ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಭುಗಿಲೆದ್ದಾಗ ಜನಸಮೂಹವು ಪೋಲಿಸ್ ವಾಹನವನ್ನು ಧ್ವಂಸಗೊಳಿಸುವ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಘೋಷಣೆಯ ನಂತರ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಈ ಹಿಂಸಾಚಾರ ನಡೆಸಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ಲೇಖನದ ಮೂಲಕ ಈ ಪೋಸ್ಟ್‌ನ ಸತ್ಯಾಂಶವನ್ನು ಪರಿಶೀಲಿಸೋಣ.
ಪ್ರತಿಪಾದನೆ: ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಟಿಎಂಸಿ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿದ ವಿಡಿಯೋ.
ನಿಜಾಂಶ: ಒಡಿಶಾದ ಭದ್ರಾಕ್ ಜಿಲ್ಲೆಯ ಹಳ್ಳಿಯ ಸ್ಥಳೀಯ ನಿವಾಸಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇದಾಗಿದೆ. ವಿಚಾರಣೆ ಸಮಯದಲ್ಲಿ “ಪೊಲೀಸರು ಹಳ್ಳಿಯ ನಿವಾಸಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ, ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸರ ವಾಹನವನ್ನು ಧ್ವಂಸಗೊಳಿಸಿದ್ದಾರೆ” ಎಂದು ತಿಳಿದುಬಂದಿದೆ. ಈ ಘಟನೆಯನ್ನು ಅನೇಕ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೂ ಈ ವೀಡಿಯೊಗು ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ
ಈ ವಿಡಿಯೊಗೆ ಸಂಬಂಧಿತ ಕೀವರ್ಡ್‌ಗಳೊಂದಿಗಿನ ಗೂಗಲ್‌ನಲ್ಲಿ ಹುಡುಕಾಡಿದಾಗ ಅದು ಜನವರಿ 2021 ರ ಸುದ್ದಿ ಲೇಖನವೊಂದರಲ್ಲಿ ಈ ವೀಡಿಯೊದಲ್ಲಿ ಹೋಲುವ ವಾಹನದ ಚಿತ್ರವನ್ನು ಪ್ರಕಟಿಸಿತ್ತು. ಚಿತ್ರದಲ್ಲಿ ತೋರಿಸಿರುವ ವಾಹನದ ಸುತ್ತಲಿನ ಪ್ರದೇಶವು ವೀಡಿಯೊದ ತೋರಿಸಿರುವ ಸ್ಥಳಕ್ಕೆ ಹೋಲುತ್ತದೆ. ಈ ಲೇಖನದ ಪ್ರಕಾರ, ಅದೇ ಗ್ರಾಮದ ನಿವಾಸಿ ಬಾಪಿ ಮಹಾಲಿಕ್ ಅವರ ಸಾವಿನ ನಂತರ ಹಿಂಸಾಚಾರ ಶುರುವಾಗಿದೆ ಎನ್ನಲಾಗಿದೆ. ಆಕ್ರೋಶಗೊಂಡ ಹತುರಿ ಗ್ರಾಮದ ಸ್ಥಳೀಯರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಈ ಲೇಖನದಿಂದ ಸುಳಿವು ಪಡೆದು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಮತ್ತೆ ಹುಡುಕಾಟ ನಡೆಸಿದಾಗ, ಯೂಟ್ಯೂಬ್‌ನಲ್ಲಿದ್ದ ಸುದ್ದಿ ವೀಡಿಯೊ ದೊರೆತಿದೆ. ಅದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ ಘಟನೆಯನ್ನು ವರದಿ ಮಾಡಿದೆ. ಈ ವೀಡಿಯೊದಲ್ಲಿ, ಬೆಂಕಿ ಹೊತ್ತುಕೊಂಡಿರುವ ಜೀಪನ್ನು ಸುತ್ತುವರೆದಿರುವ ಪ್ರದೇಶದ ದೃಶ್ಯಗಳು ಪೋಸ್ಟ್‌ನಲ್ಲಿರುವ ವೀಡಿಯೊಗೆ ಹೋಲುತ್ತವೆ. ವೀಡಿಯೊದ ಶೀರ್ಷಿಕೆಯಲ್ಲಿ ‘ಭದ್ರಾಕ್‌ನಲ್ಲಿ ಸಾವಿಗೆ ಆಕ್ರೋಶಗೊಂಡ ಸ್ಥಳೀಯರು ಪೊಲೀಸ್ ವಾಹನಕ್ಕೆ ಬೆಂಕಿ ಇಟ್ಟರು’ಎಂದು ಬರೆಯಲಾಗಿದೆ.
ಮತ್ತಷ್ಟು ಹುಡುಕಾಟದಲ್ಲಿ ಇದೇ ಘಟನೆಯನ್ನು ವರದಿ ಮಾಡಿದ ಮತ್ತೊಂದು ಸುದ್ದಿ ಲೇಖನ ವರದಿಯಾಗಿರುವುದು ದೊರೆತಿದೆ. ಈ ಲೇಖನದ ಪ್ರಕಾರ, ಪೊಲೀಸರು ತಮ್ಮ ವಿಚಾರಣೆಯ ಸಮಯದಲ್ಲಿ ಪೊಲೀಸ್ ಹಲ್ಲೆಯಿಂದ ಭದ್ರಾಕ್‌ನ ವ್ಯಕ್ತಿ ಸಾವನ್ನಪ್ಪಿದ್ದರು. ಇದರಿಂದ ಭದ್ರಾಕ್‌ನ ಕೋಪಗೊಂಡ ನಿವಾಸಿಗಳು ಪೊಲೀಸ್ ವ್ಯಾನ್‌ಗೆ ಬೆಂಕಿ ಹಚ್ಚಿದರು ಎಂದು ಬರೆಯಲಾಗಿದೆ. ಈ ಎಲ್ಲಾ ವಿಡಿಯೋಗಳು ಒಡಿಶಾದಲ್ಲಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ಜನಸಮೂಹಕ್ಕೆ ಸಂಬಂಧಿಸಿದೆ. ಈ ವಿಡಿಯೊಗೂ ಬಂಗಾಳದಲ್ಲಿನ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೂಚಿಸುತ್ತದೆ.
ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಅನೇಕ ಹಿಂಸಾಚಾರಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ವ್ಯಾಪಕ ಹಿಂಸಾಚಾರ ಎಂದು ಬಿಜೆಪಿ 2021 ರ ಮೇ 5 ರಂದು ರಾಷ್ಟ್ರವ್ಯಾಪಿ ಧರಣಿ ಘೋಷಿಸಿತ್ತು. ಸಾಮೂಹಿಕ ಅತ್ಯಾಚಾರದ ಸುದ್ದಿಯನ್ನು ನಕಲಿ ಎಂದು ಹೇಳುವ ಟ್ವೀಟ್ ಹೊರತುಪಡಿಸಿ ಈ ಕುರಿತು ಪಶ್ಚಿಮ ಬಂಗಾಳ ಪೊಲೀಸರಿಂದ ಬೇರೆ ಯಾವುದೇ ವಿವರವಾದ ಮಾಹಿತಿ, ಹೇಳಿಕೆಗಳು ಬಂದಿಲ್ಲ.
ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ವರದಿಗಳ ದೃಷ್ಟಿಯಿಂದ, ಈ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದಾರಿತಪ್ಪಿಸುವ ಪ್ರತಿಪಾದನೆಯೊಂದಿಗೆ ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಒಡಿಶಾದಲ್ಲಿ ಜನಸಮೂಹ ಪೊಲೀಸರ ಮೇಲೆ ಹಲ್ಲೆ ಮಾಡುವ ವಿಡಿಯೋವನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.