ಸಲೂನ್‌ನಲ್ಲಿ ಗ್ರಾಹಕರೊಬ್ಬರು ಮಸಾಜ್ ಮಾಡುವಾಗ ಕುತ್ತಿಗೆಯನ್ನು ಮುರಿದು ನಂತರ ಕುರ್ಚಿಯ ಮೇಲೆ ಕುಸಿದು ಬಿದ್ದಿರುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವು ಯೂಸರ್ಸ್ ಈ “ಯಾರೂ ಕೂಡ ಬಾರ್ಬರ್ ಶೋಪ್ ಗೆ ಹೋಗಿ ಹೆಚ್ಚು ಮಸಾಜ್ ಮಾಡಿಸಿಕೊಳ್ಳಬೇಡಿ, ಏಕೆಂದರೆ ಈ ಮೇಲಿನ ವಿಡಿಯೋದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ” ಎಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಸಲೂನ್‌ನಲ್ಲಿ ಮಸಾಜ್ ಮಾಡಿ ಸಾವನ್ನಪ್ಪಿದ ವ್ಯಕ್ತಿ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಈ ವಿಡಿಯೋ ತೋರಿಸುತ್ತದೆ.
ಫ್ಯಾಕ್ಟ್: ಇದು ಸ್ಕ್ರಿಪ್ಟೆಡ್ ವೀಡಿಯೊ. ಈ ವೀಡಿಯೋವನ್ನು 3RD EYE ಎಂಬ ಯೂಟ್ಯೂಬ್ ಚಾನೆಲ್ ಮಾಡಿದ್ದು, ಈ ರೀತಿಯ ಕಾಲ್ಪನಿಕ ವಿಡಿಯೋಗಳನ್ನು ರಚಿಸಿ ಇಂಟರ್ನೆಟ್ ಅಪ್ಲೋಡ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತದೆ. ಹಾಗಾಗಿ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪು.
ಈ ವೀಡಿಯೊದ ಹಿಂದಿನ ಸತ್ಯಗಳನ್ನು ಪರಿಶೀಲಿಸುವಾಗ, ಅದೇ ವೀಡಿಯೊದೊಂದಿಗೆ ಇನ್ನು ಹೆಚ್ಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ಅದರಲ್ಲಿ ”Watch more original videos by: Sanjjanaa Galrani’ ಎಂಬ ಟ್ಯಾಗ್ ಇರುವುದನ್ನು ನಾವು ಗಮನಿಸಿದ್ದೇವೆ.
ಸಂಜನಾ ಗಲ್ರಾನಿ ಚಿತ್ರರಂಗದಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ. ವೈರಲ್ ಆದ ವಿಡಿಯೋ ಆಕೆಯ ಪೇಜ್ ನಲ್ಲಿದೆಯೇ ಎಂದು ನೋಡಲು ನಾವು ಆಕೆಯ ಫೇಸ್ ಬುಕ್ ಪೇಜ್ ಅನ್ನು ಪರಿಶೀಲಿಸಿದಾಗ ನವೆಂಬರ್ 7 ರಂದು ವಿಡಿಯೋ ಅಪ್ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.
ಆದರೆ ಈ ವೀಡಿಯೋ ವಿವರಣೆಯಲ್ಲಿ ಇದು ಸ್ಕ್ರಿಪ್ಟೆಡ್ ವಿಡಿಯೋವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಮಾತ್ರ ಮಾಡಲಾಗಿದೆ ಎಂಬ ವಿವರಣೆಯನ್ನು ನಾವು ಗಮನಿಸಿದ್ದೇವೆ. ಅದೇ ವಿವರಣೆಯನ್ನು ನಾವು ಈ ವೀಡಿಯೊದ ಕೊನೆಯಲ್ಲಿ ಸಹ ನೋಡಬಹುದು. ಈ ಮೂಲಕ ಈ ವಿಡಿಯೋದಲ್ಲಿರುವ ಘಟನೆ ನಿಜವಾಗಿ ನಡೆದಿಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ.
ಹಾಗೆಯೇ ನಾವು ‘3RD EYE‘ YouTube ಚಾನಲ್ ನಲ್ಲಿ ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಇದು ಸ್ಕ್ರಿಪ್ಟೆಡ್ ವೀಡಿಯೊಗಳನ್ನು ರಚಿಸಿ, ಅವುಗಳನ್ನು YouTube ನಲ್ಲಿ (ಆರ್ಕೈವ್ ಮಾಡಿದ ಆವೃತ್ತಿ) ಅಪ್‌ಲೋಡ್ ಮಾಡುತ್ತದೆ. ಈ ವೀಡಿಯೊ ಮತ್ತು ವೀಡಿಯೊದ ವಿವರಣೆಯಲ್ಲಿ ‘ವೀಡಿಯೊವನ್ನು ಮನರಂಜನೆ ಮತ್ತು ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ’ ಎಂದು ತಿಳಿಸಿವೆ.
‘3RD EYE’ ಮತ್ತು ಸಂಜನಾ ಅವರ ಕಾಲ್ಪನಿಕ ವೀಡಿಯೊಗಳನ್ನು ನೈಜ ಘಟನೆಗಳ ವೀಡಿಯೊ ಎಂದು ಕೆಲವರು ಈ ಹಿಂದೆಯೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವು ನಿಜವಲ್ಲ ಎಂದು ನಾವು ಲೇಖನಗಳನ್ನು ಪ್ರಕಟಿಸಿದ್ದೇವೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದಲ್ಲದೆ ಮಸಾಜ್ ಸಮಯದಲ್ಲಿ ಕುತ್ತಿಗೆಯನ್ನು ಹಿಗ್ಗಿಸುವುದರಿಂದ ನರಗಳಿಗೆ ಹಾನಿಯಾಗುತ್ತದೆ ಮತ್ತು ಪಾರ್ಶ್ವವಾಯು ಉಂಟಾಗುತ್ತದೆ ಎಂದು 2017ರಲ್ಲಿ ಟೈಮ್ಸ್ ಆಫ್ ಇಂಡಿಯಾ ಆರ್ಟಿಕಲ್ ಪ್ರಕಟಿಸಿದೆ. ಈ ಮಸಾಜ್ ಮಾಡಿದ ನಂತರ, ಅಜಯ್ ಕುಮಾರ್ ಎಂಬ ವ್ಯಕ್ತಿಯ ನರಗಳು ಹಾನಿಗೊಳಗಾಗಿ ಆತ ವೆಂಟಿಲೇಟರ್ ಬೆಂಬಲದಲ್ಲಿರಬೇಕಾಯಿತು. “ಕುತ್ತಿಗೆ ಮಸಾಜ್ ಮತ್ತು ಕುತ್ತಿಗೆ ಬಿರುಕುಗೊಳಿಸುವಿಕೆ, ಹೇರ್ಕಟ್ ಮಾಡಿದ ನಂತರ ಕ್ಷೌರಿಕರು ಶಾಸ್ತ್ರೋಕ್ತವಾಗಿ, ಮೂಳೆಗಳು, ಕತ್ತಿನ ಕೀಲುಗಳು ಮತ್ತು ಸುತ್ತಮುತ್ತಲಿನ ಅಂಗಾಂಶಗಳು, ಸ್ನಾಯುಗಳು ಅಥವಾ ನರಗಳಿಗೆ ದೀರ್ಘಕಾಲದ ಹಾನಿಯನ್ನು ಉಂಟುಮಾಡಬಹುದು….” ಎಂದು ಅವರಿಗೆ ಚಿಕಿತ್ಸೆ ನೀಡಿದ ಡಾ.ಆನಂದ್ ಜೈಸ್ವಾಲ್ ಹೇಳಿದ್ದಾರೆ.
ಮಸಾಜ್ ನಂತರ ಕುತ್ತಿಗೆಯನ್ನು ಹಿಗ್ಗಿಸುವುದರಿಂದ ನಮಗೆ “ಆರ್ಟಿರಿಯಲ್ ಡಿಸೆಕ್ಷನ್” ಎಂಬ ಸ್ಥಿತಿಯನ್ನು ಅಭಿವೃದ್ಧಿಪಡಿಸಿ ಅಪಾಯವನ್ನುಂಟು ಮಾಡುತ್ತದೆ ಎಂದು ರಿಸರ್ಚ್ ಗೇಟ್ ವೆಬ್‌ಸೈಟ್‌ನಲ್ಲಿ “ಸುನಿಲ್ ಮುನ್ಷಿ” ಎಂಬ ವೈದ್ಯರೊಬ್ಬರು ಕಾನ್ಫರೆನ್ಸ್ ಪೇಪರ್ ಅನ್ನು ಅಪ್‌ಲೋಡ್ ಮಾಡಿದ್ದಾರೆ. ಅಲ್ಲದೆ, ಸೆಪ್ಟೆಂಬರ್ 2024 ರಲ್ಲಿ, ಕರ್ನಾಟಕದ ಬಳ್ಳಾರಿಯಲ್ಲಿ ಕ್ಷೌರಿಕನೊಬ್ಬ ತನ್ನ ಅಂಗಡಿಯಲ್ಲಿ ತಲೆ ಮಸಾಜ್ ಮಾಡಿದ ನಂತರ 30 ವರ್ಷದ ವ್ಯಕ್ತಿಯ ಕುತ್ತಿಗೆಯನ್ನು ತಿರುಚಿದ ಪರಿಣಾಮವಾಗಿ, ಆತ ಹೃದಯಾಘಾತದಿಂದ ಬಳಲಿದ್ದು ನಂತರ ಎರಡು ತಿಂಗಳ ಕಾಲ (ಇಲ್ಲಿ ಮತ್ತು ಇಲ್ಲಿ) ಆಸ್ಪತ್ರೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಈ ಉದಾಹರಣೆಗಳಿಂದ, ತಲೆ ಮಸಾಜ್ ಸಮಯದಲ್ಲಿ ಕುತ್ತಿಗೆಯನ್ನು ಹಿಗ್ಗಿಸುವ ಅಪಾಯವಿದೆ ಎಂದು ನಾವು ಸ್ಪಷ್ಟವಾಗಿ ತಿಳಿದು ಬಂದಿದೆ. ಆದ್ದರಿಂದ ಜಾಗರೂಕರಾಗಿರಿ. ಸಲೂನ್ ನಲ್ಲಿ ಇಂತಹ ಮಸಾಜ್‌ಗಳ ಬಗ್ಗೆ ತಿಳಿಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಕೊನೆಯಾದಾಗಿ ಹೇಳುವುದಾದರೆ,ಸ್ಕ್ರಿಪ್ಟೆಡ್ ವೀಡಿಯೊದ ಸಲೂನ್‌ನಲ್ಲಿ ಮಸಾಜ್ ಮಾಡುವಾಗ ಗ್ರಾಹಕನ ಕತ್ತು ತಿರುಚುವ ವಿಡಿಯೋವನ್ನು ನಿಜ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.