಯಲ್ಲಿ ಮಹಿಳಾ ಮತದಾರರ ಮತಗಳನ್ನು ಪೋಲಿಂಗ್ ಏಜೆಂಟ್‌ಗಳು ತಿರುಚುತ್ತಿರುವ ದೃಶ್ಯಗಳು.
ಸತ್ಯಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ, ಹರಿಯಾಣದ ಫರಿದಾಬಾದ್‌ನಲ್ಲಿ 2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಡೆದ ಹಳೆಯ ‘ಬೂತ್ ಕ್ಯಾಪ್ಚರ್’ ಘಟನೆಯದ್ದಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯ ಮೇ ತಿಂಗಳಲ್ಲಿ, ಪೃಥಾಲಾ ಕ್ಷೇತ್ರದ ಅಸಾವತಿ ಗ್ರಾಮದ ಮತಗಟ್ಟೆಯೊಳಗೆ ಮಹಿಳಾ ಮತದಾರರನ್ನು ಮತ್ತು ಮತದಾನದ ಪ್ರಕ್ರಿಯೆಯನ್ನು ದುರ್ಬಳಕೆ ಮಾಡುವ ಮೂಲಕ ಪೋಲಿಂಗ್ ಏಜೆಂಟ್ ಸಿಕ್ಕಿಬಿದ್ದಿದ್ದರು. ಘಟನೆಯನ್ನು ಆಧರಿಸಿ ಫರಿದಾಬಾದ್ ಜಿಲ್ಲಾ ಚುನಾವಣಾಧಿಕಾರಿ ಎಫ್‌ಐಆರ್ ದಾಖಲಿಸಿದ್ದು, ತಕ್ಷಣವೇ ಪೋಲಿಂಗ್ ಏಜೆಂಟ್ ಅನ್ನು ಬಂಧಿಸಿದ್ದಾರೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ ಹಳೆಯದಾಗಿದ್ದು, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ, ಇದೇ ರೀತಿಯ ವಿಡಿಯೊವನ್ನು ಕನಿಷ್ಠ ಮೇ 2019 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ದೃಶ್ಯಗಳು ಹರಿಯಾಣದ ಅಸಾವತಿ ಗ್ರಾಮದ ಮತಗಟ್ಟೆಯದ್ದಾಗಿವೆ. ಈ ಬಗ್ಗೆ ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, 13 ಮೇ 2019 ರಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವೊಂದು ಕಂಡುಬಂದಿದೆ. TOI ಇದನ್ನು ಪೋಲಿಂಗ್ ಏಜೆಂಟ್ ಮಹಿಳಾ ಮತದಾರರ ಮತದಾನವನ್ನು ದುರ್ಬಳಕೆ ಮಾಡುವ ದೃಶ್ಯಗಳು ಎಂದು ಹೇಳಿದ್ದು, ಹರಿಯಾಣದ ಫರಿದಾಬಾದ್‌ನ ಪೋಲಿಂಗ್ ಬೂತ್ ಎಂದು ವರದಿ ಮಾಡಿದೆ.
ಈ ಘಟನೆಯು 2019 ರ ಸಾರ್ವತ್ರಿಕ ಚುನಾವಣೆಯ ಮತದಾನದ ಸಮಯದಲ್ಲಿ ಪೃಥಾಲಾ ಕ್ಷೇತ್ರದ ಅಸಾವತಿ ಗ್ರಾಮದ ಮತಗಟ್ಟೆಯೊಳಗೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡಿರುವ, ಹಲವಾರು ಸುದ್ದಿ ವೆಬ್‌ಸೈಟ್‌ಗಳು ಮೇ 2019 ರಲ್ಲಿ ಸುದ್ದಿಗಳನ್ನು ಮತ್ತು ವೀಡಿಯೊಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, 2019ರ ಮೇ 12 ರಂದು, ಫರಿದಾಬಾದ್ ಜಿಲ್ಲಾ ಚುನಾವಣಾಧಿಕಾರಿ ಅವರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಅಸಾವತಿ ಮತಗಟ್ಟೆಯಲ್ಲಿ ಮಹಿಳಾ ಮತದಾರರ ಮೇಲೆ ಪ್ರಭಾವ ಬೀರಿದ ಪೋಲಿಂಗ್ ಏಜೆಂಟ್ ಅನ್ನು ತಕ್ಷಣವೇ ಬಂಧಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ, ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ‘ಬೂತ್ ಕ್ಯಾಪ್ಚರ್’ ಮಾಡಿರುವ ಯಾವುದೆ ಘಟನೆಗಳು ನಡೆದಿಲ್ಲ. ಈ ಬಗ್ಗೆ ಯಾವುದೇ ಸುದ್ದಿ ಅಥವಾ ವೀಡಿಯೊಗಳು ಬಂದಿಲ್ಲ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದಾಗಿದೆ ಮತ್ತು ಯುಪಿ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೃಢಪಡಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, 2019 ರ ಸಾರ್ವತ್ರಿಕ ಚುನಾವಣೆಯ ಹಳೆಯ ವೀಡಿಯೊವನ್ನು ಯುಪಿಯ ಪ್ರತಾಪ್‌ಗಢ ಮತಗಟ್ಟೆಯಲ್ಲಿ ಮತಗಟ್ಟೆ ಏಜೆಂಟ್ ಮತದಾರರ ಮತದಾನವನ್ನು ತಿರುಚುತ್ತಿರುವ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ.