Fake News - Kannada
 

ಪ್ರಧಾನಿ ಮೋದಿಯವರು ಈ ದೇಶದ ಬಡ ಜನರನ್ನು ಮರುಳು ಮಾಡುವ ಸೂತ್ರದ ದೃಶ್ಯಗಳು ಎಂದು ಎಡಿಟ್ ಮಾಡಿದ ವಿಡಿಯೋ ಹಂಚಿಕೊಳ್ಳಲಾಗಿದೆ.

0

ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಬಡ ಜನರನ್ನು ಮರುಳು ಮಾಡುವ ಸೂತ್ರದ  ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು “गरीब को केवल सपने दिखाओ, झूठ बोलो, उसको आपस में लड़ आओ, और राज करो ( ಬಡವರಿಗೆ ಕನಸುಗಳನ್ನು ತೋರಿಸಿ, ಅವರಿಗೆ ಸುಳ್ಳು ಹೇಳಿ, ಪರಸ್ಪರ ಜಗಳವಾಡಿಸಿ, ಅವರ ಮೇಲೆ ಆಳ್ವಿಕೆ ಮಾಡಿ) ” ಎಂದು ಹೇಳಿದ್ದಾರೆ  ಎನ್ನಲಾಗಿದೆ. ಪೋಸ್ಟ್‌ನಲ್ಲಿ ಮಾಡಿದ  ಆರೋಪ ನಿಜವೆ ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಈ ದೇಶದ ಬಡ ಜನರನ್ನು ಮರುಳು ಮಾಡಲು ಪಿಎಂ ನರೇಂದ್ರ ಮೋದಿ ಅವರ ಮಾತುಗಳನ್ನು ಬಹಿರಂಗಪಡಿಸುವ ವಿಡಿಯೋ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಲಾದ ವೀಡಿಯೊ ಪೂರ್ಣ ವೀಡಿಯೊದ  ಅಲ್ಪ ಭಾಗ ಮಾತ್ರ. ಮೂಲ ವೀಡಿಯೊದ ವಿಸ್ತೃತ ಆವೃತ್ತಿಯಲ್ಲಿ’ಅಧಿಕಾರದಲ್ಲಿರಲು ಕಾಂಗ್ರೆಸ್ ಪಕ್ಷ ಬಳಸುವ ಸೂತ್ರ ಇದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ. ಅಸ್ಸಾಂನ ಬೊಖಕತ್ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಹೇಳಿಕೆಗೆ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು  ಈ ವೀಡಿಯೊವನ್ನು ಹುಡುಕಿದಾಗ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ರೀತಿಯ ದೃಶ್ಯಗಳನ್ನು ಇರುವ ವೀಡಿಯೊ ಕಂಡುಬಂದಿದೆ. ಅದು ಪ್ರಧಾನಿ ನರೇಂದ್ರ ಮೋದಿ ಅವರು 21 ಮಾರ್ಚ್ 2021 ರಂದು ಅಸ್ಸಾಂನ ಬೊಖಕತ್ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಆಗಿದೆ.

 ಪೋಸ್ಟ್‌ನಲ್ಲಿರುವ ಅದೇ ದೃಶ್ಯಗಳನ್ನು ಈ ವೀಡಿಯೊದ 35:19 ನಿಮಿಷಗಳಿಂದ ಗಮನಿಸಬಹುದು. ಮೂಲ ವೀಡಿಯೊದಲ್ಲಿ, ಪಿಎಂ ನರೇಂದ್ರ ಮೋದಿ ಅವರು “गरीब को केवल सपने दिखाओ, झूठ बोलो, उसको आपस में लड़ आओ, और राज करो । यही कांग्रेस सर्कार में रहने का फार्मूला रहा हे। ( ಬಡವರಿಗೆ ಕನಸುಗಳನ್ನು ತೋರಿಸಿ, ಅವರಿಗೆ ಸುಳ್ಳು ಹೇಳಿ, ಪರಸ್ಪರ ಜಗಳವಾಡಿಸಿ, ಅವರ ಮೇಲೆ ಆಳ್ವಿಕೆ ಮಾಡಿ. ಇದು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಲು ಬಳಸುವ ಸೂತ್ರವಾಗಿದೆ) ”ಎಂದು ಹೇಳುವುದನ್ನು ನಾವು ನೋಡಬಹುದು.

ವೀಡಿಯೊದ 35:26 ನಿಮಿಷಗಳಲ್ಲಿ, ಅಧಿಕಾರದಲ್ಲಿರಲು ಕಾಂಗ್ರೆಸ್ ಪಕ್ಷದ ಸೂತ್ರ ಇದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವುದನ್ನು ಉಲ್ಲೇಖಿಸುತ್ತದೆ. ಮೂಲ ವೀಡಿಯೊದಲ್ಲಿನ ಎರಡನೇ ಭಾಗವನ್ನು ಕಟ್ ಮಾಡುವ ಮೂಲಕ, ಈ ದೇಶದ ಬಡ ಜನರನ್ನು ಮರುಳು ಮಾಡಲು ನರೇಂದ್ರ ಮೋದಿಯವರು ತಮ್ಮ ಸೂತ್ರವನ್ನು ಬಹಿರಂಗಪಡಿಸುವ ದೃಶ್ಯಗಳು ಇವು ಎಂದು ಈ ದೃಶ್ಯವನ್ನು ಹಂಚಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆಗಳನ್ನು ಹೇಳಿದ ಸಂದರ್ಭವನ್ನು ‘ಹಿಂದೂಸ್ತಾನ್ ಟೈಮ್ಸ್’ ಪ್ರಕಟಿಸಿದ ಲೇಖನದಲ್ಲಿ ವಿವರಿಸಲಾಗಿದೆ. ಈ ಲೇಖನದಲ್ಲಿ ಅಧಿಕಾರದಲ್ಲಿ ಉಳಿಯಲು ಕಾಂಗ್ರೆಸ್ ಪಕ್ಷದ ಹಳೆಯ ತಂತ್ರ ಎಂದು ನರೇಂದ್ರ ಮೋದಿ ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ದೇಶದ ಬಡ ಜನರನ್ನು ಮರುಳು ಮಾಡುವ ತನ್ನ ಸೂತ್ರವನ್ನು ವಿವರಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಶ್ಯ ಎಂದು ಹಂಚಿಕೊಂಡಿರುವ ವೀಡಿಯೊ,  ಅರ್ಧಕ್ಕೆ ಕಟ್ ಮಾಡಿದ ಒಂದು ವೀಡಿಯೋದ ದೃಶ್ಯವಾಗಿದೆ.

Share.

Comments are closed.

scroll