ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರ ಜೈ ಷಾ ಒತ್ತಡ ಹಾಕಿದ್ದರಿಂದಲೇ ಭಾರತ ಕ್ರಿಕೇಟ್ ಆಟಗಾರರು ರೈತ ಹೋರಾಟಕ್ಕೆ ವಿರುದ್ದವಾಗಿ ಟ್ವೀಟ್ ಮಾಡುತ್ತಿದ್ದಾರೆಂದು ಪ್ರಮುಖ ಕ್ರಿಕೇಟ್ ಆಟಗಾರ ಕಪಿಲ್ ದೇವ್ ಹೇಳಿದ್ದಾರೆ ಎನ್ನಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಈ ಪೋಸ್ಟ್‌ನ ಪ್ರಕಾರ ಅದರಲ್ಲಿ ಎಷ್ಟು ಸತ್ಯಾಂಶವಿದೆಯೋ ನೋಡೋಣ.
ಪ್ರತಿಪಾದನೆ: ʼಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರನಾದ ಜೈ ಷಾ ಒತ್ತಡ ಹಾಕಿದ್ದರಿಂದಲೇ ಭಾರತ ಕ್ರೀಕೇಟ್ ಆಟಗಾರರು ರೈತ ಹೋರಾಟದ ವಿರುದ್ಧ ಟ್ವಿಟ್ ಮಾಡುತ್ತಿದ್ದಾರೆʼ ಪ್ರಮುಖ ಕ್ರಿಕೇಟ್ ಆಟಗಾರ ಕಪಿಲ್ ದೇವ್ ಹೇಳಿದ್ದಾರೆ.
ಸತ್ಯಾಂಶ: ಅಮಿತ್ ಷಾ ಪುತ್ರ ಜೈ ಷಾನನ್ನು ಟೀಕಿಸುತ್ತಾ ಕಪಿಲ್ ದೇವ್ ಹೀಗೆ ಪ್ರತಿಕ್ರಿಯಿಸಿರುವುದಾಗಿ ಯಾವುದೇ ರೀತಿಯ ಸುದ್ದಿಯ ಲೇಖನಗಳಾಗಲಿ, ಸುದ್ದಿಯ ವಿಡಿಯೋಗಳಾಗಲಿ ಇಲ್ಲ. ಕಪಿಲ್ ದೇವ್ ಅವರ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿಯೂ ಸಹ ಜೈ ಷಾನನ್ನು ಟೀಕಿಸಿ ಯಾವುದೇ ಟ್ವೀಟ್ ಮಾಡಿಲ್ಲ. ಅಲ್ಲದೇ ರೈತರು ಮತ್ತು ಸರ್ಕಾರದ ಮಧ್ಯೆ ನಡೆಯುತ್ತಿರುವ ಈ ವಿವಾದ ಬೇಗ ಪರಿಹಾರವಾಗಬೇಕೆಂದು ಬಯಸುತ್ತಾ ಟ್ವೀಟ್ ಮಾಡಿದ್ದಾರೆ. ಆದ್ದರಿಂದ ಪೋಸ್ಟ್ ಮೂಲಕ ತಪ್ಪು ಮಾಹಿತಿ ಹರಡಲಾಗುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಕ್ಕಾಗಿ ಗೂಗಲ್‌ನಲ್ಲಿ ಹುಡುಕಿದಾಗ, ಕಪಿಲ್ ದೇವ್ ಈ ಹೇಳಿಕೆ ನೀಡಿದ ಹಾಗೆ ಯಾವುದೇ ಸುದ್ದಿ ಲೇಖನಗಳು ಮತ್ತು ಸುದ್ದಿಯ ವಿಡಿಯೋಗಳು ಇಲ್ಲ. ಮತ್ತು ಇನ್ಯಾವುದೇ ರೀತಿಯ ವಿವರಗಳು ನಮಗೆ ಸಿಕ್ಕಿಲ್ಲ. ಕಪಿಲ್ ದೇವ್ ಅವರ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿಯೂ ಸಹ ಜೈ ಷಾನನ್ನು ಟೀಕಿಸಿ ಯಾವುದೇ ಟ್ವಿಟ್ ಮಾಡಿಲ್ಲ. ಸಾಧಾರಣವಾಗಿ ಕಪಿಲ್ ದೇವ್‌ರಂತಹ ವ್ಯಕ್ತಿ ಗೃಹ ಸಚಿವನ ಪುತ್ರನನ್ನು ಕುರಿತು ಆರೋಪ ಮಾಡಿದರೆ ಸುದ್ಧಿ ಮಾಧ್ಯಮಗಳು ತಪ್ಪದೆ ಸುದ್ದಿ ಮಾಡುತ್ತವೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುದ್ದಿಗಳು ನಮಗೆ ದೊರೆತಿಲ್ಲ.
ಅಲ್ಲದೇ ರೈತರು ಮತ್ತು ಸರ್ಕಾರದ ಮಧ್ಯೆ ನಡೆಯುತ್ತಿರುವ ಈ ವಿವಾದ ಬೇಗ ಪರಿಹಾರವಾಗಬೇಕೆಂದು ಬಯಸುತ್ತಾ ಟ್ವೀಟ್ ಮಾಡಿದ್ದಾರೆ. ಇದೇ ವಿಷಯವನ್ನು ಕೆಲವು ಸುದ್ದಿ ಮಾಧ್ಯಮಗಳೂ ಕೂಡ ಪ್ರಕಟಿಸಿವೆ. ಇವುಗಳನನು ಇಲ್ಲಿ ಮತ್ತೂ ಇಲ್ಲಿ ನೋಡಬಹುದು. ಇದರ ಆಧಾರದ ಮೇಲೆ ಕಪಿಲ್ ಈ ರೀತಿ ಪ್ರತಿಕ್ರಿಯೇ ನೀಡಿಲ್ಲ ಎಂದು ಖಚಿತವಾಗಿ ಹೇಳಬಹುದು.
ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಅಮೆರಿಕ ಪಾಪ್ ಗಾಯಕಿ ರಿಹಾನ್ನಾ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುತ್ತಾ ಕೆಲವು ಭಾರತ ಕ್ರಿಕೆಟ್ ಆಟಗಾರಾರು ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ, ವಿರಾಟ್ ಕೋಹ್ಲಿ, ರಹಾನೆ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಇಂತಹ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಷೇರ್ ಆಗುತ್ತಿವೆ.
ಒಟ್ಟಾರೆಯಾಗಿ, ಅಮಿತ್ ಷಾ ಪುತ್ರ ಜೈ ಷಾನನ್ನು ಟೀಕಿಸಿ ಕಪಿಲ್ ದೇವ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.