ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಘಟನೆಯ ದೃಶ್ಯಾವಳಿಗಳಂತೆ ಕೆಲವರು ನೀಲಿ ಬಸ್ ಅನ್ನು ಧ್ವಂಸಗೊಳಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮುಸ್ಲಿಂ ಮಹಿಳೆಯೊಬ್ಬರು ಕೇಳಿದಾಗ ಚಾಲಕ ಆಕೆಯ ಮನೆ ಬಳಿ ಬಸ್ ನಿಲ್ಲಿಸದ ಕಾರಣ ಮುಸ್ಲಿಮರು ಬಸ್ ಮೇಲೆ ದಾಳಿ ಮಾಡಿದ್ದಾರೆ ಎಂದು ಪೋಸ್ಟ್ ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಮುಸ್ಲಿಂ ಮಹಿಳೆಯೊಬ್ಬರು ಬಸ್ಸನ್ನು ನಿಲ್ಲಿಸಲು ಕೇಳಿದಾಗ ಚಾಲಕ ಬಸ್ ನಿಲ್ಲಿಸದ ಕಾರಣ ಮುಸ್ಲಿಮರು ಕರ್ನಾಟಕದಲ್ಲಿ ಬಸ್ ಅನ್ನು ಧ್ವಂಸಗೊಳಿಸಿದರು.
ಫ್ಯಾಕ್ಟ್ : 2019 ರಲ್ಲಿ ಸೂರತ್‌ನಲ್ಲಿ ಗುಂಪು ಹತ್ಯೆಯ ವಿರುದ್ಧದ ರ್ಯಾಲಿಯಲ್ಲಿ ಈ ಘಟನೆ ನಡೆದಿದೆ. ಕೆಲವು ಮುಸ್ಲಿಮರು ರಸ್ತೆಯಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ನಾಶಪಡಿಸಿದ ಈ ಘಟನೆಯ ವೈರಲ್ ವೀಡಿಯೊವಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.
ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಸ್ಸಿನಲ್ಲಿ ‘ಸಿಟಿಲಿಂಕ್’ ಎಂದು ಬರೆದಿರುವುದನ್ನು ಕಾಣಬಹುದು. ಕೀವರ್ಡ್ ಹುಡುಕಾಟದ ಮೂಲಕ, ಸಿಟಿಲಿಂಕ್ ಅಥವಾ ಸೂರತ್ BRTS ಗುಜರಾತ್‌ನ ಸೂರತ್ ಮೂಲದ ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆಯಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
ನಂತರದ ಸಂಶೋಧನೆಯು ದಿವ್ಯಾಂಗ್ ನ್ಯೂಸ್ ಚಾನೆಲ್ ಪ್ರಕಟಿಸಿದ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಅಲ್ಲಿ ಜೂನ್ 2019 ರಲ್ಲಿ ಇದೇ ರೀತಿಯ ದೃಶ್ಯಗಳನ್ನು ಬಹಿರಂಗಪಡಿಸಲಾಯಿತು, “ಗುಂಪು ಹತ್ಯೆ ಘಟನೆಗಳ ವಿರುದ್ಧ ರಾಲಿಯಾಗಿ ಸೂರತ್ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು.”
2019 ರಲ್ಲಿ, ವರ್ಸಟೈಲ್ ಮೈನಾರಿಟೀಸ್ ಫೋರಮ್ (ವಿಎಂಎಫ್) ನಿಂದ ಕೆಲವು ಮುಸ್ಲಿಮರು ದೇಶದಲ್ಲಿ ಗುಂಪು ಹತ್ಯೆ ಘಟನೆಗಳ ವಿರುದ್ಧ ಸೂರತ್‌ನಲ್ಲಿ ರಾಲಿಯನ್ನು ಆಯೋಜಿಸಿದರು. ಇದು ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು. ಘಟನೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಈ ಘಟನೆಯ ಕುರಿತು ಕೆಲವು ಸುದ್ದಿ ಲೇಖನಗಳನ್ನು (ಇಲ್ಲಿ, ಇಲ್ಲಿ, ಇಲ್ಲಿ) ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಸೂರತ್‌ನಲ್ಲಿ ನಡೆದ ಘಟನೆಯ ಹಳೆಯ ವೀಡಿಯೊವನ್ನು ಕರ್ನಾಟಕದಲ್ಲಿ ಇತ್ತೀಚಿನ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ.