Fake News - Kannada
 

ಸೇತುವೆ ಚೆನಾಬ್ ರೈಲು ಸೇತುವೆ ಅಲ್ಲ, ಚೀನಾದ ಬೈಪಾನ್ ನದಿ ಸೇತುವೆ

0

ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ ಮೇಲೆ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ಸಂಪರ್ಕಿಸುವ (ಯುಎಸ್‌ಬಿಆರ್‌ಎಲ್) ವಿಶ್ವದ ಅತಿ ಎತ್ತರದ ರೈಲ್ವೆ ಹಳಿಗಳ ಪ್ರಾಯೋಗಿಕ ಚಾಲನೆಯನ್ನು ತೋರಿಸಲು ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ರೈಲು ಸೇತುವೆಯ ಮೂಲಕ ಹಾಡು ಹೋಗುತ್ತಿರುವ ವಿಡಿಯೋವನ್ನು ಹೈ ಆಲ್ಟಿಟ್ಯುದೆ ಮೂಲಕ ಸೆರೆಹಿಡಿಯಲಾಗಿತ್ತು.  ಅಷ್ಟಕ್ಕೂ ಈ  ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಎಷ್ಟು ಸರಿ ಅನ್ನುವುದನ್ನು ಪರಿಶೀಲಿಸೋಣ.

ಕ್ಲೇಮ್ : ವಿಶ್ವದ ಅತಿ ಎತ್ತರದ ರೈಲು ಹಳಿಯ ಪ್ರಾಯೋಗಿಕ ಚಾಲನೆಯ ದೃಶ್ಯಗಳು ಎಂದು ಹೇಳಲಾದ,  ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ ಮೇಲೆ 21 ಮಾರ್ಚ್ 2023 ರಂದು ನಡೆಸಲಾದ  ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ದೃಶ್ಯಗಳು.

ಫ್ಯಾಕ್ಟ್ : ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆ ಎಂದು ತೋರ್ಪಡಿಸುವ  ವೈರಲ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವಾಸ್ತವವಾಗಿ ಇದು  ಚೀನಾದ ಗುಯಿಝೌ ಪ್ರಾಂತ್ಯದ ಬೈಪಾಂಜಿಯಾಂಗ್ ರೈಲ್ವೆ ಸೇತುವೆಯ ವೀಡಿಯೊವಾಗಿದೆ. ಇದಲ್ಲದೆ, 26 ಮಾರ್ಚ್ 2023 ರಂದು, ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚೆನಾಬ್ ರೈಲು ಸೇತುವೆಯನ್ನು ಪರಿಶೀಲಿಸಿದ್ದು ಟ್ರೊಲ್ಲಿ ರನ್ ಮಾಡಿದ್ದಾರೆ. ಹಾಗಾಗಿ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪು.

ವೈರಲ್ ವಿಡಿಯೋದ ಮೂಲವನ್ನು ಪರಿಶೋಧಿಸಿದಾಗ ಅಂತಹದೇ ವಿಡಿಯೋವೊಂದು ಜೂನ್ 27, 2022 ರಂದು ಫೇಸ್ಬುಕ್ ನಲ್ಲಿ ಪೋಸ್ಟ್ ಆಗಿತ್ತು. ಇದು ಚೀನಾದ ಗೈಝೌ ಪ್ರಾಂತ್ಯದಲ್ಲಿರುವ ಬೈಪಾನ್ ನದಿ ಸೇತುವೆ ಎಂದು ಗುರುತಿಸಲಾಗಿದೆ. ಇದಲ್ಲದೆ, ಚೆನಾಬ್ ರೈಲ್ವೇ ಸೇತುವೆಯ ಮೇಲೆ ಟ್ರ್ಯಾಕ್-ಲೇಯಿಂಗ್ ಕೆಲಸವು ಫೆಬ್ರವರಿ 2023 ರಲ್ಲಿ ಪ್ರಾರಂಭವಾಯಿತು ಎಂಬುದು ಗಮನಿಸಬೇಕಾದ ಅಂಶ. ಆದ್ದರಿಂದ, ವೀಡಿಯೊದಲ್ಲಿರುವ ಸೇತುವೆ  ಚೆನಾಬ್ ಸೇತುವೆಯಲ್ಲ ಎಂಬುದು ತಿಳಿದು ಬಂದಿದೆ.

ಬೀಪಾಂಜಿಯಾಂಗ್ ರೈಲ್ವೆ ಸೇತುವೆಯ ಇತರ ದೃಶ್ಯಗಳೊಂದಿಗೆ ವೈರಲ್ ದೃಶ್ಯಗಳ ಹೋಲಿಕೆಯನ್ನು ನಡೆಸಿದಾಗ ಅಲ್ಲಿ ಸಾಕಷ್ಟು  ಹೊಂದಾಣಿಕೆಯನ್ನು ಕಂಡುಕೊಂಡಿದ್ದೇವೆ. ಲ್ಯಾಂಡ್ಸ್ಕೇಪ್ ಆಂಗಲ್, ಸೇತುವೆಯ ಕೆಂಪು-ಕಿತ್ತಳೆ ಕಮಾನು, ಕೆಳಗೆ ಹರಿಯುವ ನದಿ ಮತ್ತು ಸೇತುವೆಯ ಪಿಲ್ಲರ್ ಒಂದಕ್ಕೊಂದು ಸ್ಥಿರವಾಗಿವೆ. ವೈರಲ್ ವೀಡಿಯೋ ಚೀನಾದ ಬೈಪಾಂಜಿಯಾಂಗ್ ರೈಲ್ವೇ ಸೇತುವೆಯನ್ನು ತೋರಿಸುತ್ತಿದೆಯೇ ಹೊರತು ಜಮ್ಮು ಮತ್ತು ಕಾಶ್ಮೀರದ ಚೆನಾಬ್ ರೈಲ್ವೇ ಸೇತುವೆಯಲ್ಲ ಎಂದು ಇದು ದೃಢಪಡಿಸುತ್ತದೆ.

26 ಮಾರ್ಚ್ 2023 ರಂದು, ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚೆನಾಬ್ ರೈಲು ಸೇತುವೆಯನ್ನು ಪರಿಶೀಲಿಸಿದ್ದು, ಟ್ರೊಲ್ಲಿ ರನ್ ನಡೆಸಿದ್ದಾರೆ. ಚೆನಾಬ್ ರೈಲು ಸೇತುವೆಯು ಉಕ್ಕಿನ ಕಾಂಕ್ರೀಟ್ ಕಮಾನು ಸೇತುವೆಯಾಗಿದ್ದು, ಇದು ಬಕ್ಕಲ್ ಮತ್ತು ಕೌರಿಯನ್ನು ಸಂಪರ್ಕಿಸುತ್ತದೆ, ಇದು ಭಾರತದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ರಿಯಾಸಿ ಪಟ್ಟಣದಿಂದ ಸುಮಾರು  42 ಕಿಲೋಮೀಟರ್ ದೂರದಲ್ಲಿದೆ. ಚೆನಾಬ್ ನದಿಯ ಮೇಲೆ 359 ಮೀಟರ್ (1,178 ಅಡಿ) ಎತ್ತರದಲ್ಲಿರುವ ಸೇತುವೆಯು ಪ್ರಸ್ತುತ ವಿಶ್ವದ ಅತಿ ಎತ್ತರದ ರೈಲು ಸೇತುವೆಯಾಗಿದೆ. ಸೇತುವೆಯು ಡಿಸೆಂಬರ್ 2023 ಅಥವಾ ಜನವರಿ/ಫೆಬ್ರವರಿ 2024 ರ ವೇಳೆಗೆ ರೈಲು ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆಯಿದೆ. ಚೆನಾಬ್ ರೈಲು ಸೇತುವೆಯ ದೃಶ್ಯಗಳನ್ನು ಇಲ್ಲಿ ನೋಡಬಹುದು.

ಹಾಗಾಗಿ ಈ ವೈರಲ್ ವಿಡಿಯೋ ಚೆನಾಬ್ ರೈಲ್ವೇ ಸೇತುವೆ ಎಂದು ಹೇಳಿಕೊಳ್ಳಲಾಗಿದೆ, ಆದರೆ ನಿಜವಾಗಿಯೂ ಇದು  ಚೀನಾದ ಬೈಪಾನ್ ನದಿಯ ಶುಬಾಯ್ ರೈಲ್ವೆ ಸೇತುವೆಯಾಗಿದೆ.

Share.

Comments are closed.

scroll