ಉತ್ತರ ಪ್ರದೇಶದ ಪ್ರಯಾಗ್ ನಗರದಲ್ಲಿರುವ ನಾಗ ವಾಸುಕಿ ದೇವಾಲಯದ ಸುಂದರ ಶಿಲ್ಪ ಎಂದು ಹೇಳಿಕೊಳ್ಳುವ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ನಿಜಾಂಶವನ್ನು ಪರಿಶೀಲಿಸೋಣ.
ಪ್ರತಿಪಾದನೆ: ಉತ್ತರ ಪ್ರದೇಶದ ಪ್ರಯಾಗ್ ನಗರದಲ್ಲಿರುವ ನಾಗ ವಾಸುಕಿ ದೇವಸ್ಥಾನದಲ್ಲಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪದ ಛಾಯಾಚಿತ್ರ.
ನಿಜಾಂಶ: ಫೋಟೋದಲ್ಲಿನ ಶಿಲ್ಪಕಲೆ ಕರ್ನಾಟಕದ ಹಾವೇರಿ ಜಿಲ್ಲೆಯ ಉತ್ಸವ್ ರಾಕ್ ಗಾರ್ಡನ್‌ಗೆ ಸೇರಿದೆ. ಈ ಶಿಲ್ಪವನ್ನು ಉತ್ಸವ್ ರಾಕ್ ಗಾರ್ಡನ್ ಜಾಲತಾಣದಲ್ಲಿ ‘ಕಲಾತ್ಮಕ ಆಲದ ಮರ’ ಎಂದು ವಿವರಿಸಲಾಗಿದೆ. ಈ ಶಿಲ್ಪಕ್ಕೂ ಮತ್ತು ಪ್ರಯಾಗ್ ನಲ್ಲಿರುವ ನಾಗ ವಾಸುಕಿ ದೇವಸ್ಥಾನಕ್ಕೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್ ನಲ್ಲಿ ಹಂಚಲಾದ ಛಾಯಾಚಿತ್ರದ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ, “ವೇರ್ ಈಸ್ ದಿಸ್?” ಜಾಲತಾಣದಲ್ಲಿ ಈ ಶಿಲ್ಪದ ರೀತಿಯ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಜಾಲತಾಣದಲ್ಲಿ, ಛಾಯಾಚಿತ್ರದಲ್ಲಿರುವ ಶಿಲ್ಪಕಲೆಯು ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿರುವ ಉತ್ಸವ್ ರಾಕ್ ಗಾರ್ಡನ್‌ಗೆ ಸೇರಿದೆ ಎಂದು ಹೇಳಲಾಗಿದೆ.
ಈ ಕೀವರ್ಡ್ ಗಳನ್ನು ಬಳಸಿಕೊಂಡು ನಾವು ಇತರ ಅಧಿಕೃತ ಮೂಲಗಳಿಗಾಗಿ ಹುಡುಕಿದಾಗ, ಉತ್ಸವ ರಾಕ್ ಗಾರ್ಡನ್‌ನ ಅಧಿಕೃತ ಜಾಲತಾಣದಲ್ಲಿ ಶಿಲ್ಪದ ಇದೇ ರೀತಿಯ ಛಾಯಾಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಜಾಲತಾಣದಲ್ಲಿ, ಈ ಶಿಲ್ಪವನ್ನು ‘ಕಲಾತ್ಮಕ ಆಲದ ಮರ’ ಎಂದು ವಿವರಿಸಲಾಗಿದೆ. ಉತ್ಸವ್ ರಾಕ್ ಗಾರ್ಡನ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲೂ ಈ ಶಿಲ್ಪ ಕಂಡುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಉತ್ಸವ್ ರಾಕ್ ಉದ್ಯಾನವನಕ್ಕೆ ಸೇರಿದ ಒಂದು ಶಿಲ್ಪವನ್ನು ಪ್ರಯಾಗ್ ನ ನಾಗ ವಾಸುಕಿ ದೇವಾಲಯದ ಶಿಲ್ಪವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.