ಫಿಟ್ನೆಸ್, ವಯಸ್ಸು ಮತ್ತು ಮಿತವಾಗಿ ವ್ಯಾಯಾಮ ಮಾಡುವುದರ ಕುರಿತ ಸಂದೇಶವನ್ನು ಡಾ. ದೇವಿ ಶೆಟ್ಟಿ ನೀಡಿದ್ದಾರೆಂದು ಬಿಂಬಿಸುವ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 29 ಅಕ್ಟೋಬರ್ 2021ರಂದು ಹಠಾತ್ ಹೃದಯ ಸ್ತಂಭನದಿಂದಾಗಿ ಕನ್ನಡ ಚಲನಚಿತ್ರರಂಗದ ನಟ ಪುನೀತ್ ರಾಜ್ಕುಮಾರ್ ನಿಧನರಾದ ನಂತರ ಸಂದೇಶವು ವೈರಲ್ ಆಗಿದೆ. ಪೋಸ್ಟ್ನಲ್ಲಿ ಮಾಡಲಾದ ಹೇಳಿಕೆಯ ನಿಜಾಂಶವನ್ನು ಪರಿಶೀಲಿಸೋಣ.
ಪ್ರತಿಪಾದನೆ: ಪುನೀತ್ ರಾಜ್ಕುಮಾರ್ ಅವರ ಸಾವಿಗೆ ಸಂಬಂಧಿಸಿದಂತೆ ಡಾ. ದೇವಿ ಶೆಟ್ಟಿ ಅವರ ಸಂದೇಶ.
ನಿಜಾಂಶ: ಸಂದೇಶವನ್ನು ಡಾ.ದೇವಿ ಶೆಟ್ಟಿಯವರು ನೀಡಿಲ್ಲ. ಡಾ.ದೇವಿ ಶೆಟ್ಟಿ ಅವರು ನಾರಾಯಣ ಹೆಲ್ತ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಈ ಹೇಳಿಕೆಯನ್ನು ಅವರು ಅಲ್ಲಗಳೆದಿದ್ದಾರೆ. ಈ ಸಂದೇಶವು ನಕಲಿ ಎಂದು ವೈದ್ಯರು ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ದೃಢಪಡಿಸಿದ್ದಾರೆ. ಸಾರ್ವಜನಿಕರನ್ನು ದಾರಿತಪ್ಪಿಸಲು ತನ್ನ ಹೆಸರನ್ನು ಬಳಸಿದ್ದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. “ಪುನೀತ್ಅವರಿಗೆ ಹೃದಯಾಘಾತವಾಯಿತೆಂದು ವ್ಯಾಯಾಮ ಕೆಟ್ಟದೆಂದು ಹೇಳಲಾಗದು. ನಿಮಗೆ ಬೇಕಾದುದನ್ನು ನೀವು ಮಾಡಬೇಕು. ಒಬ್ಬರಿಗೆ ಯಾವುದು ಹೊಂದುತ್ತದೆಯೋ ಅದು ಮತ್ತೊಬ್ಬರಿಗೆ ಸರಿಹೊಂದುವುದಿಲ್ಲ. ಇಲ್ಲಿ ಒಂದೇ ಒಂದು ಸಂದೇಶವಿದೆ ಎಂದು ನಾನು ಭಾವಿಸುತ್ತೇನೆ – ಮಿತವಾಗಿದ್ದರೆ ಎಲ್ಲವೂ ಒಳ್ಳೆಯದು” ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ಶಸ್ತ್ರಚಿಕಿತ್ಸಕ ಡಾ. ದೇವಾನಂದ್ ಎನ್.ಎಸ್ ಹೇಳಿದ್ದಾರೆ. ಹೀಗಾಗಿ ಮೇಲಿನ ಪೋಸ್ಟ್ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಕನ್ನಡ ನಟ ಪುನೀತ್ ರಾಜ್ಕುಮಾರ್ ಅವರ ಸಾವಿಗೆ ಸಂಬಂಧಿಸಿದಂತೆ ಡಾ.ದೇವಿ ಶೆಟ್ಟಿ ಅವರು ಸಂದೇಶವನ್ನು ನೀಡಿದ್ದಾರೆ ಎಂದು ಹೇಳುವ ಯಾವುದೇ ಇತ್ತೀಚಿನ ಸುದ್ದಿ, ವರದಿಗಳಿಲ್ಲ. ಆದಾಗ್ಯೂ, ಡಾ. ದೇವಿ ಶೆಟ್ಟಿ ಅವರು 29 ಅಕ್ಟೋಬರ್ 2021 ರಂದು ಟೈಮ್ಸ್ ನೌ ನಲ್ಲಿ ಭಾಗವಹಿಸಿದ ಚರ್ಚೆಯಲ್ಲಿ ಭಾರತೀಯರಲ್ಲಿ ಹೃದಯದ ಕಾಯಿಲೆಗಳ ಬಗ್ಗೆ ಮಾತನಾಡಿದ್ದಾರೆ. ಡಾ. ದೇವಿ ಶೆಟ್ಟಿ ಅವರು ಪುನೀತ್ ಅವರನ್ನು “ನಿಜ ಜೀವನದಲ್ಲಿ ಹೀರೋ” ಎಂದು ಕರೆಯುತ್ತಾರೆ. ಅವರು ಹೇಳುತ್ತಾರೆ, “ವೈದ್ಯನಾಗಿ ನಾನು ರೋಗಿಯ ಸ್ಥಿತಿ ಮತ್ತು ಘಟನೆಗಳ ಬಗ್ಗೆ ಚರ್ಚಿಸಲು ಇಷ್ಟಪಡುವುದಿಲ್ಲ”. ಪುನೀತ್ ರಾಜ್ಕುಮಾರ್ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಲು ಅವರು ನಿರಾಕರಿಸಿದ್ದಾರೆ. ಅವರು ಸಾಮಾನ್ಯ ಅರ್ಥದಲ್ಲಿ ಮಾತನಾಡುತ್ತಾರೆ. ಸಾಬೀತುಪಡಿಸದ ಹೊರತು 40 ವರ್ಷ ವಯಸ್ಸಿನ ಪ್ರತಿ ವ್ಯಕ್ತಿ ಹೃದಯ ರೋಗಿ ಎಂದಿರುವ ಅವರು ಜಿಮ್ನಲ್ಲಿ ವಾಡಿಕೆಯಂತೆ ತಮ್ಮನ್ನು ತಾವು ತೊಡಗಿಸಿಕೊಳ್ಳುವವರಿಗೆ ಕೆಲವು ಪರೀಕ್ಷೆಗಳನ್ನು ಶಿಫಾರಸು ಮಾಡಿದ್ದಾರೆ. ಈ ಸಂದೇಶದಲ್ಲಿ ಬರೆದಿರುವ ವಿಷಯಗಳನ್ನು ಡಾ.ದೇವಿ ಶೆಟ್ಟಿ ಅವರು ಹೇಳುವುದಿಲ್ಲ.
ಡಾ. ದೇವಿ ಶೆಟ್ಟಿ ಅವರು ದೇಶಾದ್ಯಂತ ಇರುವ ನಾರಾಯಣ ಹೆಲ್ತ್ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ ಈ ಆಸ್ಪತ್ರೆ ಪ್ರಖ್ಯಾತವಾಗಿದೆ. ಡಾ.ದೇವಿ ಶೆಟ್ಟಿ ಅವರ ಹೆಸರಲ್ಲಿ ವೈರಲ್ ಆಗಿರುವ ಸಂದೇಶದ ಬಗ್ಗೆ ನಾರಾಯಣ ಹೆಲ್ತ್ ಸಂಸ್ಥೆ ಟ್ವಿಟರ್ ಮೂಲಕ ಹೇಳಿಕೆ ನೀಡಿದೆ. ಹೇಳಿಕೆಯು ಹೀಗೆ ಹೇಳುತ್ತದೆ: “ಡಾ. ದೇವಿ ಶೆಟ್ಟಿಯವರ ಹೆಸರಲ್ಲಿ ಫಾರ್ವರ್ಡ್ ಮಾಡಲಾದ ಈ ಸಂದೇಶವು ನಕಲಿಯಾಗಿದೆ. ಅವರ ಕಚೇರಿಯಿಂದಲೂ ಹೇಳಿಕೆಯನ್ನು ನೀಡಲಾಗಿಲ್ಲ ಎಂದು ಎನ್ಎಚ್ ಸ್ಪಷ್ಟಪಡಿಸಲು ಬಯಸುತ್ತದೆ. ಅವರಿಗೆ ಮಾಡಿದ ಯಾವುದೇ ಉಲ್ಲೇಖ ಅಥವಾ ಆರೋಪವು ತಪ್ಪಾಗಿದೆ.”
ಸಂದೇಶವು ವಾಟ್ಸಾಪ್ನಲ್ಲಿ ವೈರಲ್ ಆಗುತ್ತಿದ್ದಂತೆ ಇಂಡಿಯನ್ ಎಕ್ಸ್ಪ್ರೆಸ್, ವೈದ್ಯರೊಂದಿಗೆ ಸಂಪರ್ಕಿಸಿದ್ದು ಸಂದೇಶವು ನಕಲಿ ಎಂದು ಖಾತ್ರಿಪಡಿಸಿದೆ. “ಇದು ನಕಲಿ ಸಂದೇಶ ಎಂದು ವೈದ್ಯರು ಇಂಡಿಯನ್ ಎಕ್ಸ್ಪ್ರೆಸ್ಗೆ ದೃಢಪಡಿಸಿದರು. ಸಾರ್ವಜನಿಕರನ್ನು ತಪ್ಪುದಾರಿಗೆಳೆಯಲು ತಮ್ಮ ಹೆಸರನ್ನು ಬಳಸಿದ್ದಕ್ಕಾಗಿ ದೇವಿಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದರು.”
ಕನ್ನಡ ಚಿತ್ರರಂಗದ ನಟ ಪುನೀತ್ ರಾಜ್ಕುಮಾರ್ ಅವರು ಅಕ್ಟೋಬರ್ 29, 2021ರಂದು ಹಠಾತ್ ಹೃದಯ ಸ್ತಂಭನದ ನಂತರ ನಿಧನರಾದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಹೃದಯರಕ್ತನಾಳದ ಮತ್ತು ಹೃದಯ ಶಸ್ತ್ರಚಿಕಿತ್ಸಕ ಡಾ. ದೇವಾನಂದ್ ಎನ್.ಎಸ್., “ಪುನೀತ್ಅವರಿಗೆ ಹೃದಯಾಘಾತವಾಯಿತೆಂದು ವ್ಯಾಯಾಮ ಕೆಟ್ಟದೆಂದು ಹೇಳಲಾಗದು. ನಿಮಗೆ ಬೇಕಾದುದನ್ನು ನೀವು ಮಾಡಬೇಕು. ಒಬ್ಬರಿಗೆ ಯಾವುದು ಹೊಂದುತ್ತದೆಯೋ ಅದು ಮತ್ತೊಬ್ಬರಿಗೆ ಸರಿಹೊಂದುವುದಿಲ್ಲ. ಇಲ್ಲಿ ಒಂದೇ ಒಂದು ಸಂದೇಶವಿದೆ ಎಂದು ನಾನು ಭಾವಿಸುತ್ತೇನೆ – ಮಿತವಾಗಿದ್ದರೆ ಎಲ್ಲವೂ ಒಳ್ಳೆಯದು” ಎಂದು ಹೇಳಿದ್ದಾರೆ.
ಡಾ.ದೇವಿ ಶೆಟ್ಟಿಯವರ ಹೆಸರನ್ನು ಈ ಹಿಂದೆಯೂ ಇತರ ಪೋಸ್ಟ್ಗಳಲ್ಲಿ ಬಳಸಲಾಗಿತ್ತು. ಇಂತಹ ಪೋಸ್ಟ್ಕುರಿತು FACTLY ಇಲ್ಲಿ ಪರಿಶೀಲನೆ ಮಾಡಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಪುನೀತ್ ರಾಜ್ಕುಮಾರ್ ಅವರ ಸಾವಿಗೆ ಸಂಬಂಧಿಸಿದಂತೆ ಈ ಸಂದೇಶವನ್ನು ಡಾ. ದೇವಿ ಶೆಟ್ಟಿ ಅವರು ನೀಡಿಲ್ಲ.