ಪ್ರಧಾನಿ ನರೇಂದ್ರ ಮೋದಿ ಮಹಿಳೆಯೊಬ್ಬರ ಜೊತೆ ಮಾತನಾಡುತ್ತಿರುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಈ ಪೋಸ್ಟ್ ಅನ್ನು ಪ್ರಧಾನಿ ಮೋದಿ ಡಿಸೆಂಬರ್ 2024 ರಲ್ಲಿ ಕುವೈತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಂಚಿಕೊಳ್ಳಲಾಗಿದ್ದು, ಆ ಪೋಸ್ಟ್‌ನಲ್ಲಿ ಆ ಮಹಿಳೆ ಕುವೈತ್‌ನ ರಾಣಿಯಾಗಿದ್ದು, ಹಿಜಾಬ್ ಇಲ್ಲದೆ ಕ್ಯಾಶುಯಲ್ ಡ್ರೆಸ್ ನಲ್ಲಿದ್ದಾರೆ ಎಂದು ಹೇಳಲಾಗಿದೆ. ಹಾಗಾದ್ರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಕುವೈತ್ ರಾಣಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ.
ಫ್ಯಾಕ್ಟ್: ವೈರಲ್ ಫೋಟೋದಲ್ಲಿರುವ ಮಹಿಳೆಯನ್ನು ಶೈಖಾ ಎಜೆ ಅಲ್-ಸಬಾ ಎಂದು ತಿಳಿದು ಬಂದಿದ್ದು, ಆಕೆ ಯೋಗ ಸಾಧಕಿ ಮತ್ತು ಕುವೈತ್‌ನ ಮೊದಲ ಪರವಾನಗಿ ಪಡೆದು ‘ದಾರಾತ್ಮ’ ಎಂಬ ಯೋಗ ಸ್ಟುಡಿಯೋ ಸ್ಥಾಪಿಸಿದ ಸಂಸ್ಥಾಪಕಿ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 22, 2024 ರಂದು ಕುವೈತ್‌ನಲ್ಲಿ ಗಲ್ಫ್ ಪ್ರದೇಶದ ಇತರ ಪ್ರಭಾವಿಗಳೊಂದಿಗೆ ಅವರನ್ನು ಭೇಟಿಯಾದರು. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ಫೋಟೋವನ್ನು ಗೂಗಲ್ ಲೆನ್ಸ್‌ನಲ್ಲಿ ಹುಡುಕಿದಾಗ ಅದೇ ಫೋಟೋವನ್ನು ಒಳಗೊಂಡ ಹಲವಾರು ವರದಿಗಳು (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) (ಇಲ್ಲಿ, ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮಗೆ ಸಿಕ್ಕಿದೆ. ಈ ವರದಿಗಳು ಆಕೆ ಶೈಖಾ ಎಜೆ ಅಲ್-ಸಬಾ ಎಂದು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಗಲ್ಫ್ ದೇಶದ ಇತರ ಪ್ರಭಾವಿಗಳೊಂದಿಗೆ 2024 ರ ಡಿಸೆಂಬರ್ 22 ರಂದು ಅವರನ್ನು ಭೇಟಿಯಾದರು. ಆಕೆ ಪ್ರಸಿದ್ಧ ಯೋಗ ಸಾಧಕಿಯಾಗಿದ್ದು, ಕುವೈತ್‌ನಲ್ಲಿ ಮೊದಲು ಪರವಾನಗಿ ಪಡೆದ ಯೋಗ ಸ್ಟುಡಿಯೋ ‘ದಾರಾತ್ಮ’ದ ಸ್ಥಾಪಕಿಯಾಗಿದ್ದಾರೆ.

ಡಿಸೆಂಬರ್ 22, 2024 ರಂದು ಪ್ರಧಾನಿ ಮೋದಿ ಅವರು ಶೇಖಾ ಎಜೆ ಅಲ್-ಸಬಾ ಅವರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿರುವ X ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ನಮಗೆ ದೊರಕಿದೆ.
ಪ್ರಧಾನಿ ಮೋದಿ, ಶೈಖಾ ಎ ಜೆ ಅಲ್-ಸಬಾ ಅವರನ್ನು ಭೇಟಿಯಾದ ಅದೇ ಫೋಟೋವನ್ನು ವಿದೇಶಾಂಗ ಸಚಿವಾಲಯದ ಇನ್‌ಸ್ಟಾಗ್ರಾಮ್ ಪೋಸ್ಟ್ (ಆರ್ಕೈವ್) ನಮಗೆ ಸಿಕ್ಕಿದೆ. ಅದರಲ್ಲಿ ಅವರು ಯೋಗ ಸಾಧಕಿ ಮತ್ತು ಕುವೈತ್‌ನಲ್ಲಿ ಮೊದಲ ಪರವಾನಗಿ ಪಡೆದ ಯೋಗ ಸ್ಟುಡಿಯೋ ‘ದಾರಾತ್ಮ’ದ ಸ್ಥಾಪಕಿ ಎಂದು ತಿಳಿಸಿದ್ದಾರೆ.
ಆದರೆ, ಆ ದೇಶವನ್ನು ಪ್ರಸ್ತುತ ಶೇಖ್ ಮೆಶಾಲ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾ ಅವರು ಆಳುತ್ತಿದ್ದು, ಕುವೈತ್ “ರಾಣಿ” ಎಂಬ ಅಧಿಕೃತ ಬಿರುದು ಅಥವಾ ಸ್ಥಾನವನ್ನು ಹೊಂದಿರುವ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಕಂಡುಬಂದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿ ಜೊತೆ ಕುವೈತ್‌ನ ಯೋಗ ಸಾಧಕಿಯೊಬ್ಬರ ಫೋಟೋವನ್ನು ಕುವೈತ್ ರಾಣಿಯ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.