Fake News - Kannada
 

ಇಲ್ಲ, ನೆದರ್‌ಲ್ಯಾಂಡ್ಸ್‌ನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಲಾಗಿಲ್ಲ

0

ನೆದರ್‌ಲ್ಯಾಂಡ್ಸ್‌‌ ದೇಶವು ಡಚ್‌‌‌‌‌ ವಿದ್ಯಾರ್ಥಿಗಳಿಗೆ 5 ನೇ ತರಗತಿಯಿಂದ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಡಚ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಲಾಗಿದೆ.

ವಾಸ್ತವ: ಡಚ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಲಾಗಿಲ್ಲ. ನೆದರ್‌ಲ್ಯಾಂಡ್ಸ್‌‌ದೇಶದ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕಾಗದ ವಿಷಯಗಳ ಪಟ್ಟಿಯಲ್ಲಿ ಭಗವದ್ಗೀತೆಯ ಉಲ್ಲೇಖವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ, ಅದೇ ಚಿತ್ರ 20 ಸೆಪ್ಟೆಂಬರ್ 2013 ರಂದು ‘ಇಸ್ಕಾನ್ ಡಿಸೈರ್ ಟ್ರೀ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದನ್ನು ಕಂಡುಕೊಂಡಿದ್ದೇವೆ. ವೆಬ್‌ಸೈಟ್‌ನಲ್ಲಿ ಭಗವದ್ಗೀತೆಯೊಂದಿಗೆ ಇರುವ ಹಲವಾರು ಮಕ್ಕಳ ಚಿತ್ರಗಳು ಕಂಡುಬಂದಿವೆ. ಈ ಚಿತ್ರಗಳ ಶೀರ್ಷಿಕೆಯಲ್ಲಿ ‘ಸುಂದರವಾದ ಪುಟ್ಟ ವೈಷ್ಣವ !!!!’ ಎಂದು ಬರೆದಿದೆ. ಇಲ್ಲಿ ನೆದರ್‌ಲ್ಯಾಂಡ್ಸ್ ತನ್ನ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಕಡ್ಡಾಯಗೊಳಿಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 2014 ರಿಂದಲೂ ಇದೇ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು.

ನೆದರ್‌ಲ್ಯಾಂಡ್ಸ್‌‌ ದೇಶದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಲಿಸಲಾಗುತ್ತಿರುವ ವಿಷಯಗಳನ್ನು ನೋಡಲು ನಾವು ಅಲ್ಲಿನ ವೆಬ್‌ಸೈಟ್‌ನಲ್ಲಿ ಹುಡುಕಿದೆವು. ಆದರೆ ನೆದರ್‌ಲ್ಯಾಂಡ್ಸ್‌‌ನ ಪ್ರಾಥಮಿಕ ಶಾಲೆಗಳಲ್ಲಿ ಕಲಿಸಬೇಕಾದ ಕಡ್ಡಾಯ ವಿಷಯಗಳ ಪಟ್ಟಿಯಲ್ಲಿ ಭಗವದ್ಗೀತೆಯ ಬಗ್ಗೆ ಉಲ್ಲೇಖವಿಲ್ಲ.

ಭಾರತದಲ್ಲಿ 2017 ರಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಓದುವುದನ್ನು ಕಡ್ಡಾಯಗೊಳಿಸಲು ಖಾಸಗಿ ಸದಸ್ಯರ ಮಸೂದೆಯನ್ನು ಬಿಜೆಪಿ ಸಂಸತ್ ಸದಸ್ಯ ರಮೇಶ್ ಬಿಧೂರಿ ಮಂಡಿಸಿದ್ದರು. ಮಸೂದೆಯ ಕುರಿತಾದ ಸುದ್ದಿ ಲೇಖನಗಳನ್ನು ಇಲ್ಲಿ ನೋಡಬಹುದು. ಭಗವದ್ಗೀತೆಯನ್ನು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಶಿಕ್ಷಣ ಪಠ್ಯ ಪುಸ್ತಕ 2019 ರ ವಿಧೇಯಕ ಮಸೂದೆಯನ್ನು ರಮೇಶ್ ಬಿಧೂರಿ ಸಂಸತ್ತಿನ ಅಧಿವೇಶನದಲ್ಲಿ ಪರಿಚಯಿಸಿದರು.

ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ಡಚ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಲಾಗಿಲ್ಲ.

Share.

About Author

Comments are closed.

scroll