ಅಂಬಾನಿ ಮತ್ತು ಅದಾನಿಗಳಿಗೆ ಭೂಮಿ ನೀಡುವುದಕ್ಕಾಗಿ ಗುಜರಾತ್‌ನಲ್ಲಿ ಐವತ್ತು ದೇವಸ್ಥಾನಗಳನ್ನು ಬಿಜೆಪಿ ಸರ್ಕಾರ ಕೆಡವಿದೆ ಎಂಬ ವಿಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ಸಾಕಷ್ಟು ಜನ ಹಂಚಿಕೊಳ್ಳುತ್ತಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಪ್ರತಿಪಾದನೆ: ಅಂಬಾನಿ ಮತ್ತು ಅದಾನಿಗಳಿಗೆ ಭೂಮಿ ಕೊಡಲು ಗುಜರಾತ್‌ನಲ್ಲಿ ಐವತ್ತು ದೇವಸ್ಥಾನಗಳನ್ನು ಕೆಡವಿದ ಬಿಜೆಪಿ ಸರ್ಕಾರ.
ನಿಜಾಂಶ: 2008 ರಲ್ಲಿಅಕ್ರಮ ಕಟ್ಟಡಗಳನ್ನು ಕೆಡವುದರ ಭಾಗವಾಗಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಕೆಡವಿಹಾಕಿದೆ. ಅಷ್ಟೇ ಹೊರತು, ಅಂಬಾನಿ ಮತ್ತು ಅದಾನಿಗೆ ಭೂಮಿಯನ್ನು ಕೊಡುವುದಕ್ಕಾಗಿ ಅಲ್ಲ. ಅಲ್ಲದೆ ದೇವಸ್ಥಾನಗಳನ್ನು ಕೆಡವಲು ಹಿಂಧೂ ದಾರ್ಮಿಕ ಸಂಘಟನೆಗಳು ವಿರೋಧಿಸಿದರಿಂದ ಆ ಕೆಲಸವನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ವಿಡಿಯೋದಲ್ಲಿ ʼ‘Modi Demolition Drive’ ಎಂದು ಬರೆದಿರುವುದು ನೋಡಬಹುದು. ಆದ್ದರಿಂದ , ಗೂಗಲ್‌ನಲ್ಲಿ ಆ ಪದಗಳನ್ನು ಹುಡುಕಿದಾಗ, 2008 ರಲ್ಲಿ NDTV ಪ್ರಸಾರ ಮಾಡಿದ ಅದೇ ವಿಡಿಯೋ ಸರ್ಚ್ ರಿಸಲ್ಟ್‌ನಲ್ಲಿ ಬರುತ್ತದೆ.
ಪೋಸ್ಟ್‌ನಲ್ಲಿನ ವಿಡಿಯೋಗಿಂತ ಯೂಟ್ಯೂಬ್ ನಲ್ಲಿ NDTV ಅಪ್ಲೋಡ್ ಮಾಡಿದ ವಿಡಿಯೋ ಹೆಚ್ಚು ಉದ್ದವಾಗಿದೆ. ಯೂಟ್ಯೂಬ್ ವಿಡಿಯೋ ಪ್ರಾರಂಭದಲ್ಲಿ ನಿರೂಪಕಿ ಮಾತನಾಡುತ್ತಾ ಅಕ್ರಮ ಕಟ್ಟಡಗಳನ್ನು ಕೆಡವುವ ಕಾರ್ಯಕ್ರಮದ ಭಾಗವಾಗಿ ಗುಜರಾತ್‌ನಲ್ಲಿ ಮೋದಿ ಸರ್ಕಾರ ದೇವಸ್ಥಾನಗಳನ್ನು ಕೆಡವಿದ್ದಾರೆ ಎಂದು ಹೇಳುತ್ತಾರೆ. ಆದ್ದರಿಂದ, ಆ ದೇವಸ್ಥಾಗಳನ್ನು ಕೆಡವಿದ್ದು ಅಂಬಾನಿ ಮತ್ತು ಅದಾನಿಗೆ ಭೂಮಿ ಕೊಡವುದಕ್ಕಾಗಿ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಅಷ್ಟೇ ಅಲ್ಲ, ದೇವಸ್ಥಾನಗಳನ್ನು ಕೆಡವುದಕ್ಕೆ ಹಿಂದೂ ಧಾರ್ಮಿಕ ಸಂಘಟನೆಗಳು ವಿರೋಧಿಸಿದ್ದರಿಂದ ಆ ಕಾರ್ಯಕ್ರಮವನ್ನು ಕೂಡಲೇ ಬಿಜೆಪಿ ಸರ್ಕಾರ ರದ್ದು ಮಾಡಿದ್ದಾರೆಂದು ದಿನಪತ್ರಿಕೆಯ ಲೇಖನಗಳು ಮತ್ತು NDTV ಅಪ್ಲೋಡ್ ಮಾಡಿದ ಇನ್ನೊಂದು ವಿಡಿಯೋದಲ್ಲಿ ನೋಡಬಹುದು.
ಒಟ್ಟಾರೆಯಾಗಿ 2008ರಲ್ಲಿ ಅಕ್ರಮ ಕಟ್ಟಡಗಳನ್ನು ಕೆಡವುವ ಕೆಲಸದ ಭಾಗವಾಗಿ ದೇವಸ್ಥಾಗಳನ್ನು ಕೆಡವಿದರೆ ಹೊರತು ಅಂಬಾನಿ ಮತ್ತು ಅದಾನಿಗಳಿಗೆ ಭೂಮಿ ನೀಡುವುದಕ್ಕಲ್ಲ.