Fake News - Kannada
 

ಇದು ಹಿಮಾಲಯದಲ್ಲಿ ಕಂಡುಬರುವ ಅಪರೂಪದ ಫಾಕ್ಸ್ ಟೈಲ್ ಲಿಲೀಸ್ ಸಸ್ಯವಲ್ಲ

0

ಪವಿತ್ರವಾದ ಪಗೋಡಾ/ಮಹಾಮೇರು ಹೂವುಗಳು ಹಿಮಾಲಯದಲ್ಲಿ ಪ್ರತಿ 400 ವರ್ಷಗಳಿಗೊಮ್ಮೆಅರಳುತ್ತವೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾದರೆ ಆ  ಹೂವಿನ ಬಗೆಗಿರುವ ಲೇಖನ ನಿಜ ಅಂಶವನ್ನು ತಿಳಿಯೋಣ.

ಕ್ಲೇಮ್: ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಅರಳುವ ಪಗೋಡ/ಮಹಾಮೇರು ಹೂವಿನ ವಿಡಿಯೋ.

ಫ್ಯಾಕ್ಟ್ : ಈ ವೀಡಿಯೊದಲ್ಲಿ ತೋರಿಸಿರುವ ಸಸ್ಯವನ್ನು ಫಾಕ್ಸ್ ಟೈಲ್ ಲಿಲೀಸ್ ಎಂದು ಕರೆಯಲಾಗುತ್ತದೆ. ಇವು ಪಶ್ಚಿಮ ಮತ್ತು ಮಧ್ಯ ಏಷ್ಯಾಕ್ಕೆ ಸೇರಿದಾಗಿದೆ. ಈ ಸಸ್ಯಗಳು ಸಾಮಾನ್ಯವಾಗಿ ವಸಂತಕಾಲದ ಕೊನೆಯಿಂದ ಬೇಸಿಗೆಯ ಆರಂಭದವರೆಗೆ ಅರಳುತ್ತವೆ. ಆದರೆ ನಿಜವಾಗಿಯೂ ಪಗೋಡಾ ಹೆಸರಿನ ಹೂವು ಇದ್ದರೂ, ಇವು ಅಪರೂಪದ ಹೂವುಗಳಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ವೈರಲ್ ಆಗಿರುವ ವೀಡಿಯೋ ಫಾಕ್ಸ್‌ಟೈಲ್ ಲಿಲ್ಲಿಸ್, (Foxtail Lilies) ಆದರೆ ಪೋಸ್ಟ್‌ನಲ್ಲಿ ಹೇಳಿರುವಂತೆ ಪಗೋಡಾ ಹೂವು ಅಲ್ಲ. ಈ ಸಸ್ಯಕ್ಕೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಇದು ಪಶ್ಚಿಮ ಮತ್ತು ಮಧ್ಯ ಏಷ್ಯಾಕ್ಕೆ ಸೇರಿದಾಗಿದೆ. ಎರೆಮುರಸ್ (Eremurus)  ಎಂಬುದು ಈ ಸಸ್ಯದ ವೈಜ್ಞಾನಿಕ ಹೆಸರು.

ಪೋಸ್ಟ್ ಹೇಳುವಂತೆ ಇವು ಅಪರೂಪದ ಹೂವುಗಳಲ್ಲ. ಈಗ ಅಂತರ್ಜಾಲದ ಮೂಲಕವೂ ಈ ಗಿಡಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸಸ್ಯಗಳು ಸಾಮಾನ್ಯವಾಗಿ ವಸಂತಕಾಲದ ಅಂತ್ಯದಿಂದ ಬೇಸಿಗೆಯ ಆರಂಭದವರೆಗೆ ಅರಳುತ್ತವೆ. ಅವು ವಿವಿಧ ಬಣ್ಣಗಳು ಮತ್ತು ಎತ್ತರಗಳಲ್ಲಿ ಕಂಡು  ಬರುತ್ತಾರೆ. ಸುಮಾರು 8 ಅಡಿ ಎತ್ತರಕ್ಕೆ ಬೆಳೆಯುತ್ತವೆ.  ಈ ಸಸ್ಯಗಳ ಬೆಳೆಸುವ ಬಗ್ಗೆ ಅನೇಕ ವೀಡಿಯೊಗಳು ಇಂಟರ್ನೆಟ್ ನಲ್ಲಿಯೂ ಲಭ್ಯವಿದೆ.

ಪಗೋಡ ಹೂ:

ನಿಜವಾಗಿಯೂ ಪಗೋಡಾ ಹೆಸರಿನ ಹೂವೊಂದಿದೆ. ಕ್ಲೆರೋಡೆಂಡ್ರಮ್ ಪ್ಯಾನಿಕ್ಯುಲೇಟಮ್  (Clerodendrum paniculatum) ಎಂಬುದು ಆಗ್ನೇಯ ಚೀನಾದಿಂದ ಬಂದ ಈ ಹೂವುಗಳ ವೈಜ್ಞಾನಿಕ ಹೆಸರು. ಆದರೆ ಈ ಹೂವುಗಳು ಬೇಸಿಗೆಯ ಮಧ್ಯದಿಂದ ವಸಂತಕಾಲದವರೆಗೆ ಅರಳುತ್ತವೆ.

ಈ ಹಿಂದೆ ಕೂಡ ಅಪರೂಪದ ಹೂವುಗಳ ಬಗ್ಗೆ ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಾರೆ:

ಈ ಹಿಂದೆಯೂ ಇಂತಹ ಅಪರೂಪದ ಹೂವುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಹಿಮಾಲಯದಲ್ಲಿ ಹೆಚ್ಚಾಗಿ ಕಂಡುಬರುವ ‘ಸಿಕ್ಕಿಂ ರಬಾರ್ಬ್‘ ಹೂವಾಗಿದ್ದು, ಇದನ್ನು  400 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಹಿಮಾಲಯದ  ‘ಮಹಾಮೇರು ಆರ್ಯಪುಷಂ’ ಎಂದು ಹಂಚಿಕೊಳ್ಳಲಾಗಿದೆ.

ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಸೈಕಾಡ್‌ಗಳ (Cycads) ಜಾತಿಗೆ ಸೇರಿದ ಬೀಜದ ಸಸ್ಯವು ಹಿಮಾಲಯದಲ್ಲಿ 99 ವರ್ಷಗಳಿಗೊಮ್ಮೆ ಮಾತ್ರ ಹೊರಬರುವ ಶಿವಲಿಂಗ ಹೂವು ಎಂದು ಶೇರ್ ಮಾಡಿದ್ದರು.

ಅಮೆರಿಕಾದಲ್ಲಿ ಸಾಮಾನ್ಯವಾಗಿ ಕಂಡುಬರುವ ‘ಸಗುರೊ’ ಮತ್ತು ‘ಸಾಲ್ವಿಯಾ ಹಾಟ್ ಲಿಪ್ಸ್’ ಹೂವುಗಳನ್ನು ಹಿಮಾಲಯದಲ್ಲಿ ಅಪರೂಪದ ಮಹಾಮೇರು ಹೂವು ಎಂದು ಹಂಚಿಕೊಳ್ಳಲಾಗಿತ್ತು.

ಕೊನೆಯದಾಗಿ,  ಸಾಮಾನ್ಯ ಫಾಕ್ಸ್‌ಟೈಲ್ ಲಿಲೀಸ್ ಸಸ್ಯವನ್ನು ಹಿಮಾಲಯದಲ್ಲಿ ಅಪರೂಪದ ಹೂವೆಂದು ಶೇರ್ ಮಾಡಲಾಗಿದೆ.

Share.

Comments are closed.

scroll