Fake News - Kannada
 

ಪಾಕಿಸ್ತಾನಿ ಪ್ರಜೆಯೊಬ್ಬರು ಅಧಿಕಾರಿಗೆ ಬೆದರಿಕೆ ಹಾಕಿರುವ ಹಳೆಯ ವೀಡಿಯೊವನ್ನು ಭಾರತದ್ದು ಎಂದು ಹಂಚಿಕೊಂಡಿದ್ದಾರೆ

0

ಮುಸ್ಲಿಂ ವ್ಯಕ್ತಿಯೊಬ್ಬ  ತಮ್ಮ ಮನೆಗೆ ವಿದ್ಯುತ್ ಸಂಪರ್ಕವನ್ನು ಕಳ್ಳತನದ ಮೂಲಕ ಪಡೆಯುತ್ತಿದ್ದ ಕೃತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ದೃಶ್ಯಗಳು ಮತ್ತು ತನ್ನ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಅಧಿಕಾರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತ ದೇಶದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯು ಅಧಿಕಾರಿಯೊಬ್ಬರಿಗೆ ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾನೆ ಇದನ್ನು ನೋಡಿಕೊಂಡು ನಾವು ಸುಮ್ಮನೆ ಕೂರುತ್ತೇವೆ ಎಂಬ ಹೇಳಿಕೆಯೊಂದಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ ನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಪ್ರತಿಪಾದನೆ : ಭಾರತೀಯ ಮುಸ್ಲಿಂ ಪ್ರಜೆಯೊಬ್ಬರು ವಿದ್ಯುತ್ ಕಳ್ಳತನದ ಕೃತ್ಯವನ್ನು ಒಪ್ಪಿಕೊಳ್ಳುವಾಗ ಅಧಿಕಾರಿಯನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ.

ನಿಜಾಂಶ : ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬರು ವಿದ್ಯುತ್ ಕದಿಯುವುದನ್ನು ಒಪ್ಪಿಕೊಳ್ಳುವಾಗ ವಿದ್ಯುತ್ ಅಧಿಕಾರಿಗೆ ಬೆದರಿಕೆ ಹಾಕುವುದನ್ನು ತೋರಿಸುತ್ತದೆ. ಈ ಘಟನೆಯು ಜುಲೈ 2020 ರಲ್ಲಿ ಕರಾಚಿಯಲ್ಲಿ ನಡೆದಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹಳೆಯದು ಮತ್ತು ಪಾಕಿಸ್ತಾನದಿಂದ ಬಂದಿದೆ. ಆದ್ದರಿಂದ, ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ ಮಾಡಿದಾಗ, 28 ಜುಲೈ 2020 ರಂದು ‘Siasat.pk‘ ಸುದ್ದಿ ವಾಹಿನಿ ಮಾಡಿದ ಟ್ವೀಟ್‌ನಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊ ಕಂಡುಬಂದಿದೆ. ‘Siasat.pk’ ಅದನ್ನು ವ್ಯಕ್ತಿಯೊಬ್ಬ ಧೈರ್ಯದಿಂದ ತಪ್ಪೊಪ್ಪಿಕೊಂಡ ದೃಶ್ಯಗಳು ಎಂದು ವರದಿ ಮಾಡಿದೆ. ಕರಾಚಿಯಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ಕಳ್ಳತನ ಮಾಡಿ,  ಅಧಿಕಾರಿಗೆ ಬಹಿರಂಗವಾಗಿ ಹಾಕಿದ್ದಾನೆ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾನೆ. ಇದೊಂದು ಹಳೆಯ ಸುದ್ದಿಯಾಗಿದ್ದು ಅದನ್ನು ಭಾರತದಲ್ಲಿ ಮುಸ್ಲಿಂ ವ್ಯಕ್ತಿಯಿಂದ ಅಧಿಕಾರಿಗೆ ಬೆದರಿಕೆ ಎಂದು ಹಂಚಿಕೊಳ್ಳಲಾಗಿದೆ.

ನಾವು ಹೆಚ್ಚಿನ ಮೂಲಗಳನ್ನು ಹುಡುಕಿದಾಗ, ‘ARY News’ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾದ ಅದೇ ವೀಡಿಯೊ ಕಂಡುಬಂದಿದೆ. ‘ARY ನ್ಯೂಸ್’ ಇದನ್ನು ಕರಾಚಿಯ ವೀಡಿಯೊ ಎಂದು ದೃಢಪಡಿಸಿದೆ ಮತ್ತು ಆರೋಪಿಯನ್ನು ಶಾಹ್ರಿ ಅತೌರ್ ರೆಹಮಾನ್ ಎಂದು ಉಲ್ಲೇಖಿಸಿದೆ. ಸುದ್ದಿ ವರದಿಯ ಪ್ರಕಾರ, ಕರಾಚಿಯಲ್ಲಿ ಅತೌರ್ ರೆಹಮಾನ್ ಎಂಬ ವ್ಯಕ್ತಿಯು ತನ್ನ ಮನೆಗೆ ಕಳ್ಳತನದ ಮೂಲಕ ವಿದ್ಯುತ್ ಸಂಪರ್ಕ ಹೊಂದಿದ್ದನು ಅದನ್ನು ಪಾಕಿಸ್ತಾನ ಮೂಲದ ಪವರ್ ಯುಟಿಲಿಟಿ ಕಂಪನಿಯಾದ ಕೆ-ಎಲೆಕ್ಟ್ರಿಕ್ ಲಿಮಿಟೆಡ್‌ನ ಅಧಿಕಾರಿಗಳು  ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ವಿದ್ಯುತ್ ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡ ಅತೌರ್ ರೆಹಮಾನ್, ತನ್ನ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಅಧಿಕಾರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ವರದಿಯಾಗಿದೆ.

K-Electric Limited ಇದೇ ವೀಡಿಯೊವನ್ನು 27 ಜುಲೈ 2020 ರಂದು ಟ್ವೀಟ್ ಮಾಡಿದೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊವು ಪಾಕಿಸ್ತಾನದಲ್ಲಿ ನಡೆದ ಹಳೆಯ ಘಟನೆಯನ್ನು ತೋರಿಸುತ್ತದೆ, ಭಾರತದಲ್ಲಿ ಅಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದ ಪ್ರಜೆಯೊಬ್ಬರು ಕರಾಚಿಯಲ್ಲಿ ವಿದ್ಯುತ್ ಅಧಿಕಾರಿಗೆ ಬೆದರಿಕೆ ಹಾಕುವ ಹಳೆಯ ವೀಡಿಯೊವನ್ನು, ಭಾರತದ ಮುಸ್ಲಿಂ ಪ್ರಜೆಯೊಬ್ಬರು ವಿದ್ಯುತ್ ಕಳ್ಳತನದ ಕೃತ್ಯವನ್ನು ಒಪ್ಪಿಕೊಳ್ಳುವಾಗ ಅಧಿಕಾರಿಯನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll