Fake News - Kannada
 

ರಾಹುಲ್ ಗಾಂಧಿಯವರ ಮಹಿಳಾ ಸಬಲೀಕರಣದ ಕುರಿತ ಭಾಷಣದ ಕೆಲವು ಸಾಲುಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

’ಮಹಾತ್ಮಾ ಗಾಂಧಿ ಅವರ ಜೊತೆಯಲ್ಲಿ ಮಹಿಳೆಯರನ್ನು ಕಾಣಬಹುದು ಹೊರತು ನೀವು ಎಂದಾದರೂ ಮೋಹನ್ ಭಾಗವತ್ ಜೊತೆಗೆ ಮಹಿಳೆಯರನ್ನು ನೋಡಿದ್ದೀರಾ..?’ ಎನ್ನುವ ರಾಹುಲ್ ಗಾಂಧಿ ಅವರ ವಿಡಿಯೋವನ್ನು ಹಂಚಿಕೊಳ್ಳುತ್ತಿರುವವರು “ ಮೋಹನ್ ಭಾಗವತ್ ಅವರನ್ನು ತೆಗಳುವ ಭರದಲ್ಲಿ ರಾಹುಲ್ ಗಾಂಧಿ ಮೋಹನದಾಸ ಕರಮಚಂದ್ರ ಗಾಂಧಿಯವರನ್ನು ಅವಮಾನಿಸಿದ್ದು ಗೊತ್ತೇ ಆಗಲಿಲ್ಲ. ಮಹಿಳೆಯರಿಗೆ ಬೇರೆ ಅಸ್ತಿತ್ವ ಇಲ್ಲ ಎಂದಿದ್ದಾರೆ ಎಂದು ಪೋಸ್ಟ್‌ಗಳಲ್ಲಿ ಹೇಳಿದ್ದಾರೆ. ಈ ಪೋಸ್ಟ್‌ಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸೋಣ.

ಪ್ರತಿಪಾದನೆ: ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ’ಪ್ರತಿಯೊಬ್ಬ ಪುರುಷನಿಗೂ ಮಹಿಳೆಯರಿರುವುದು ಅಗತ್ಯ ಮತ್ತು ಸಹಜ’ ಎಂದು ರಾಹುಲ್ ಗಾಂಧಿಯವರು ಭಾಷಣದಲ್ಲಿ ಹೇಳಿದ್ದಾರೆ.

ನಿಜಾಂಶ: ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಹಿಳೆಯರಿಗೆ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ ಆರ್‌ಎಸ್‌ಎಸ್ ಮತ್ತು ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಈ ಟೀಕೆಗಳನ್ನು ರಾಹುಲ್ ಗಾಂಧಿ ಮಾಡಿದ್ದಾರೆ.   ಆರೆಸ್ಸೆಸ್ ಮಹಿಳೆಯರನ್ನು ತುಳಿಯುತ್ತದೆ. ಆದರೆ ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ವೇದಿಕೆಯನ್ನು ನೀಡುತ್ತದೆ ಎಂದಿದ್ದಾರೆ. ಮೇಲಾಗಿ, ಈ ಭಾಷಣದಲ್ಲಿ ಎಲ್ಲಿಯೂ ರಾಹುಲ್ ಗಾಂಧಿ, ಮಹಾತ್ಮಾ ಗಾಂಧೀ ಮತ್ತು ಮಹಿಳೆಯರನ್ನು ಅವಮಾನಿಸಿಲ್ಲ. ಆದುದರಿಂದ ಪೋಸ್ಟ್ ಮೂಲಕ ಏನು ಹೇಳಲಾಗುತ್ತಿದೆಯೋ ಅದು ತಪ್ಪಾಗಿದೆ.

2021 ರ ಸೆಪ್ಟೆಂಬರ್ 15 ರಂದು ದೆಹಲಿಯಲ್ಲಿ ಮಹಿಳಾ ಕಾಂಗ್ರೆಸ್ ಸ್ಥಾಪನೆಯ ದಿನದಂದು ನಡೆದ ಸಭೆಯಲ್ಲಿ ರಾಹುಲ್ ಗಾಂಧಿಯವರ ಭಾಷಣದಿಂದ ಈ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ವಿಡಿಯೊದಲ್ಲಿ ನೀವು ರಾಹುಲ್ ಗಾಂಧಿ 17:50 ನಿಮಿಷದಲ್ಲಿ ಈ ಹೇಳಿಕೆಗಳನ್ನು ನೀಡುವುದನ್ನು ನೋಡಬಹುದು.

ರಾಹುಲ್ ಗಾಂಧಿ ಈ ಸಭೆಯಲ್ಲಿ ಮಹಿಳಾ ಸಬಲೀಕರಣವನ್ನು ಉದ್ದೇಶಿಸಿ ಮಾತನಾಡುವಾಗ ಒಂದು ಸಂದರ್ಭದಲ್ಲಿ ‘ಚಿತ್ರಗಳಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಮೂರು-ನಾಲ್ಕು ಮಹಿಳೆಯರನ್ನು ನೀವು ನೋಡಬಹುದು. ಆದರೆ, ಮೋಹನ್ ಭಾಗವತ್ ಎಂದಾದರೂ ಮಹಿಳೆಯರನ್ನು ನೋಡಿದ್ದಾರೆಯೇ? ಮೋಹನ್ ಭಾಗವತ್ ಜೊತೆಯಲ್ಲಿ ಮಹಿಳೆಯರನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ಅವರ ಸಂಘಟನೆ (ಆರೆಸ್ಸೆಸ್) ಮಹಿಳೆಯರನ್ನು ತುಳಿಯುತ್ತದೆ, ಆದರೆ ನಮ್ಮ ಸಂಘಟನೆ ಮಹಿಳಾ ಸಬಲೀಕರಣಕ್ಕೆ ವೇದಿಕೆಯನ್ನು ನೀಡುತ್ತದೆ’ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಭಾಷಣದ, ‘ಮಹಾತ್ಮ ಗಾಂಧಿಯವರ ಜೊತೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಾರೆ. ನೀವು ಎಂದಾದರೂ ಮೋಹನ್ ಭಾಗವತ್ ಜೊತೆಯಲ್ಲಿ ಮಹಿಳೆಯರನ್ನು ನೋಡಿದ್ದೀರಾ?’ ಎಂಬ ಭಾಗವನ್ನು ಮಾತ್ರ ತೆಗೆದುಕೊಂಡು ಶೇರ್‍ ಮಾಡಲಾಗುತ್ತಿದೆ. ಭಾಷಣದ ಮುಂದುವರಿದ ಭಾಗವಾದ   ಮಹಿಳೆಯರನ್ನು ತುಳಿಯುತ್ತದೆ. ಆದರೆ, ನಮ್ಮ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ವೇದಿಕೆಯನ್ನು ನೀಡುತ್ತದೆ’ ಎಂಬ ಹೇಳಿಕೆಗಳನ್ನು ತೆಗೆದುಹಾಕಿದ್ದಾರೆ.

ಈ ವಿಡಿಯೊ ತಿಳಿಸುವುದೇನೆಂದರೆ, ಮಹಿಳೆಯರಿಗೆ ಅವಕಾಶಗಳನ್ನು ಒದಗಿಸುವ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ ಹೊರತು, ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ’ಪ್ರತಿಯೊಬ್ಬ ಪುರುಷನಿಗೂ ಮಹಿಳೆಯರಿರುವುದು ಅಗತ್ಯ ಮತ್ತು ಸಹಜ ಎಂದು ಹೇಳಿಲ್ಲ.

ಹೀಗಾಗಿ ರಾಹುಲ್ ಗಾಂದಿ ಅವರ ಭಾಷಣದ ಕೆಲ ಸಾಲುಗಳನ್ನು ಇಟ್ಟುಕೊಂಡು ಮಹಿಳೆಯರು ಮತ್ತು ಮಹಾತ್ಮಾ ಗಾಂಧಿ ಅವರನ್ನು ಅವಮಾನ ಮಾಡುತ್ತಿದ್ದಾರೆ ಎಂದು ಪೋಸ್ಟ್‌ಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll