Fake News - Kannada
 

ಆಸ್ತಿ ವಿವಾದದ ಗಲಾಟೆಗೆ ಕೋಮು ಬಣ್ಣ ಹಚ್ಚಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

0

ಪೋಲಿಸ್ ಸಿಬ್ಬಂದಿಗೆ ಆಕ್ರಮಣಕಾರಿ ಸ್ವರದಲ್ಲಿ ಮಾತನಾಡುವ ವ್ಯಕ್ತಿಯ ಜೊತೆಗಿನ ವಿಡಿಯೊವೊಂದರ ಪೋಸ್ಟ್‌ ಅನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹೈದರಾಬಾದ್‌ನಲ್ಲಿ  ಮುಸಲ್ಮಾನರು ಹಿಂದೂಗಳ ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ ಮಸೀದಿ ನಿರ್ಮಾಣ ಮಾಡುತ್ತಿದ್ದರು. ಹಿಂದೂ ಸಮಾಜ ದಾಖಲೆಗಳನ್ನು ಒದಗಿಸಿ ನ್ಯಾಯಾಲಯದಲ್ಲಿ ಗೆಲುವನ್ನು ಪಡೆದು ನ್ಯಾಯಾಲಯದ ಆದೇಶದಂತೆ ಮಸೀದಿ ನಿರ್ಮಾಣವನ್ನು ನಿಲ್ಲಿಸುವಂತೆ ಪೋಲಿಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಇಬ್ಬರು ಮುಸ್ಲಿಂ ನಾಯಕರು ಎಸ್‌ಎಚ್‌ಒ ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ  ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಹೇಳಿರುವ ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಹಿಂದೂ ದೇವಸ್ಥಾನದ ಸ್ಥಳವನ್ನು ಅತಿಕ್ರಮಿಸಿ ಮಸೀದಿ ಕಟ್ಟುವುದನ್ನು ತಡೆಯಲು ಯತ್ನಿಸಿದ ಪೊಲೀಸರೊಂದಿಗೆ ಮುಸ್ಲಿಂ ನಾಯಕರು ಆಕ್ರಮಣಕಾರಿಯಾಗಿ ಮಾತನಾಡುವ ವೀಡಿಯೋ.

ಸತ್ಯಾಂಶ: ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಮಜೀದ್ ಗುಂಪು ಮತ್ತು ಇತರರ ನಡುವೆ ನಡೆಯುತ್ತಿರುವ ಜಗಳವನ್ನು ನಿಲ್ಲಿಸಲು ಜಿಎಚ್‌ಎಂಸಿಯ ಮೆಹ್ದಿಪಟ್ಟಣ ವಾರ್ಡ್‌ನ ಕಾರ್ಪೊರೇಟರ್ ಮಜೀದ್ ಹುಸೇನ್ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದ ವಿಡಿಯೊ ಇದಾಗಿದೆ. ಪೋಲಿಸರು ಮತ್ತು ಮಾಧ್ಯಮಗಳ ವರದಿಗಳ ಪ್ರಕಾರ, ಈ ಜಗಳವು ಆಸ್ತಿಯ ಮಾಲೀಕರಾಗಿರುವ ಎರಡು ಬಣಗಳ ನಡುವಿನ ಆಸ್ತಿ ವಿವಾದವಾಗಿದೆ. ಇದಕ್ಕೂ ಮಸೀದಿ ನಿರ್ಮಾಣ ಅಥವಾ ದೇವಾಲಯದ ಅತಿಕ್ರಮಣಕ್ಕೂ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಹೇಳಿರುವ ವಿಷಯ ತಪ್ಪಾಗಿದೆ.

ಪೋಸ್ಟ್‌ನಲ್ಲಿರುವ ವಿಡಿಯೊದಲ್ಲಿ ಜಿಎಚ್‌ಎಂಸಿಯ ಮೆಹ್ದಿಪಟ್ಟಣ ವಾರ್ಡ್‌ನ ಕಾರ್ಪೊರೇಟರ್ ಮಜೀದ್ ಹುಸೇನ್, ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಮಜೀದ್ ಗುಂಪು ಮತ್ತು ಇತರರ ನಡುವೆ ನಡೆಯುತ್ತಿರುವ ಜಗಳವನ್ನು ನಿಲ್ಲಿಸಲು ಯತ್ನಿಸಿದಾಗ ಪೊಲೀಸರೊಂದಿಗೆ ನಡೆಸಿದ ತೀವ್ರ ವಾಗ್ವಾದವನ್ನು ತೋರಿಸುತ್ತದೆ. ಇದಕ್ಕೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಹುಡುಕಾಡಿದಾಗ ಅನೇಕ ಸುದ್ದಿ ಲೇಖನಗಳು ವರದಿಯಾಗಿವೆ. ಆದರೆ, ಈ ಯಾವುದೇ ಲೇಖನಗಳು ಮಜೀದ್ ಗುಂಪು ಹಿಂದೂ ದೇವಾಲಯವನ್ನು ಅತಿಕ್ರಮಿಸುವ ಮೂಲಕ ಮಸೀದಿಯನ್ನು ನಿರ್ಮಿಸಲು ಪ್ರಯತ್ನಿಸಿದೆ ಎಂದು ವರದಿ ಮಾಡಿಲ್ಲ.

ವಾಸ್ತವವಾಗಿ, ಈ ಲೇಖನಗಳು ಇದು ಆಸ್ತಿಯ ಹಕ್ಕಿನ ಬಗ್ಗೆ ಎರಡು ಪಕ್ಷಗಳ ನಡುವಿನ ನಾಗರಿಕ ವಿವಾದ ಎಂದು ಸ್ಪಷ್ಟವಾಗಿ ಹೇಳಿದೆ. ಇದಲ್ಲದೆ, ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 353 ರ ಅಡಿಯಲ್ಲಿ ಮಜೀದ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲೇಖನಗಳು ವರದಿ ಮಾಡಿವೆ. ಮಜೀದ್ ಹುಸೇನ್ ಜೊತೆಗೆ ವಾದದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ವ್ಯಕ್ತಿಯ (ನಿಖಿಲ್ ರೆಡ್ಡಿ) ದೂರಿನ ಆಧಾರದ ಮೇಲೆ ಆತನ ಆಸ್ತಿಗೆ ಬೆದರಿಕೆ ಮತ್ತು ಅತಿಕ್ರಮ ಪ್ರವೇಶಕ್ಕಾಗಿ ಎರಡನೇ ಪ್ರಕರಣವನ್ನು ಮಜೀದ್ ಹುಸೇನ್ ವಿರುದ್ಧ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಸ್ಥಳೀಯ ಸುದ್ದಿ ವರದಿಗಳು ಕೂಡ ಆಸ್ತಿಯ ಮಾಲೀಕತ್ವಕ್ಕಾಗಿ ಎರಡು ಬಣಗಳ ನಡುವೆ ಜಗಳವಾಗಿದೆ ಎಂದು ವರದಿ ಮಾಡಿದೆ, ಮತ್ತು ಈ ವರದಿಗಳಲ್ಲಿ ಮಜೀದ್ ಗುಂಪು ಮಸೀದಿ ನಿರ್ಮಿಸಲು ಯತ್ನಿಸಿರುವುದು ಅಥವಾ ಹಿಂದೂ ದೇವಾಲಯದ ಅತಿಕ್ರಮಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಘಟನೆಯ ಬಗ್ಗೆ ಸ್ಪಷ್ಟೀಕರಣ ಕೋರಿ ಬಂಜಾರಾ ಹಿಲ್ಸ್ ಎಸ್‌ಎಚ್‌ಒರವರನ್ನು ಫ್ಯಾಕ್ಟ್ಲಿ ಸಂಪರ್ಕಿಸಿದಾಗ, ಅವರು ಮಜೀದ್ ಹುಸೇನ್ ಭಾಗಿಯಾಗಿರುವ ಗಲಾಟೆ ವಿಷಯವು ಆಸ್ತಿಯ ಮಾಲೀಕತ್ವದ ಬಗ್ಗೆಗಿನ ವಿವಾದವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಜೀದ್ ಗುಂಪು ಹಿಂದೂ ದೇವಾಲಯವನ್ನು ಅತಿಕ್ರಮಿಸುವ ಮೂಲಕ ಮಸೀದಿಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಕ್ಕಾಗಿ ಮಜೀದ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಪುನರುಚ್ಚರಿಸಿದೆ. ಆದ್ದರಿಂದ ಇವೆಲ್ಲವೂ ಮಜೀದ್ ಹುಸೇನ್ ಪೊಲೀಸರೊಂದಿಗಿನ ನಡೆಸಿದ ವಿವಾದವು ಮಸೀದಿ ನಿರ್ಮಾಣ ಅಥವಾ ದೇವಾಲಯದ ಅತಿಕ್ರಮಣವನ್ನು ಒಳಗೊಂಡಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಿಎಚ್‌ಎಂಸಿ ಕಾರ್ಪೊರೇಟರ್ ಪೊಲೀಸರ ಜೊತೆಗಿನ ವಾಗ್ವಾದದ ವಿಡಿಯೋವನ್ನು ಕೋಮುವಾದಿ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll