ಬಾಲಕಿಯೊಬ್ಬಳು ಸಾಯಿಬಾಬಾ ಅವರ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಅನ್ನು ಚಿತ್ರಿಸುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಕೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ತ್ಯಾಗರಾಜ್ ನಗರದಲ್ಲಿರುವ ಅರುಣಾ ಸಾಯಿರಾಮ್, ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬಾಲಕಿ ಈ ಸಾಯಿಬಾಬಾ ಮೊಸಾಯಿಕ್ ಅನ್ನು ರಚಿಸಿದ್ದು, ಈ ವಿಡಿಯೋ 2021 ರಲ್ಲಿಯೂ ವೈರಲ್ ಆಗಿತ್ತು. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್ : ಸಾಯಿಬಾಬಾ ಅವರ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಅನ್ನು ಚಿತ್ರಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಸೇರಿದ ವೀಡಿಯೊ.
ಫ್ಯಾಕ್ಟ್ : ವೀಡಿಯೋದಲ್ಲಿ ತೋರಿಸಿರುವ ಸಾಯಿಬಾಬಾರ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪಟ್ಟಿ ಸೇರಿಲ್ಲ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ನಲ್ಲಿ ಅರುಣಾ ಸಾಯಿರಾಂ ಹೆಸರಿನಲ್ಲಿಯಾವುದೇ ದಾಖಲೆಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಈ ಕುರಿತಾದ ಮಾಹಿತಿಯು ಹಿಂದೆಯೂ ವೈರಲ್ ಆಗಿದ್ದು, 2021 ರಲ್ಲಿ15 ವರ್ಷದ ಅರುಣಾ ಸಾಯಿರಾಂ ಅವರು ವೀಡಿಯೊವನ್ನು ಹಲವಾರು ಯೂಟ್ಯೂಬ್ ಚಾನೆಲ್‌ಗಳು ಮತ್ತು ಫೇಸ್‌ಬುಕ್ ಪೇಜ್ಗಳು ಪೋಸ್ಟ್ ಮಾಡಿದ್ದು, ರೂಬಿಕ್ ಕ್ಯೂಬ್‌ಗಳೊಂದಿಗೆ ಶ್ರೀ ಸಾಯಿಬಾಬಾ ಚಿತ್ರವನ್ನು ರಚಿಸಿದ್ದಕ್ಕಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅನ್ನು ಸೇರಿದ್ದಾರೆ ಎಂದು ತಿಳಿಸಿತ್ತು. ಸಾಯಿಬಾಬಾ ಅವರ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಚಿತ್ರದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗಳನ್ನು ಪರಿಶೀಲಿಸಿದಾಗ, ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ನ ಅಧಿಕೃತ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಯಾವುದೇ ದಾಖಲೆ ಕಂಡುಬಂದಿಲ್ಲ. ಹಾಗೂ ರೂಬಿಕ್ಸ್ ವಿಭಾಗದಲ್ಲಿ ಸಾಧಿಸಿದ ವಿವಿಧ ದಾಖಲೆಗಳು ಇಲ್ಲಿವೆ.
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಅರುಣಾ ಸಾಯಿರಾಂ ಹೆಸರಿನ ಯಾವುದೇ ದಾಖಲೆಗಳಿಲ್ಲ. ಪ್ರಿನ್ಸ್ ಹ್ಯಾರಿಯ ಪೋಟ್ರೈಟ್ ಚಿತ್ರವು ಪಜಲ್ ಕ್ಯೂಬ್ ಮೊಸಾಯಿಕ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ “ಮೋಸ್ಟ್ ಕಾಂಟ್ರಿಬ್ಯುಶನ್ಸ್ ಟು ಆ ರೋರೇಟಿಂಗ್ ಫಜಲ್ ಕ್ಯೂಬ್ ಮೊಸಾಯಿಕ್ ” ಎಂಬ ವಿಭಾಗದಲ್ಲಿ ಸ್ಥಾನ ಗಳಿಸಿದೆ.
ತಮಿಳುನಾಡಿನ 15 ವರ್ಷದ ಬಾಲಕ ಶನತ್ ಧೀಪಕ್ ರಾಮ್, 500 – 750 ರೂಬಿಕ್ಸ್ ಕ್ಯೂಬ್‌ಬಳಸಿ 20 ಕ್ಕೂ ಹೆಚ್ಚು ಭಾವಚಿತ್ರಗಳನ್ನು ರಚಿಸಿ, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾನೆ. ಅದರಲ್ಲಿ ಸಾಯಿಬಾಬಾ, ಗಣೇಶ, ಜೀಸಸ್ ಕ್ರೈಸ್ಟ್, ಆಂಡಾಳ್ ಮತ್ತು ಇತರ ದೇವರು ಮತ್ತು ದೇವತೆಗಳ ಭಾವಚಿತ್ರಗಳು ಒಳಗೊಂಡಿವೆ. ಅಂತಾರಾಷ್ಟ್ರೀಯ ವಿಶ್ವ ದಾಖಲೆಗಳಲ್ಲಿ ಸಾಯಿಬಾಬಾರ ಅತಿ ಚಿಕ್ಕ ಪೋಟ್ರೈಲ್ ರಂಗೋಲಿ ಮತ್ತು 40,000 ಚದರ ಪ್ರದೇಶದಲ್ಲಿ ಸಾಯಿಬಾಬಾ ರಂಗೋಲಿ ಭಾವಚಿತ್ರವು ಸಾಧನೆಯ ಪಟ್ಟಿ ಸೇರಿದೆ. ಆದರೆ ಇಲ್ಲಿ ಸಾಯಿಬಾಬಾ ಅವರ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸೇರ್ಪಡೆಗೊಂಡ ಬಗ್ಗೆ ಯಾವುದೇ ದಾಖಲೆಗಳಿಲ್ಲ.
ಸಂಕ್ಷಿಪ್ತವಾಗಿ ಹೇಳುವುದಾದರೆ, ವೀಡಿಯೊದಲ್ಲಿ ತೋರಿಸಿರುವ ಸಾಯಿಬಾಬಾರ ಈ ರೂಬಿಕ್ಸ್ ಕ್ಯೂಬ್ ಮೊಸಾಯಿಕ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಪಟ್ಟಿ ಸೇರಿಲ್ಲ.