Fake News - Kannada
 

ಶಿವಲಿಂಗಕ್ಕೆ ಹಾಲು ಹಾಕುವುದನ್ನು ನಿಲ್ಲಿಸಬೇಕು ಎಂಬ ಅಮೀರ್ ಖಾನ್ ಹೇಳಿಕೆಗೆ ಪ್ರತಿಯಾಗಿ ಮುಸ್ಲಿಮರು ಗೋರಿಗಳ ಮೇಲೆ ಚಾದರ್ ಹಾಕುವುದನ್ನು ನಿಲ್ಲಿಸಬೇಕು ಎಂದು ಪಾಯಲ್ ರೋಹಟ್ಗಿ ಹೇಳಿಕೆ ನೀಡಿಲ್ಲ

0

ಶಿವಲಿಂಗಕ್ಕೆ ಹಸಿವಾಗುವುದಿಲ್ಲ, ಹಾಗಾಗಿ ಅದಕ್ಕೆ ಹಾಲು ಸುರಿಯುವುದನ್ನು ನಿಲ್ಲಿಸಬೇಕು ಎಂಬ ಅಮೀರ್ ಖಾನ್ ಹೇಳಿಕೆಗೆ ಪ್ರತಿಯಾಗಿ “ಸತ್ತವರಿಗೆ ಚಳಿಯಾಗುವುದಿಲ್ಲ, ಹಾಗಾಗಿ ಮುಸ್ಲಿಂ ಗೋರಿಗಳ ಮೇಲೆ ಚಾದರ್ ಹಾಕುವುದನ್ನು ನಿಲ್ಲಿಸಬೇಕು ಎಂದು ಬಿಗ್‌ಬಾಸ್ ಸ್ಪರ್ಧಿ ಪಾಯಲ್ ರೋಹಟ್ಗಿ ಹೇಳಿದ್ದಾರೆ ಎಂಬ ಪೋಸ್ಟ್ ಒಂದು ಎಲ್ಲಡೆ ವೈರಲ್ ಆಗುತ್ತಿದೆ. ಇದು ನಿಜವೆ ಎಂದು ಪರಿಶೀಲಿಸೋಣ.

ಪ್ರತಿಪಾದನೆ: ಹಿಂದೂ ಆಚಾರಗಳ ವಿರುದ್ಧ ಅಮೀರ್ ಖಾನ್ ಮಾಡಿದ ಕಾಮೆಂಟ್‌ಗಳಿಗೆ ಉತ್ತರವಾಗಿ ಪಾಯಲ್ ರೋಹಟ್ಗಿ ಮುಸ್ಲಿಂ ಆಚಾರಗಳಿಗೆ ವಿರುದ್ಧವಾಗಿ ಮಾಡಿದ ಪ್ರತಿಕ್ರಿಯೆಗಳು.

ನಿಜಾಂಶ: ಶಿವಲಿಂಗಕ್ಕೆ ಹಸಿವಾಗುವುದಿಲ್ಲ, ಹಾಗಾಗಿ ಅದಕ್ಕೆ ಹಾಲು ಸುರಿಯುವುದನ್ನು ನಿಲ್ಲಿಸಬೇಕು ಎಂದು ಅಮೀರ್ ಖಾನ್ ಹೇಳಿಲ್ಲ. ಅದಕ್ಕೆ ಪ್ರತಿಯಾಗಿ ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಹೊದಿಸಬಾರದು ಎಂದು ಪಾಯಲ್ ರೋಹಟ್ಗಿ ಸಹ ಹೇಳಿಕೆ ನೀಡಿಲ್ಲ. ಸತ್ತವರಿಗೆ ಚಳಿ ಆಗುವುದಿಲ್ಲ ಎಂದು ಮುಸ್ಲಿಂ ಸಂಪ್ರದಾಯಗಳ ವಿರುದ್ಧ ಮಹಿಳೆಯೊಬ್ಬರು ಈ ಹೇಳಿಕೆಗಳನ್ನು ನೀಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಪ್ರತಿಪಾದನೆ ಮಾಡಿದಂತೆ ಬಾಲಿವುಡ್ ನಟ ಅಮೀರ್ ಖಾನ್, ಹಿಂದೂಗಳು ಶಿವಲಿಂಗಗಳಿಗೆ ಹಾಲು ಸುರಿಯುವುದು ಪೋಲು ಎಂದು ಕರೆದು, ಹಿಂದೂ ಧರ್ಮದ ಆಚಾರಗಳಿಗೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆಯೇ ಎಂದ ಪರಿಶೀಲಿಸಿದಾಗ ಅಂತಹ ಯಾವುದೇ ಹೇಳಿಕೆಗಳು ಕಂಡುಬಂದಿಲ್ಲ. ಒಂದು ವೇಳೆ ಅಮೀರ್ ಖಾನ್ ನಿಜವಾಗಿಯೂ ಅಂತಹ ಹೇಳಿಕೆ ನೀಡಿದ್ದರೆ ದೇಶದ ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ಈ ಬಗ್ಗೆ ವರದಿ ಮಾಡುತ್ತಿದ್ದವು. ಅದರೆ  ಈ ಕುರಿತು ವರದಿ ಮಾಡಿದ್ದಕ್ಕೆ ಯಾವುದೇ ಪುರಾವೆಗಳು ನಮಗೆ ದೊರಕಿಲ್ಲ. 2015ರಲ್ಲಿ ಅಮೀರ್ ಖಾನ್ ತಮ್ಮ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ದೇವರ ಮೂರ್ತಿಗೆ ಸುರಿದು ಹಾಳು ಮಾಡುವ ಹಾಲಿನಿಂದ ಬಡ ಮಕ್ಕಳು ಹಸಿವು ನೀಗಿಸಿಕೊಳ್ಳಬಹುದು ಎಂದು ಹೇಳಿದ್ದರು ಎಂದು ಕೆಲವು ಪೋಸ್ಟ್‌ಗಳು ಹೇಳಿವೆ. ಆ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಆದರೆ, ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಪೌಷ್ಟಿಕಾಂಶ ಮತ್ತು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಸಾರವಾದ ಸಂಚಿಕೆಗಳಲ್ಲಿ ಅಮೀರ್ ಖಾನ್ ಎಲ್ಲಿಯೂ ಈ ಕಾಮೆಂಟ್‌ಗಳನ್ನು ಮಾಡಿಲ್ಲ ಎಂದು ತಿಳಿದುಬಂದಿದೆ.

ಹಾಗೆಯೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಪಾಯಲ್ ರೋಹಟ್ಗಿ ಕೂಡ ಆಮೀರ್ ಖಾನ್  ನೀಡಿದ್ದಾರೆ ಎನ್ನಲಾದ ಹಿಂದೂ ಆಚಾರಗಳಿಗೆ ಸಂಬಂಧಿಸಿದ ಹೇಳಿಕೆಗೆ ಪ್ರತಿಯಾಗಿ ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಹೊದಿಸುವ ಕುರಿತು ಪ್ರತಿಕ್ರಿಯಿಸಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಒಂದು ವೇಳೆ ಪಾಯಲ್ ರೋಹಟ್ಗಿ ನಿಜವಾಗಿಯೂ ಅಂತಹ ಪ್ರತಿಕ್ರಿಯೆಗಳನ್ನು ಮಾಡಿದ್ದರೆ, ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ಸುದ್ದಿ ಪ್ರಕಟಿಸಿ ವರದಿ ಮಾಡುತ್ತಿದ್ದವು. ಅಂತಹ ವರದಿಗಳು ಕಂಡುಬಂದಿಲ್ಲ. ಆದರೆ ಒಬ್ಬ ಮಹಿಳೆ ಇಂತಹದೊಂದು ಪ್ರತಿಕ್ರಿಯೆ ನೀಡಿರುವ ವಿಡಿಯೋ ಕೆಲವು ಕಡೆ ಹರಿದಾಡುತ್ತಿದ್ದು, ಅಮೀರ್ ಖಾನ್ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಆ ಮಹಿಳೆ ಮುಸ್ಲಿಂ ಸಮುದಾಯದಲ್ಲಿ ಇರುವಂತಹ ಆಚಾರಗಳನ್ನು ಟೀಕಿಸುತ್ತಾ ಕಮೆಂಟ್ ಮಾಡಿದ್ದಾರೆ. ಆ ವಿಡಿಯೋ ದಲ್ಲಿರುವ ಮಹಿಳೆ ಪಾಯಲ್ ರೋಹಟ್ಗಿ ಎಂಬುದು ದೃಢಪಟ್ಟಿರುವುದಿಲ್ಲ.

ಪಾಯಲ್ ರೋಹಟ್ಗಿ ಅನೇಕ ಬಾರಿ ಅಮೀರ್ ಖಾನ್ ಅವರನ್ನು ಟೀಕಿಸುತ್ತಾ ತನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ಆ ವೀಡಿಯೊ ವನ್ನು ಇಲ್ಲಿ, ಇಲ್ಲಿ ಕಾಣಬಹುದು. ಅಲ್ಲದೆ ಪಾಯಲ್ ರೋಹಟ್ಗಿ ಹಲವು ಬಾರಿ ಮುಸ್ಲಿಂ ಆಚಾರಗಳನ್ನು ಟೀಕಿಸುತ್ತಾ ಕಾಮೆಂಟ್‌ಗಳನ್ನು ಮಾಡಿ ಸುದ್ದಿ ಆಗಿದ್ದಾರೆ. ಆದರೆ ಪೋಸ್ಟ್‌ನಲ್ಲಿ ತಿಳಿಸಿರುವಂತೆ ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಬಗ್ಗೆ ಪ್ರತಿಕ್ರಿಯಿಸಿರುವವರು ಪಾಯಲ್ ರೋಹಟ್ಗಿ ಅನ್ನುವುದಕ್ಕೆ ನಮಗೆ ಆಧಾರಗಳು ದೊರೆತಿಲ್ಲ.

ಅಮೀರ್ ಖಾನ್ ‘ಪೀಕೆ’ ಚಿತ್ರದಲ್ಲಿ ಶಿವಲಿಂಗದ ಮೇಲೆ ಹಾಲು ಹಾಕಿದರೆ ಬಡ ಮಕ್ಕಳ ಹಸಿವು ನೀಗಿಸಲು ಸಾಧ್ಯವೇ? ಎಂಬ ವಿಚಾರದ ಬಗ್ಗೆ ಮಾತನಾಡಿದ್ದರು. ಇದನ್ನು ಗುರಿಯಾಗಿಸಿಕೊಂಡು ಒಬ್ಬ ಮಹಿಳೆ ಹೇಗಾದರೂ ಮಾಡಿ ಮುಸ್ಲಿಮರು ಕೂಡ ಸಮಧಿಗಳ ಮೇಲೆ ಚಾದರ್ ಹೊದಿಸುವುದನ್ನು ನಿಲ್ಲಿಸಿ  ಬಡ ಜನರಿಗೆ ಕೊಟ್ಟು ಚಳಿಯಾಗದಂತೆ ತಡೆಯಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಈ ಹೇಳಿಕೆಗಳನ್ನು ಮಾಡಿದ ಹಿಂದೂ ಮಹಿಳೆ ಯಾರೆಂಬುದು ತಿಳಿಯುತ್ತಿಲ್ಲ. ಆದರೆ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಪಾಯಲ್ ರೋಹಟ್ಗಿ ಎಂಬುದಕ್ಕೆ ಯಾವ ಸ್ಪಷ್ಟತೆಯೂ ಇಲ್ಲ.

ಒಟ್ಟಾರೆಯಾಗಿ ಶಿವಲಿಂಗಕ್ಕೆ ಹಾಲು ಹಾಕಬಾರದೆಂದು ಅಮೀರ್ ಖಾನ್ ಆಗಲಿ, ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಬಟ್ಟೆಯನ್ನು ಹೊದಿಸಬಾರದೆಂದು ಪಾಯಲ್ ರೋಹಟ್ಗಿ ಆಗಲಿ ಎಲ್ಲಿಯೂ ಹೇಳಿಲ್ಲ ಎಂಬುದು ಸ್ಪಷ್ಟವಾಗಿದೆ.

Share.

About Author

Comments are closed.

scroll