Fake News - Kannada
 

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವಾಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕಣ್ಣೀರು ಹಾಕಿದರು ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

0

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡುವಾಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕಣ್ಣೀರು ಹಾಕಿದರು ಎಂದು ಪ್ರತಿಪಾದಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕಣ್ಣೀರು ಹಾಕಿದ ಇತ್ತೀಚಿನ ವಿಡಿಯೋ.

ನಿಜಾಂಶ: ಈ ವಿಡಿಯೋ 2017ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಗೋರಕ್‌ಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಕ್ ದಿಯಾ ಶಾಹೀದ್‌ ಕೆ ನಾಮ್ (ಹುತಾತ್ಮರಿಗಾಗಿ ಒಂದು ದೀಪ) ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಭಾವುಕರಾಗುವುದನ್ನು ತೋರಿಸುತ್ತದೆ. ಇದು ಹಳೆಯ ವಿಡಿಯೋವಾಗಿದ್ದು, ಇದಕ್ಕೂ ಇತ್ತೀಚಿನ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೀವರ್ಡ್‌ಗಳನ್ನು ಬಳಿಸಿ ಗೂಗಲ್‌ ನಲ್ಲಿ ಹುಡುಕಾಡಿದಾಗ ಇದೇ ರೀತಿಯ ದೃಶ್ಯಗಳಿರುವ ವಿಡಿಯೋ ಒಂದು ಎಬಿಪಿ ನ್ಯೂಸ್ ಚಾನೆಲ್‌ನಲ್ಲಿ ಅಕ್ಟೋಬರ್ 17, 2017ರಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. ಹುತಾತ್ಮರ ಕುರಿತಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ಭಾವುಕರಾದರೂ ಎಂದು ವಿಡಿಯೋ ವಿವರಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ಯೋಗಿ ಆದಿತ್ಯನಾಥ್‌ರವರು ಅಳುತ್ತಿರುವ ವರದಿಗಳು 2017ರ ಅಕ್ಟೋಬರ್‌ನಲ್ಲಿ ಹಲವಾರು ವೆಬ್‌ಸೈಟ್‌ಗಳಲ್ಲಿ ವರದಿಯಾಗಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಲೇಖನಗಳ ಪ್ರಕಾರ ಗೋರಖ್‌ಕಪುರದ ಗೋರಖ್‌ನಾಥ್ ದೇವಾಲಯದಲ್ಲಿ ಹುತಾತ್ಮ ಯೋದರ ಕುರಿತು ಹಮ್ಮಿಕೊಂಡಿದ್ದ ಏಕ್ ದಿಯಾ ಶಾಹೀದ್‌ ಕೆ ನಾಮ್ ಕಾರ್ಯಕ್ರಮದಲ್ಲಿ ಸಂದೇಶ್ ಆತೆ ಹೈನ್ ಹಾಡು ಹಾಡಿದಾಗ  ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾವುಕರಾಗಿದ್ದಾರೆ.

ಇತ್ತೀಚೆಗೆ ಗುಜರಾತ್, ಅಸ್ಸಾಂ, ಕರ್ನಾಟಕದಂತೆ ಉತ್ತರ ಪ್ರದೇಶ ಸರ್ಕಾರವೂ ಸಹ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಗೆ ತೆರಿಗೆ ವಿನಾಯಿತಿ ಘೋಷಿಸಿವೆ. ಆದರೆ ಯೋದಿ ಆದಿತ್ಯನಾಥ್ ಈ ಸಿನಿಮಾ ನೋಡಿದ್ದಾರೆ ಮತ್ತು ಭಾವುಕರಾಗಿದ್ದಾರೆ ಎಂದು ಯಾವುದೇ ವರದಿ ಸಿಕ್ಕಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಹಳೆಯ ವಿಡಿಯೋವನ್ನು ಯೋಗಿ ಆದಿತ್ಯನಾಥ್ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡುವಾಗ ಅತ್ತರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll