ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರು ಎಂದು ಹಲವಾರು ಫೋಟೊಗಳನ್ನು ಸಾಮಾಜಿಕar ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಚಿತ್ರಗಳು.
ನಿಜಾಂಶ: ಈ ಫೋಟೊಗಳು ತುಂಬಾ ಹಳೆಯವು. ಇವುಗಳಿಗೂ ಇತ್ತೀಚೆಗೆ ಲಡಾಖ್ ಗಡಿಯಲ್ಲಿ ಭಾರತ ಚೀನಾ ನಡುವೆ ನಡೆದ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪ್ರತಿಪಾದನೆ ಸುಳ್ಳಾಗಿದೆ.
ಗೂಗಲ್ ರಿವರ್ಸ್ ಹುಡುಕಾಟ ನಡೆಸಿದಾಗ ಈ ಚಿತ್ರವು ಕನಿಷ್ಠ ಫೆಬ್ರವರಿ 16, 2019ರಿಂದಲೇ ಹಂಚಿಕೆಯಾಗುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ ಪುಲ್ವಾಮದಲ್ಲಿ ಭಯೋತ್ಪಾದಕ ಆತ್ಮಹತ್ಯೆ ಬಾಂಬರ್‌ನಿಂದಾಗಿ ಸಿ ಆರ್ ಪಿ ಎಫ್ ಸೈನಿಕ ಮೃತಪಟ್ಟ ನಂತರ ಈ ಚಿತ್ರ ಕಾಣಿಸಿಕೊಂಡಿತ್ತು. ಇದೇ ಚಿತ್ರವನ್ನು ರೆಡ್ಡಿಟ್‌ಪೋಸ್ಟ್ ಎಂಬ ವೆಬ್‌ಸೈಟ್ ಫೆಬ್ರವರಿ 16, 2020 ರಂದು ಪ್ರಕಟಿಸಿದ್ದು, “ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳ ಉಳಿಕೆಯನ್ನು ಅವರ ಸ್ವಗ್ರಾಮಗಳಿಗೆ ತಲುಪಿಸಲು ಸಜ್ಜಾಗಿರುವುದು” ಎಂಬ ಶೀರ್ಷಿಕೆ ನೀಡಲಾಗಿದೆ.

ಒಟ್ಟಿನಲ್ಲಿ ಹಳೆಯ ಮತ್ತು ಬೇರೆ ಸಂದರ್ಭದ ಚಿತ್ರಗಳನ್ನು ತಪ್ಪಾಗಿ, ಇತ್ತೀಚಿಗೆ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಚಿತ್ರಗಳು ಎಂದು ಹಂಚಿಕೊಳ್ಳಲಾಗಿದೆ.