Fake News - Kannada
 

‘Omicron-XBB’ ಉಪ-ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ 5 ರಷ್ಟು ಹೆಚ್ಚು ಅಪಾಯಕಾರಿ ಎಂದು ಸೂಚಿಸಲು ಯಾವುದೇ ಆಧಾರಗಳಿಲ್ಲ

0

ಇತ್ತೀಚೆಗೆ ಹಲವಾರು ದೇಶಗಳಲ್ಲಿ ಹೆಚ್ಚುತ್ತಿರುವ COVID-19 Omicron-XBB ವೇರಿಯಂಟ್ ಪ್ರಕರಣಗಳ ತೀವ್ರತೆ, ಮರಣ ಪ್ರಮಾಣ, ರೋಗಲಕ್ಷಣಗಳು ಮತ್ತು ವೈರಸ್ ಪತ್ತೆಯ ಕುರಿತಾದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಇದರಲ್ಲಿ ಎಷ್ಟು ಸತ್ಯವಿದೆ ಎಂದು ಈಗ ನೋಡೋಣ.

ಕ್ಲೈಮ್ : Omicron XBB ರೂಪಾಂತರವನ್ನು ಗುರುತಿಸುವುದು ಸುಲಭವಲ್ಲ. ಈ ರೂಪಾಂತರವು ಕೆಮ್ಮು ಮತ್ತು ಶೀತ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಇದು  ಡೆಲ್ಟಾ ರೂಪಾಂತರಕ್ಕಿಂತ 5 ರಷ್ಟು ಹೆಚ್ಚು ಅಪಾಯಕಾರಿ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿವೆ.

ಫ್ಯಾಕ್ಟ್ : WHO ಪ್ರಕಾರ, ವಿವಿಧ ದೇಶಗಳ ವರದಿಗಳನ್ನು ಪರಿಶೀಲಿಸಿದ ನಂತರ, Omicron – XBB ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ಗಂಭೀರವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಇತರ ‘ಓಮಿಕ್ರಾನ್’ ರೂಪಾಂತರಗಳಿಗಿಂತ XBB ಮರು-ಸೋಂಕು ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಪ್ರಾಥಮಿಕ ಡೇಟಾ ಸೂಚಿಸುತ್ತದೆ. ಈ ಬಗ್ಗೆ ಇನ್ನೂ ಸಂಪೂರ್ಣ ತನಿಖೆ ನಡೆಯಬೇಕಿದೆ.ಇತರ ರೂಪಾಂತರಗಳಂತೆ, ಇದನ್ನು ಸರಳ ಪರೀಕ್ಷೆಗಳಿಂದ ರೋಗನಿರ್ಣಯ ಮಾಡಬಹುದು. ಭಾರತ ಮತ್ತು ಸಿಂಗಾಪುರದಲ್ಲಿ ಈ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಜನರು ಜ್ವರ ಮತ್ತು ಗಂಟಲು ನೋವಿನಂತಹ ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದರು. ಹೆಚ್ಚಿನ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದೆ ಚೇತರಿಸಿಕೊಳ್ಳುತ್ತಿದ್ಧಾರೆ. ಭಾರತ, ಸಿಂಗಾಪುರ ಮತ್ತು ಮಲೇಷ್ಯಾ ಸರ್ಕಾರಗಳು ಇಂತಹ ಪೋಸ್ಟ್‌ಗಳನ್ನು ನಂಬಬೇಡಿ ಮತ್ತು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಅನುಸರಿಸುವಂತೆ ಜನರನ್ನು ಒತ್ತಾಯಿಸಿವೆ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪುದಾರಿಗೆಳೆಯುವಂತಿದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಅಧಿಕೃತ ವೆಬ್‌ಸೈಟ್ ಪ್ರಕಾರ, XBB ಕರೋನಾ ವೈರಸ್ ರೂಪಾಂತರದ ‘ಓಮಿಕ್ರಾನ್’ ನ ಉಪ-ರೂಪವಾಗಿದೆ. ಇದನ್ನು ಆಗಸ್ಟ್ 2022 ರಲ್ಲಿ ಗುರುತಿಸಲಾಯಿತು. WHO ವರದಿಯ ಪ್ರಕಾರ, ವಿವಿಧ ದೇಶಗಳ ವರದಿಗಳನ್ನು ಪರಿಶೀಲಿಸಿದ ನಂತರ, Omicron – XBB ತೀವ್ರತೆಯು ಹಿಂದಿನ ರೂಪಾಂತರಗಳಿಗಿಂತ ಹೆಚ್ಚಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಇತರ ‘ಓಮಿಕ್ರಾನ್’ ರೂಪಾಂತರಗಳಿಗಿಂತ XBB ಮರು-ಸೋಂಕು ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಪ್ರಾಥಮಿಕ ಡೇಟಾ ಸೂಚಿಸುತ್ತದೆ. ಈ ಬಗ್ಗೆ ಇನ್ನೂ ಸಂಪೂರ್ಣ ತನಿಖೆ ನಡೆಯಬೇಕಿದೆ. ಆದರೆ  ಇಲ್ಲಿಯವರೆಗೆ, ಈ ಉಪ-ವ್ಯತ್ಯಯವು ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸುತ್ತದೆ ಮತ್ತು ದೇಹದ ಮೇಲೆ ದಾಳಿ ಮಾಡುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. WHO ನಿಯಮಿತವಾಗಿ ವೈರಸ್ ಹರಡುವಿಕೆಯನ್ನು ಪರಿಶೀಲಿಸುತ್ತಿದೆ ಮತ್ತು ಎಂದಿನಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಸಲಹೆ ನೀಡಿದೆ.

 ಇತರ ರೂಪಾಂತರಗಳಂತೆ, ‘ಓಮಿಕ್ರಾನ್’ ಅನ್ನು ಸಹ ಸರಳ ಪರೀಕ್ಷೆಗಳಿಂದ ಕಂಡುಹಿಡಿಯಬಹುದು. ಇದಕ್ಕಾಗಿ ಯಾವುದೇ ವಿಶೇಷ ಪರೀಕ್ಷೆಗಳಿಲ್ಲ. ಇನ್ನು ಇಲ್ಲಿಯವರೆಗೆ ಈ ವೈರಸ್ ಭಾರತ ಮತ್ತು ಸಿಂಗಾಪುರದಲ್ಲಿ ಹರಡಿದ್ದರೂ, ಜ್ವರ ಮತ್ತು ಗಂಟಲು ನೋವಿನಂತಹ ಸೌಮ್ಯ ಲಕ್ಷಣಗಳು ಮಾತ್ರ ಪತ್ತೆಯಾಗಿವೆ ಮತ್ತು ಹೆಚ್ಚಿನ ಜನರು ಆಸ್ಪತ್ರೆಯ ಚಿಕಿತ್ಸೆಯ ಅಗತ್ಯವಿಲ್ಲದೆ ಚೇತರಿಸಿಕೊಂಡಿದ್ದಾರೆ.

ಇದೇ ಪೋಸ್ಟ್ ಭಾರತ ಹಾಗೂ ಸಿಂಗಾಪುರ, ಮಲೇಷ್ಯಾದಂತಹ ಇತರ ದೇಶಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಯಾ ಸರ್ಕಾರಗಳು ಇದನ್ನು ಸುಳ್ಳು ಪೋಸ್ಟ್ ಎಂದು ಖಚಿತಪಡಿಸಿವೆ.

ಒಟ್ಟಾರೆಯಾಗಿ, Omicron-XBB ಉಪ-ವ್ಯತ್ಯಯವು ಡೆಲ್ಟಾ ರೂಪಾಂತರಕ್ಕಿಂತ 5 ರಷ್ಟು ಹೆಚ್ಚು ಅಪಾಯಕಾರಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

Share.

Comments are closed.

scroll