Fake News - Kannada
 

ಚೀನಾವನ್ನು ಬೆಂಬಲಿಸಿ ಸಿಪಿಐ (ಎಂ) ನಾಯಕರು ಭಾರತೀಯ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿರುಚಿದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ

0

ಸಿಪಿಐ (ಎಂ) ನಾಯಕರಾದ ಸೀತಾರಾಮ್ ಯೆಚೂರಿ ಅವರು, ‘ಭಾರತದ ಅನ್ನ ತಿಂದು, ಸವಲತ್ತುಗಳು ಬಳಸ್ಕೊಂಡು’, ‘ಭಾರತೀಯ ಸೇನೆ ಡೌನ್..ಡೌನ್ .. ನಾವು ಚೀನಾವನ್ನು ಬೆಂಬಲಿಸುತ್ತೇವೆ… ಚೀನಾ ಜಿಂದಾಬಾದ್’ ಎಂಬ ಫಲಕಗಳನ್ನು ಹಿಡಿದು ಚೀನಾವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಇತ್ತೀಚೆಗೆ ನಡೆದ ಗಡಿ ಘರ್ಷಣೆಯ ಹಿನ್ನೆಲೆಯಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಅದರ ಸತ್ಯವನ್ನು ಅರಿಯಲು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಸಿಪಿಐ (ಎಂ) ನಾಯಕರು ಚೀನಾವನ್ನು ಬೆಂಬಲಿಸಿ ಭಾರತೀಯ ಸೇನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಫೋಟೋಗಳು.

ನಿಜಾಂಶ: ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ, ಸರ್ಕಾರದ ನೀತಿಗಳ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಸೆರೆಹಿಡಿದ ಫೋಟೋಗಳನ್ನು ಎಡಿಟ್‌ ಮಾಡಲಾಗಿದೆ. ಈ ಪ್ರತಿಭಟನೆಗಳಲ್ಲಿ ಬಳಸಿದ್ದ ಫಲಕಗಳಲ್ಲಿನ ವಿಷಯಗಳನ್ನು ತಿರುಚಿ ಎಡಿಟ್‌ ಮಾಡಿ ‘ಸಿಪಿಐ(ಎಂ) ನಾಯಕರು ಚೀನಾವನ್ನು ಬೆಂಬಲಿಸಿ ಭಾರತೀಯ ಸೇನೆಯ ವಿರುದ್ಧ ಪ್ರತಿಭಟಿಸುತ್ತಾರೆ’ ಎಂದು ಹಂಚಿಕೊಳ್ಳಲಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿರುವ ಪ್ರತಿಪಾದನೆ ತಪ್ಪು.

ಕೀವರ್ಡ್‌ಗಳೊಂದಿಗೆ ಮಾಹಿತಿಗಾಗಿ ಹುಡುಕಿದಾಗ, ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾಗಿರುವ ಫೋಟೋಗಳು ಸಿಪಿಐ(ಎಂ) ಪಕ್ಷವು ನವದೆಹಲಿಯಲ್ಲಿ 2020ರ ಜೂನ್ 16 ರಂದು ಆಯೋಜಿಸಿದ್ದ ಪ್ರತಿಭಟನೆಗೆ ಸಂಬಂಧಿಸಿದ್ದವಾಗಿದ್ದು, ಅವುಗಳನ್ನು ಎಡಿಟ್‌ ಮಾಡಿ ಹಂಚಿಕೊಳ್ಳುತ್ತಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದ ಮೂಲ ಫೋಟೋಗಳು ಸಿಪಿಐ(ಎಂ)ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಮೂಲ ಫೋಟೋದಲ್ಲಿ, ಸೀತಾರಾಮ್ ಯೆಚೂರಿ ಅವರು ಫಲಕ ಹಿಡಿದು, ‘ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಜನರಿಗೆ ಮೂರು ತಿಂಗಳ ಕಾಲ ತಿಂಗಳಿಗೆ 7,500 ರೂಪಾಯಿಗಳನ್ನು ನೀಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.

ಸಿಪಿಐ (ಎಂ) ನಾಯಕರು 2020 ರ ಜೂನ್ 16 ರಂದು ನಡೆಸಿದ ಪ್ರತಿಭಟನೆಯ ಹೆಚ್ಚಿನ ಫೋಟೋಗಳನ್ನು ಸೀತಾರಾಮ್ ಯೆಚೂರಿ ಅವರ ಟ್ವಿಟರ್ ಪ್ರೊಫೈಲ್‌ನಲ್ಲಿ ಕಾಣಬಹುದು. ಈ ಪ್ರತಿಭಟನೆಗಳ ವೀಡಿಯೊ ಪ್ರಸಾರವನ್ನು ಸಹ ಇಲ್ಲಿ ವೀಕ್ಷಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಫಲಕದಲ್ಲಿದ್ದ ವಿಷಯವು ಸಿಪಿಐ(ಎಂ) ನಾಯಕರು ಸರ್ಕಾರದ ನೀತಿಗಳ ವಿರುದ್ಧ ಹಾಗೂ ಅದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ಹಣ ವರ್ಗಾವಣೆ ಮಾಡವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾಗಿದೆ. ಆದರೆ, ಆ ಪೋಟೋಗಳನ್ನು ಬಳಿಸಿಕೊಂಡು ‘ಚೀನಾವನ್ನು ಬೆಂಬಲಿಸಿ ಸಿಪಿಐ(ಎಂ) ನಾಯಕರು ಭಾರತೀಯ ಸೇನೆಯ ವಿರುದ್ಧ ಪ್ರತಿಭಟಿಸಿದ್ದಾರೆ’ ಎಂದು ತಿರುಚಿ ಎಡಿಟ್‌ ಮಾಡಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll