ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಸೈನಿಕರನ್ನು ಉದ್ದೇಶಿಸಿ ಮಾತನಾಡುವ ಫೋಟೋವನ್ನು ಗಾಲ್ವಾನ್ ಕಣಿವೆಯಲ್ಲಿ ಸೆರೆ ಹಿಡಿದ ಫೋಟೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ‘15 ಜೂನ್ 2020’ ರಂದು ಭಾರತೀಯ ಮತ್ತು ಚೀನಾದ ಪಡೆಗಳ ನಡುವೆ ಘರ್ಷಣೆಗಳು ನಡೆದ ಸ್ಥಳ ‘ಗಾಲ್ವಾನ್ ಕಣಿವೆ’ ಇಡಿಯಾಗಿ ನಮ್ಮದು ಎಂದು ಚೀನಾ ಹೇಳಿರುವ ಹಿನ್ನೆಲೆಯಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ಪ್ರತಿಪಾದಿಸಿರುವುದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಗಾಲ್ವಾನ್ ಕಣಿವೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡುವ ಫೋಟೋ.
ನಿಜಾಂಶ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಭಾರತೀಯ ಸೈನಿಕರನ್ನು ಉದ್ದೇಶಿಸಿ ಮಾತನಾಡುವ ಫೋಟೋವನ್ನು 1971 ರಲ್ಲಿ ಲೇಹ್‍ನಲ್ಲಿ ತೆಗೆಯಲಾಯಿತು, ಗಾಲ್ವಾನ್ ಕಣಿವೆಯಲ್ಲಿ ಅಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು.
ಚಿತ್ರವನ್ನು ರಿವರ್ಸ್ ಇಮೇಜ್ ಹುಡುಕಾಟಕ್ಕೆ ಒಳಪಡಿಸಿದಾಗ, ಅದು ‘ಆರ್ಟ್-ಶೀಪ್’ ವೆಬ್‍ಸೈಟ್‍ನ ಲೇಖನದಲ್ಲಿ ಕಂಡುಬಂತು. ಈ ಲೇಖನವು ಇಂದಿರಾ ಗಾಂಧಿಯವರ ಕುರಿತಾಗಿದೆ ಮತ್ತು ಈ ಫೋಟೋಗೆ ಸಂಬಂಧಿಸಿದಂತೆ ಈ ಕೆಳಗಿನ ವಿವರಣೆ ಇತ್ತು – ‘ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ 1971 ರಲ್ಲಿ ಲೇಹ್‍ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಒಂದು ಅಪರೂಪದ ಚಿತ್ರ’.
ಟ್ವಿಟರ್ ನಲ್ಲಿ ಅದೇ ವಿವರಣೆಯೊಂದಿಗೆ ಹುಡುಕಿದಾಗ, ಬಳಕೆದಾರರೊಬ್ಬರು 2017 ರಲ್ಲಿ ಅದೇ ಚಿತ್ರವನ್ನು ಟ್ವೀಟ್ ಮಾಡಿರುವುದು ಕಂಡುಬರುತ್ತದೆ. ಮತ್ತೊಬ್ಬ ಪರಿಶೀಲಿಸಿದ ಟ್ವಿಟ್ಟರ್ ಬಳಕೆದಾರರು 2012 ರಲ್ಲಿ ಅದೇ ಚಿತ್ರವನ್ನು ಪೋಸ್ಟ್ ಮಾಡಿದ್ದೇನೆ ಮತ್ತು ಅದು ಲಡಾಖ್‍ನಿಂದ ಆಗಿರಬಹುದು ಎಂದು ಟ್ವೀಟ್ ಮಾಡಿದ್ದಾರೆ. ನಂತರ ಅವರು ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿ, ಆ ಚಿತ್ರದ ಮೂಲವನ್ನು ಕಂಡುಕೊಂಡು, ‘ಕೃಪೆ: ಪಿಟಿಐ ಫೋಟೋ / ಸೌಜನ್ಯ – ಡಿಪಿಆರ್ ಡಿಫೆನ್ಸ್’ ಎಂದು ತಿಳಿಸಿದ್ದಾರೆ.
ಮೇಲಿನ ಮಾಹಿತಿಯೊಂದಿಗೆ, ‘ಪಿಟಿಐ’ ಸುದ್ದಿ ವೆಬ್‍ಸೈಟ್‍ನಲ್ಲಿ ಹುಡುಕಿದಾಗ, ಅದರ ಆರ್ಕೈವ್‍ಗಳಲ್ಲಿ ಈ ಫೋಟೋ ಕಂಡುಬಂದಿದೆ. ಫೋಟೋದಲ್ಲಿ ಅದೇ ವಿವರಣೆಯನ್ನು ಇದ್ದು, ಇಂದಿರಾ ಗಾಂಧಿ ಭಾರತೀಯ ಸೈನಿಕರನ್ನು ಉದ್ದೇಶಿಸಿ ಲೇಹ್‍ನಲ್ಲಿ ಮಾತನಾಡಿದಾಗ ಅದನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದೆ. ‘ಲೇಹ್’ ಕೇಂದ್ರಾಡಳಿತ ಪ್ರದೇಶ ‘ಲಡಾಖ್’ನ ರಾಜಧಾನಿಯಾಗಿದ್ದು ಇದು ‘ಗಾಲ್ವಾನ್ ಕಣಿವೆಯಿಂದ’ ಸಾಕಷ್ಟು ದೂರದಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಭಾರತೀಯ ಸೈನಿಕರನ್ನು ಉದ್ದೇಶಿಸಿ ಮಾತನಾಡುವ ಫೋಟೋ ಲೇಹ್‍ನಲ್ಲಿ ತೆಗೆದಿದ್ದು, ಗಾಲ್ವಾನ್ ಕಣಿವೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.