ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರ ಘಟನೆಗಳ ಹಿನ್ನಲೆಯಲ್ಲಿ, ‘ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರವನ್ನು ಪ್ರತಿಭಟಿಸಿ ತ್ರಿಪುರಾದ ಮುಸ್ಲಿಮರು ಹೊರಬಂದಿದ್ದಾರೆ’ ಎಂಬ ಹೇಳಿಕೆಯೊಂದಿಗೆ ಮುಸ್ಲಿಮರು ಸೇರಿರುವ ದೊಡ್ಡ ಸಭೆಯ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪೋಸ್ಟ್‌ನ ಬಗ್ಗೆಗಿನ ವಾಸ್ತವವನ್ನು ಪರಿಶೀಲಿಸೋಣ.
ಪ್ರತಿಪಾದನೆ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯ ಘಟನೆಗಳ ವಿರುದ್ಧ ತ್ರಿಪುರಾ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ.
ನಿಜಾಂಶ: ಪ್ರಸ್ತುತ ವೈರಲ್ ಆಗಿರುವ ಈ ವೀಡಿಯೊ ಕನಿಷ್ಠ 2021 ರ ಮೇ ತಿಂಗಳಿನಿಂದ ಇಂಟರ್‌ನೆಟ್‌ನಲ್ಲಿ ಲಭ್ಯವಿದೆ. ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನು ಹಜರತ್ ಅಬ್ದುಲ್ ಹಮೀದ್ ಮೊಹಮ್ಮದ್ ಸಲೀಮುಲ್ ಖಾದ್ರಿ, ಬದೌನಿ (ಉತ್ತರ ಪ್ರದೇಶ) ಅವರ ಅಂತ್ಯಕ್ರಿಯೆಯ ಮೆರವಣಿಗೆಯ ವೀಡಿಯೊ ಎಂದು ಹಂಚಿಕೊಂಡಿದ್ದಾರೆ. 2021 ರ ಮೇ ತಿಂಗಳ ಈ ವೀಡಿಯೊಗೂ, ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಾಬೀತಾಗುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆತಪ್ಪಾಗಿದೆ.
ಈ ವೀಡಿಯೋ ತ್ರಿಪುರಾಕ್ಕೆ ಸಂಬಂಧಿಸಿದ್ದಲ್ಲ ಅಥವಾ ವೀಡಿಯೊದಲ್ಲಿರುವ ಜನರು ಪ್ರತಿಭಟಿಸುತ್ತಿಲ್ಲ ಎಂಬುವುದು ನಾವು ಕಂಡುಕೊಂಡಿದ್ದೇವೆ. ಕೀವರ್ಡ್ ಮೂಲಕ ಇಂಟರ್‌ನೆಟ್‌ನಲ್ಲಿ ಈ ವಿಡಿಯೊವನ್ನು ಹುಡುಕಾಡಿದಾಗ, ಅದೇ ವೀಡಿಯೊದ ದೀರ್ಘ ಮತ್ತು ಹೆಚ್ಚಿನ ರೆಸಲ್ಯೂಶನ್ ಆವೃತ್ತಿಯನ್ನು ಹಂಚಿಕೊಂಡಿರುವ ಫೇಸ್‌ಬುಕ್ ಪೋಸ್ಟ್ ಅನ್ನು ನಾವು ಕಂಡು ಕೊಂಡಿದ್ದೇವೆ.
ಈ ವೀಡಿಯೊವನ್ನು ಹಿಂದಿ ವಿವರಣೆಯೊಂದಿಗೆ 2021 ರ ಮೇ 09 ರಂದು ಹಂಚಲಾಗಿದೆ. ಅದರಲ್ಲಿ, ‘ಹಜರತ್ ಪೀರ್ ಸಲೀಂ ಮಿಯಾ ಸಾಹಬ್ ಬದೌನಿ ಅವರ ಕೊನೆಯ ಪ್ರಯಾಣ’ ಎಂದು ಬರೆಯಲಾಗಿದೆ. ವೀಡಿಯೊದ ಅರ್ಧದಲ್ಲಿ, ‘ಪೀರ್ ಸಾಹಬ್ ಜಿಂದಾಬಾದ್’ ಮತ್ತು ‘ಲಾ ಇಲಾಹ ಇಲ್ಲಲ್ಲಾಹ್’ ಎಂಬ ಘೋಷಣೆಗಳು ನಮಗೆ ಕೇಳುತ್ತವೆ.
ಈ ಸೂಚನೆಯ ಜಾಡಿನ ಮೂಲಕ ನಾವು ಕೀವರ್ಡ್ ಬಳಸಿ ಮತ್ತಷ್ಟು ಹುಡುಕಾಡಿದ್ದೇವೆ. ಈ ಸಮಯದಲ್ಲಿ 2021 ರ ಮೇ 09 ರಂದು UPಯ ಬದೌನಿಯಲ್ಲಿ ನಿಧನರಾದ ಹಜರತ್ ಅಬ್ದುಲ್ ಹಮೀದ್ ಮೊಹಮ್ಮದ್ ಸಲೀಮುಲ್ ಖಾದ್ರಿ ಅವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ವರದಿ ಮಾಡಿರುವ ಸುದ್ದಿ ಲೇಖನಗಳು ನಮಗೆ ಸಿಕ್ಕಿವೆ. ಈ ಅಂತ್ಯಕ್ರಿಯೆ ಮೆರವಣಿಗೆ ಸಂಬಂಧಿಸಿದ ಇತರ ಕೆಲವು ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ಈ ಲೇಖನವು ಅಂತ್ಯಕ್ರಿಯೆಯ ಮೆರವಣಿಗೆಗೆ ಸಂಬಂಧಿಸಿದ ಚಿತ್ರವನ್ನು ಪ್ರಕಟಿಸಿದೆ. ಪ್ರಕಟವಾದ ಚಿತ್ರದ ಹಿನ್ನೆಲೆಯಲ್ಲಿ, ನಾವು ಗೇಟ್ ತರಹದ ರಚನೆಯನ್ನು ಗುರುತಿಸಬಹುದು, ಇದು ವೈರಲ್ ವೀಡಿಯೊದ ಹೆಚ್ಚಿನ ರೆಸಲ್ಯೂಶನ್ ಇರುವ ಆವೃತ್ತಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ವೈರಲ್ ಆಗಿರುವ ವಿಡಿಯೋ ಉತ್ತರ ಪ್ರದೇಶದ್ದು ಎಂದು ಸೂಚಿಸುತ್ತದೆ.
ಮೆರವಣಿಗೆಯ ಸಂದರ್ಭವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, 2021 ಮೇ ತಿಂಗಳಿನಿಂದ ಇಂಟರ್ನೆಟ್‌ನಲ್ಲಿ ಈ ವೀಡಿಯೊ ಲಭ್ಯವಿವೆ. ಆದ್ದರಿಂದ ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾಬೀತಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ತ್ರಿಪುರಾದಲ್ಲಿ ಕೋಮುಗಲಭೆಯ ವಿರುದ್ಧ ಮುಸ್ಲಿಮರು ಪ್ರತಿಭಟಿಸುತ್ತಿರುವ ವಿಡಿಯೊ ಎಂದು ಯುಪಿ ಮುಸ್ಲಿಮರು ನಡೆಸಿರುವ ಮೆರವಣಿಗೆಯ ಹಳೆಯ ವೀಡಿಯೊವನ್ನು ಶೇರ್ ಮಾಡಲಾಗುತ್ತಿದೆ.