Fake News - Kannada
 

ಪಾಕಿಸ್ತಾನಿ ಪುರುಷರು ವಿವಾದಿತ ಭೂಮಿಯಲ್ಲಿ ಸಸಿಗಳನ್ನು ಬೇರುಸಹಿತ ಕಿತ್ತುಹಾಕಿದ ಘಟನೆಗೆ ಸುಳ್ಳು ಕೋಮು ಬಣ್ಣ ನೀಡಲಾಗಿದೆ

0

ಪಾಕಿಸ್ತಾನದ ಪುರುಷರ ಗುಂಪೊಂದು ಸಸಿಗಳನ್ನು ಬೇರುಸಹಿತ ಕಿತ್ತುಹಾಕುವ ವೀಡಿಯೊ ಪೋಸ್ಟ್ ಒಂದು  ಸಾಮಾಜಿಕ ಮಾಧ್ಯಮದಲ್ಲಿ ಸುತ್ತು ಹೊಡೆಯುತ್ತಿದೆ. ಸಸಿಗಳನ್ನು ಕಿತ್ತುಹಾಕುವ ಕಾರಣ ಏನೆಂದರೆ ಗಿಡಗಳನ್ನು ನೆಡುವುದು ಅವರ ನಂಬಿಕೆಗೆ ವಿರುದ್ಧವಾಗಿದೆ ಎಂದು ಪೋಸ್ಟ್ ಪ್ರತಿಪಾದಿಸುತ್ತದೆ. ಈ ಲೇಖನದ ಮೂಲಕ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ನಿಜಾಂಶವನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಮರಗಳನ್ನು ನೆಡುವುದು ಅವರ ನಂಬಿಕೆಗೆ ವಿರುದ್ಧವಾಗಿರುವುದರಿಂದ ಪಾಕಿಸ್ತಾನದ ಪುರುಷರ ಗುಂಪು ಸಸಿಗಳನ್ನು ಬೇರುಸಹಿತ ಕಿತ್ತುಹಾಕುತ್ತದೆ.

ನಿಜಾಂಶ: ವಿವಿಧ ಸುದ್ದಿ ಲೇಖನಗಳ ಪ್ರಕಾರ, ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ವರದಿಗಳ ಪ್ರಕಾರ, ವಿವಾದಿತ ಭೂಮಿಯಲ್ಲಿ ಗಿಡಗಳನ್ನು ನೆಟ್ಟಿದ್ದರಿಂದ ಪುರುಷರ ಗುಂಪು ಸಸಿಗಳನ್ನು ಬೇರುಸಹಿತ ಕಿತ್ತುಹಾಕಿತು. ಯಾವುದೇ ಸುದ್ದಿ ಲೇಖನವು ಈ ಘಟನೆ ನಡೆಯಲು  ಅವರ ನಂಬಿಕೆಗೆ ಕಾರಣವೆಂದು ಹೇಳಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

‘ಪಾಕಿಸ್ತಾನ ಸಸಿಗಳನ್ನು ಬೇರುಸಹಿತ ಕಿತ್ತುಹಾಕುವುದು’ ಎಂಬ ಕೀವರ್ಡ್ ಗಳೊಂದಿಗೆ (ಇಂಗ್ಲಿಶ್ ನಲ್ಲಿ) ಸರಳವಾದ ಗೂಗಲ್ ಹುಡುಕಾಟವು ಘಟನೆಯನ್ನು ವರದಿ ಮಾಡಿದ ಸುದ್ದಿ ಲೇಖನವೊಂದಕ್ಕೆ ನಮ್ಮನ್ನು ಕರೆದೊಯ್ಯಿತು. ಲೇಖನದ ಪ್ರಕಾರ, ಈ ಘಟನೆ ಪಾಕಿಸ್ತಾನದ ಖೈಬರ್ ಏಜೆನ್ಸಿಯ ಮಂಡಿ ಕಾಸ್ ಪ್ರದೇಶದಲ್ಲಿ ನಡೆದಿದೆ. ವರದಿಯ ಪ್ರಕಾರ, ವಿವಾದಿತ ಭೂಮಿಯಲ್ಲಿ ನೆಟ್ಟಿದ್ದರಿಂದ ಸಸಿಗಳನ್ನು ಕಿತ್ತುಹಾಕಲಾಯಿತು.

ಲೇಖನದಲ್ಲಿ ಜಿಲ್ಲಾಧಿಕಾರಿ ಖೈಬರ್ ಮಹಮೂದ್ ಅಸ್ಲಾಮ್ ಅವರು ಈ ಪ್ರದೇಶದ ಜಮೀನಿಗಾಗಿ ಎರಡು ಗುಂಪುಗಳ ನಡುವೆ ವಿವಾದವಿದೆ ಎಂದು ಹೇಳಿದ್ದಾರೆ ಎಂದಿರುವುದಲ್ಲದೆ, ಒಂದು ಗುಂಪು ಸಸಿ ನೆಡುವ ಅಭಿಯಾನಕ್ಕೆ ಅನುಮತಿ ನೀಡಿತು, ಆದರೆ ಇನ್ನೊಂದು ಗುಂಪು ಅವುಗಳನ್ನು ಕಿತ್ತುಹಾಕಿದೆ ಎಂದು ವರದ್ ಮಾಡಿದೆ. ಘಟನೆಯನ್ನು ವರದಿ ಮಾಡಿದ ಕೆಲವು ಇತರ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಈ ಯಾವುದೇ ಲೇಖನಗಳು ಈ ಘಟನೆಯ ಕಾರಣ ಧಾರ್ಮಿಕ ನಂಬಿಕೆ ಎಂದು ಹೇಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ವಿವಾದಾತ್ಮಕ ಭೂಮಿಯಲ್ಲಿ ಸಸಿಗಳನ್ನು ನೆಟ್ಟ ಕಾರಣ ಪಾಕಿಸ್ತಾನಿ ಪುರುಷರು ಕಿತ್ತುಹಾಕಿದರು. ಈ ಘಟನೆಗೆ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.

Share.

About Author

Comments are closed.

scroll