Fake News - Kannada
 

ಉತ್ತರಾಖಂಡದ ಸುರಂಗ ರಕ್ಷಣಾ ಕಾರ್ಯಾಚರಣೆಯ ನಂತರ ಪಾರುಗಾಣಿಕಾ ತಂಡದ ಸಂಭ್ರಮಾಚರಣೆಯ ಚಿತ್ರವಾಗಿ AI- ರಚಿತವಾದ ಚಿತ್ರವನ್ನು ಹಂಚಿಕೊಳ್ಳಲಾಗಿದೆ

0

ರಕ್ಷಣಾ ತಂಡವು ಭಾರತದ ರಾಷ್ಟ್ರಧ್ವಜದೊಂದಿಗೆ ಪೋಸ್ ನೀಡುತ್ತಿರುವ ಮತ್ತು ಉತ್ತರಾಖಂಡದ ಸುರಂಗದ ರಕ್ಷಣಾ ಕಾರ್ಯಾಚರಣೆಯ ಯಶಸ್ಸನ್ನು ಆಚರಿಸುತ್ತಿರುವ ಚಿತ್ರ ಎಂದು ಹೇಳಿಕೊಳ್ಳುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಉತ್ತರಾಖಂಡ್‌ನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಯಶಸ್ವಿಯಾಗಿ ರಕ್ಷಿಸಿದ ಹಿನ್ನೆಲೆಯಲ್ಲಿ, ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಉತ್ತರಾಖಂಡದ ಸುರಂಗ ರಕ್ಷಣಾ ಕಾರ್ಯಾಚರಣೆಯ ಯಶಸ್ಸನ್ನು ಕೊಂಡಾಡುತ್ತಿರುವ ರಕ್ಷಣಾ ತಂಡದ ಚಿತ್ರ.

ಫ್ಯಾಕ್ಟ್: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋ AI-ರಚಿಸಿದ ಚಿತ್ರವಾಗಿದೆ. ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಣಾ ತಂಡದ ನಿಜವಾದ ಆಚರಣೆಗಳನ್ನು ಚಿತ್ರ ತೋರಿಸುವುದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದ ಹಿಮ್ಮುಖ ಚಿತ್ರ ಹುಡುಕಾಟದಲ್ಲಿ, 28 ನವೆಂಬರ್ 2023 ರಂದು ‘theexclusiveminds’ ಮಾಡಿದ ಇನ್ಸ್ಟಾಗ್ರಾಮ್  ಪೋಸ್ಟ್‌ನಲ್ಲಿ ಅದೇ ಫೋಟೋ ಕಂಡುಬಂದಿದೆ. “ಉತ್ತರಕಾಶಿ ಟನಲ್ ಪಾರುಗಾಣಿಕಾ ಯಶಸ್ವಿಯಾಗಿ” ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪ್ರಕಟಿಸಿ, ಈ ಇನ್ಸ್ಟಾಗ್ರಾಮ್ ಹ್ಯಾಂಡಲ್ ಒದಗಿಸಿದೆ ಹಕ್ಕು ನಿರಾಕರಣೆ- “ಇದು AI ರಚಿತ ಫೋಟೋ.” ‘theexclusiveminds’ ಉತ್ತರಾಖಂಡದ ಸುರಂಗ ರಕ್ಷಣಾ ಕಾರ್ಯಾಚರಣೆಯನ್ನು ಕೊಂಡಾಡುವ ಈ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ AI- ರಚಿತ ಚಿತ್ರಗಳ ಸರಣಿಯನ್ನು ಪ್ರಕಟಿಸಿದೆ.

AI- ರಚಿತವಾದ ವಿಷಯ ಪತ್ತೆ ಅಪ್ಲಿಕೇಶನ್ ‘ಹೈವ್‘ ಸಹ ಚಿತ್ರವು 100% AI- ರಚಿತವಾಗಿದೆ ಎಂದು ದೃಢಪಡಿಸಿದೆ.

ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ ನಂತರ ಎನ್‌ಡಿಆರ್‌ಎಫ್ ರಕ್ಷಣಾ ತಂಡದ ಸಂಭ್ರಮಾಚರಣೆಯ ಕೆಲವು ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ತರಾಖಂಡದ ಸುರಂಗದ ಯಶಸ್ವಿ ರಕ್ಷಣಾ ಕಾರ್ಯಾಚರಣೆಯ ನಂತರ ಪಾರುಗಾಣಿಕಾ ತಂಡವು ಸಂಭ್ರಮಿಸುತ್ತಿರುವ ಚಿತ್ರವಾಗಿ AI- ರಚಿತವಾದ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

Share.

Comments are closed.

scroll