Fake News - Kannada
 

ಅಧಿಕ ವರ್ಷವನ್ನು ಹೊರತುಪಡಿಸಿ, ಪ್ರತಿ ವರ್ಷದ ಫೆಬ್ರವರಿ ತಿಂಗಳಿನ ವಾರದ ಎಲ್ಲಾ ದಿನಗಳೂ ನಾಲ್ಕು ಬಾರಿ ಪುನರಾವರ್ತನೆಯಾಗುತ್ತದೆ

0

“ವಾರದ ಎಲ್ಲಾ ದಿನಗಳೂ ನಾಲ್ಕು ಬಾರಿ ಪುನರಾವರ್ತನೆಯಾಗುವುದರಿಂದ ಈ ವರ್ಷದ ಫೆಬ್ರವರಿ ತಿಂಗಳು ಒಂದು ರೀತಿಯಲ್ಲಿ ವಿಶಿಷ್ಟವಾಗಿದ್ದು, ಇದು ಪ್ರತಿ 823 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ” ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2021 ರ ಕ್ಯಾಲೆಂಡರ್ ಅನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: 2021 ರ ಫೆಬ್ರವರಿ ತಿಂಗಳು ವಿಶಿಷ್ಟವಾಗಿದೆ. ಏಕೆಂದರೆ ಎಲ್ಲಾ ವಾರದ ದಿನಗಳೂ ಸಹ ಈ ತಿಂಗಳಲ್ಲಿ ನಾಲ್ಕು ಬಾರಿ ಪುನರಾವರ್ತನೆಯಾಗುತ್ತದೆ. ಇದು ಪ್ರತಿ 823 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

ಸತ್ಯಾಂಶ: ಅಧಿಕ ವರ್ಷವನ್ನು ಹೊರತುಪಡಿಸಿ, ಪ್ರತಿ ವರ್ಷದ ಫೆಬ್ರವರಿ ತಿಂಗಳಿನ ವಾರದ ಎಲ್ಲಾ ದಿನಗಳೂ ನಾಲ್ಕು ಬಾರಿ ಪುನರಾವರ್ತನೆಯಾಗುತ್ತದೆ. ಏಕೆಂದರೆ ಅದು ನಿರ್ದಿಷ್ಟವಾಗಿ 28 ದಿನಗಳನ್ನು ಹೊಂದಿರುತ್ತದೆ. ಅಲ್ಲದೆ ಇದು ಪ್ರತಿ 823 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ವಿದ್ಯಮಾನವಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಾರದ ಪ್ರತಿ ದಿನವೂ ನಾಲ್ಕು ಬಾರಿ ಪುನರಾವರ್ತನೆಯಾಗುವುದು ಅಪರೂಪದ ವಿದ್ಯಮಾನವಲ್ಲ. ಅಧಿಕ ವರ್ಷವನ್ನು ಹೊರತುಪಡಿಸಿ, ಪ್ರತಿ ವರ್ಷದ ಫೆಬ್ರವರಿ ತಿಂಗಳಿನ ವಾರದ ಎಲ್ಲಾ ದಿನಗಳೂ ನಾಲ್ಕು ಬಾರಿ ಪುನರಾವರ್ತನೆಯಾಗುತ್ತದೆ. ಏಕೆಂದರೆ ಅದು ನಿರ್ದಿಷ್ಟವಾಗಿ 28 ದಿನಗಳನ್ನು ಹೊಂದಿರುತ್ತದೆ (28/7 = 4). ಉದಾಹರಣೆಗೆ, ನಾವು 2019, 2021, 2022, 2023 ವರ್ಷಗಳನ್ನು ಗಮನಿಸಿದಾಗ, ಫೆಬ್ರವರಿ ತಿಂಗಳಿನ ವಾರದ ಪ್ರತಿ ದಿನಗಳೂ ಈ ಎಲ್ಲಾ ವರ್ಷಗಳಲ್ಲಿ ನಾಲ್ಕು ಬಾರಿ ಪುನರಾವರ್ತನೆಯಾಗುತ್ತವೆ.

ಅಧಿಕ ವರ್ಷದಲ್ಲಿ, ಫೆಬ್ರವರಿ 01 ರ ವಾರದ ದಿನವು ಐದು ಬಾರಿ ಪುನರಾವರ್ತನೆಯಾಗುತ್ತದೆ ಮತ್ತು ಉಳಿದ ವಾರದ ದಿನಗಳು ಕೇವಲ ನಾಲ್ಕು ಬಾರಿ ಪುನರಾವರ್ತನೆಯಾಗುತ್ತವೆ. ಹಾಗಾಗಿ ಇದು ಪ್ರತಿ 823 ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಎಂಬ ಹೇಳಿಕೆ ನಿಜವಲ್ಲ. ಅಧಿಕ ವರ್ಷವನ್ನು ಹೊರತುಪಡಿಸಿ, ಪ್ರತಿ ವರ್ಷದ ಫೆಬ್ರವರಿ ತಿಂಗಳಿನ ವಾರದ ಎಲ್ಲಾ ದಿನಗಳೂ ನಾಲ್ಕು ಬಾರಿ ಪುನರಾವರ್ತನೆಯಾಗುತ್ತದೆ.

ತಿಂಗಳುಗಳ ಹಿಂದೆ ಇದೇ ರೀತಿಯ ಪ್ರತಿಪಾದನೆಗಳನ್ನು ಫ್ಯಾಕ್ಟ್ಲಿ ಬಹಿರಂಗಗೊಳಿಸತ್ತು. ಅದನ್ನು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಧಿಕ ವರ್ಷವನ್ನು ಹೊರತುಪಡಿಸಿ, ಪ್ರತಿ ವರ್ಷದ ಫೆಬ್ರವರಿ ತಿಂಗಳಿನ ವಾರದ ಎಲ್ಲಾ ದಿನಗಳೂ ನಾಲ್ಕು ಬಾರಿ ಪುನರಾವರ್ತನೆಯಾಗುತ್ತದೆ. ಇದು ಪ್ರತಿ 823 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ವಿದ್ಯಮಾನವಲ್ಲ.

Share.

About Author

Comments are closed.

scroll