Fake News - Kannada
 

ತಿರುಪತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗನ ಮೃತದೇಹವನ್ನು ಮೋಟಾರ್ ಸೈಕಲ್‌ನಲ್ಲಿ ಸಾಗಿಸುತ್ತಿದ್ದ 2022 ರ ಹಳೆಯ ವೀಡಿಯೊವನ್ನು ಇತ್ತೀಚಿನ ತಿರುಪತಿ ಕಾಲ್ತುಳಿತಕ್ಕೆ ಲಿಂಕ್ ಮಾಡಿ ತಪ್ಪಾಗಿ ಶೇರ್ ಮಾಡಲಾಗಿದೆ

0

ಜನವರಿ 08, 2025 ರ ರಾತ್ರಿ, ತಿರುಪತಿಯ ವಿಷ್ಣು ನಿವಾಸದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ವಾರ್ಷಿಕ ವೈಕುಂಠ ದ್ವಾರ ದರ್ಶನಂ, ಜನವರಿ 10, 2025 ರಂದು ಪ್ರಾರಂಭವಾಗುವ ಬಹುನಿರೀಕ್ಷಿತ ಉತ್ಸವಕ್ಕಾಗಿ ಟೋಕನ್‌ಗಳನ್ನು ವಿತರಿಸಲು ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು (ಇಲ್ಲಿ, ಇಲ್ಲಿ). ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಕನಿಷ್ಠ ಆರು ಭಕ್ತರು ಪ್ರಾಣ ಕಳೆದುಕೊಂಡಿದ್ದು,  ಅನೇಕರು ಗಾಯಗೊಂಡಿದ್ದಾರೆ. ಇದರ ನಡುವೆ, ಆಂಬ್ಯುಲೆನ್ಸ್‌ ಬದಲಾಗಿ ಮೋಟಾರ್‌ಸೈಕಲ್‌ನಲ್ಲಿ ಬಾಲಕನ ಮೃತ ದೇಹವನ್ನು ಹೊತ್ತೊಯ್ಯುತ್ತಿರುವ ವ್ಯಕ್ತಿಯೊಬ್ಬನನ್ನು ತೋರಿಸುವ ಹೃದಯ ಮಿಡಿಯುವವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದು ಇತ್ತೀಚಿನ ತಿರುಪತಿ ಕಾಲ್ತುಳಿತಕ್ಕೆ ಸಂಬಂಧಿಸಿದೆ ಎಂದು ಕ್ಲೇಮ್ ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 08 ಜನವರಿ 2025 ರ ರಾತ್ರಿ ಸಂಭವಿಸಿದ ಕಾಲ್ತುಳಿತದ ನಂತರ, ತಿರುಪತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗನ ಮೃತದೇಹವನ್ನು ಮೋಟಾರ್ ಸೈಕಲ್‌ನಲ್ಲಿ ಸಾಗಿಸುತ್ತಿರುವ ವೀಡಿಯೊ.

ಫ್ಯಾಕ್ಟ್: ಈ ವೈರಲ್ ವೀಡಿಯೊ 08 ಜನವರಿ 2025 ರ ರಾತ್ರಿ ಇತ್ತೀಚಿನ ಸಂಭವಿಸಿದ ತಿರುಪತಿ ಕಾಲ್ತುಳಿತಕ್ಕೆ ಸಂಬಂಧಿಸಿಲ್ಲ. ಈ ವೀಡಿಯೊ 26 ಏಪ್ರಿಲ್ 2022 ರದಾಗಿದ್ದು, ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ರಾಮನಾರಾಯಣ (SVR) ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಯ ಹೊರಗೆ ಮೋಟಾರ್ ಸೈಕಲ್‌ನಲ್ಲಿ ತನ್ನ ಮಗನ ಮೃತದೇಹವನ್ನು ಹೊತ್ತೊಯ್ಯುತ್ತಿರುವ ವ್ಯಕ್ತಿಯ ದೃಶ್ಯಗಳನ್ನು ತೋರಿಸುತ್ತದೆ. ಖಾಸಗಿ ಆಂಬ್ಯುಲೆನ್ಸ್ ಮೃತದೇಹವನ್ನು ಸಾಗಿಸಲು ಭಾರಿ ಬೆಲೆಯನ್ನು ಬೇಡಿಕೆ ಇಟ್ಟದರ ಜೊತೆಗೆ ಇತರ ಆಂಬ್ಯುಲೆನ್ಸ್‌ಗಳು ಆಸ್ಪತ್ರೆಗೆ ಪ್ರವೇಶಿಸದಂತೆ ತಡೆದ ನಂತರ ಈ ಘಟನೆ ಸಂಭವಿಸಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ದಾರಿತಪ್ಪಿಸುವಂತಿದೆ.

ವೈರಲ್ ವೀಡಿಯೊದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು, ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಅದು ನಮ್ಮನ್ನು ಏಪ್ರಿಲ್ 27, 2024 ರಂದು ‘ಒನ್ಇಂಡಿಯಾ ನ್ಯೂಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗೆ ಕರೆದೊಯ್ಯಿತು. ಅದರ ಶೀರ್ಷಿಕೆ/ ಕ್ಯಾಪ್ಶನ್ : ತಿರುಪತಿಯ ವ್ಯಕ್ತಿ ಮನೆ ತಲುಪಲು 90 ಕಿ.ಮೀ. ದೂರ ಮಗನ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಲಾಯಿತು. ಆಂಧ್ರಪ್ರದೇಶದ ತಿರುಪತಿ ಪಟ್ಟಣದಲ್ಲಿ, ನರಸಿಂಹಲು ಎಂಬ ವ್ಯಕ್ತಿ ತನ್ನ 10 ವರ್ಷದ ಮಗನ ಶವವನ್ನು 90 ಕಿ.ಮೀ. ದೂರ ಮೋಟಾರ್ ಸೈಕಲ್‌ನ ಹಿಂಬದಿ ಸವಾರಿ ಮಾಡುವುದರ ಮೂಲಕ ತನ್ನ ಮನೆಗೆ ತಲುಪಲು ಒತ್ತಾಯಿಸಲಾಯಿತು ಎಂದು ವೀಡಿಯೊ ವಿವರಣೆಯಲ್ಲಿ ಹೇಳಲಾಗಿದೆ. ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಚಾಲಕರು ಶವವನ್ನು ಸಾಗಿಸಲು ₹10,000 ಬೇಡಿಕೆ ಇಟ್ಟ ನಂತರ ಅವರು ಈ ರೀತಿ ಮಾಡಬೇಕಾಯಿತು ಎಂದು ಇದರಲ್ಲಿ ಹೇಳಲಾಗಿದೆ. 

ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ.  ಏಪ್ರಿಲ್ 2022 ರಲ್ಲಿ ಪ್ರಕಟವಾದ ವೈರಲ್ ವೀಡಿಯೊ ಕ್ಲಿಪ್‌ನ ಕೀಫ್ರೇಮ್‌ಗಳನ್ನು ಒಳಗೊಂಡ ಹಲವಾರು ಸುದ್ದಿ ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ, ಈ ಘಟನೆಯೂ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ರಾಮನಾರಾಯಣ (SVR) ರುಯಾ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಏಪ್ರಿಲ್ 26, 2022 ರ ಬೆಳ್ಳಗ್ಗೆ ಸಂಭವಿಸಿದೆ. ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್‌ನ 10 ವರ್ಷದ ಜೆಸೇವ ಎಂಬ ಬಾಲಕವೊಬ್ಬ ಕೆಲವು ದಿನಗಳ ಹಿಂದೆ ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳ ಚಿಕಿತ್ಸೆಗಾಗಿ SVR ರುಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಏಪ್ರಿಲ್ 25, 2022 ರ ತಡರಾತ್ರಿ  ಆತ ನಿಧನರಾಗಿದ್ದಾರೆ. ಹುಡುಗನ ತಂದೆ ತನ್ನ ಮಗನ ದೇಹವನ್ನು ಅವರ ಸ್ಥಳೀಯ ಗ್ರಾಮಕ್ಕೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದರು. ಆದರೆ, ಆಂಬ್ಯುಲೆನ್ಸ್ ಡ್ರೈವರ್ ಹೆಚ್ಚಿನ ಮೊತ್ತವನ್ನು ಡಿಮ್ಯಾಂಡ್ ಮಾಡಿದ್ದಾರೆ. ಈ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಅವರು ಮನೆಗೆ ಹಿಂದಿರುಗಿದ ತಮ್ಮ ಸಂಬಂಧಿಕರನ್ನು ಸಂಪರ್ಕಿಸಿ, ಆಸ್ಪತ್ರೆಯ ಹೊರಗಿನಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಆದರೆ ಸರ್ಕಾರಿ ಆಸ್ಪತ್ರೆಯ ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರು ಸಿಂಡಿಕೇಟ್ ಆಗಿ ಸೇರಿಕೊಂಡು, ಇನ್ನೊಂದು ಆಂಬ್ಯುಲೆನ್ಸ್ ಆಸ್ಪತ್ರೆಗೆ ಪ್ರವೇಶಿಸದಂತೆ ತಡೆದಿದ್ದಾರೆ. ಇದರಿಂದಾಗಿ, ಅಸಹಾಯಕ ತಂದೆಗೆ ಬೇರೆ ದಾರಿಯಿಲ್ಲದೆ ತನ್ನ ಸಂಬಂಧಿಕರ ದ್ವಿಚಕ್ರ ವಾಹನದ ಹಿಂಬದಿ ಮೃತದೇಹವನ್ನು ಹೊತ್ತುಕೊಂಡು ಮನೆಗೆ ತೆರಳಿದ್ದಾರೆ. 

ಹೆಚ್ಚುವರಿಯಾಗಿ, X (ಹಿಂದೆ ಟ್ವಿಟರ್) ನಲ್ಲಿ ಆಂಧ್ರಪ್ರದೇಶ ಪೊಲೀಸರು ಪೋಸ್ಟ್ ಮಾಡಿದ್ದು, ಇತ್ತೀಚಿನ ತಿರುಪತಿ ಕಾಲ್ತುಳಿತಕ್ಕೆ ಲಿಂಕ್ ಮಾಡಿ ಅದೇ ವೀಡಿಯೊವನ್ನು ಹಂಚಿಕೊಂಡ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೊ 2022 ರಲ್ಲಿ ತಿರುಪತಿಯಲ್ಲಿ ಸಂಭವಿಸಿದ ಘಟನೆಯಾಗಿದ್ದು, ಜನವರಿ 08, 2025 ರಂದು ನಡೆದ ತಿರುಪತಿ ಕಾಲ್ತುಳಿತಕ್ಕೆ ಸಂಬಂಧಿಸಿಲ್ಲ ಎಂದು ಆಂಧ್ರಪ್ರದೇಶ ಪೊಲೀಸರು (ಆರ್ಕೈವ್ ಮಾಡಿದ ಲಿಂಕ್) ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ, ತಿರುಪತಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಹಂಚಿಕೊಂಡ ಈ ವೀಡಿಯೊದ ಬಗ್ಗೆ ಆಂಧ್ರಪ್ರದೇಶ ಸರ್ಕಾರದ ಆಫಿಸಿಯಾಳ ಫ್ಯಾಕ್ಟ್ – ಚೆಕಿಂಗ್ ಯೂನಿಟ್ (ಆರ್ಕೈವ್ ಮಾಡಿದ ಲಿಂಕ್) ಸ್ಪಷ್ಟನೆ ನೀಡಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊ ಏಪ್ರಿಲ್ 2022 ರ ಹಿಂದಿನದಾಗಿದ್ದು, 08 ಜನವರಿ 2025 ರ ರಾತ್ರಿ ಸಂಭವಿಸಿದ ತಿರುಪತಿ ಇತ್ತೀಚಿನ ಕಾಲ್ತುಳಿತಕ್ಕೆ ಸಂಬಂಧಿಸಿಲ್ಲ.

Share.

Comments are closed.

scroll