Fake News - Kannada
 

ವಿಡಿಯೋದಲ್ಲಿನ ಘಟನೆಗೂ ,ಲವ್ ಜಿಹಾದ್‌ಗೂ ಸಂಬಂಧವಿಲ್ಲ; ಪತ್ನಿ ಮೇಲಿನ ಅನುಮಾನದಿಂದ ಗಂಡ ಹತ್ಯೆ ಮಾಡಿದ್ದು, ಇಬ್ಬರೂ ಹಿಂದೂಗಳೆ ಆಗಿದ್ದಾರೆ

0

ದೆಹಲಿಯಲ್ಲಿನ ಪರಿಸ್ಥಿತಿ ಕಾಶ್ಮೀರದ  ರೀತಿ ಬದಲಾಗಬಿಟ್ಟಿದೆ; ಲವ್ ಜಿಹಾದ್‌ನ್ನು ವಿರೋಧ ಮಾಡಿದ ಈ ಮಹಿಳೆಯನ್ನು ರಸ್ತೆಯ ಮೇಲೆ ಎಲ್ಲರ ಮುಂದೆ ಹತ್ಯೆ ಮಾಡಿದ’, ಎಂದು ಹೇಳುತ್ತಾ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಹಂಚಿಕೊಳ್ಳುತ್ತಿದ್ದಾರೆ. ಆ ಪೋಸ್ಟ್‌ನಲ್ಲಿನ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ: ಲವ್‌ಜಿಹಾದ್‌ ಅನ್ನು ವಿರೋಧಿಸಿದ್ದಕ್ಕಾಗಿ ದೆಹಲಿಯಲ್ಲಿನ ಮಹಿಳೆಯನ್ನು  ಒಬ್ಬ ವ್ಯಕ್ತಿ ಹತ್ಯೆ ಮಾಡುತ್ತಿರುವ ವಿಡಿಯೋ.

ನಿಜಾಂಶ: ವಿಡಿಯೋದಲ್ಲಿ ಇರುವವರು ಗಂಡ ಹೆಂಡತಿ. ಹೆಂಡತಿ(ನೀಲು ಮೆಹ್ತಾ) ಗೆ ಮತ್ತೊಬ್ಬ ವ್ಯಕ್ತಿಯೊಡನೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನದಿಂದ ಗಂಡ (ಹರೀಶ್ ಮೆಹ್ತಾ) ಆಕೆಯನ್ನು ಹತ್ಯೆ ಮಾಡಿದ. ಹರಿಶ್ ಮತ್ತು ನೀಲು ಒಂದೇ ಸಮುದಾಯಕ್ಕೆ ಸೇರಿದವರೆಂದು, ಈ ಘಟನೆಯಲ್ಲಿ ಲವ್ ಜಿಹಾದ್‌ನಂತಹದ್ದು ಏನು ಇಲ್ಲವೆಂದು ಪೋಲೀಸರು ತಿಳಿಸಿದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿನ ವಿಡಿಯೋ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದಾಗ, ವಿಡಿಯೋದಲ್ಲಿನ ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿ ಲೇಖನಗಳು ಕಂಡುಬಂದಿವೆ. ಆ ಘಟನೆ ದೆಹಲಿಯಲ್ಲಿನ ರೋಹಿಣಿ ಪ್ರಾಂತ್ಯದಲ್ಲಿ ನಡೆದಿದೆ. ವಿಡಿಯೋದಲ್ಲಿ ಇರುವವರು ಗಂಡ ಹೆಂಡತಿಯೆಂದು, ಹೆಂಡತಿ(ನೀಲು ಮೆಹ್ತಾ) ಗೆ ಮತ್ತೊಬ್ಬ ವ್ಯಕ್ತಿಯೊಡನೆ ವಿವಾಹೇತರ ಸಂಬಂಧವಿದೆ ಎಂಬ ಅನುಮಾನದಿಂದ ಗಂಡ (ಹರೀಶ್ ಮೆಹ್ತಾ) ಆಕೆಯನ್ನು ಹತ್ಯೆ  ಮಾಡಿದನೆಂದು ಪೋಲೀಸರು ಹೇಳಿದ್ದಾರೆಂದು ತಿಳಿದಿದೆ. ಈ ಘಟನೆಯ ಬಗ್ಗೆ  ವಿವಿಧ ಸುದ್ದಿಸಂಸ್ಥೆಗಳು ಪ್ರಕಟಿಸಿದ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಅಲ್ಲದೇ,  ‘DCP Rohini’ ಯವರು ಟ್ವಿಟ್‌ ಒಂದಕ್ಕೆ ಪ್ರತಿಕ್ರಿಯೆ ನೀಡುರುವ ಹರೀಶ್ ಮೆಹ್ತಾ ನೀಲು ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರೆಂದು, ಲವ್‌ಜಿಹಾದ್‌ನಂತಹದ್ದು ಏನು ಇಲ್ಲ’, ಎಂದು ಟ್ವೀಟ್ ಮಾಡಿದ್ದಾರೆ.

ಈ ಘಟನೆಯ ಮೇಲೆ ದಾಖಲಾಗಿರುವ FIR ಕಾಪಿಯನ್ನು ಇಲ್ಲಿ ನೋಡಬಹುದು.

ಒಟ್ಟಿನಲ್ಲಿ, ವಿಡಿಯೋದಲ್ಲಿನ ಘಟನೆಗೂ ಲವ್‌ಜಿಹಾದ್‌ಗೂ ಸಂಬಂದವಿಲ್ಲ; ಹೆಂಡತಿಯ ಮೇಲೆ ಅನುಮಾನದಿಂದ ಗಂಡ ಹತ್ಯೆ ಮಾಡಿದ್ದು ಇಬ್ಬರೂ ಹಿಂದೂಗಳೆ ಆಗಿದ್ದಾರೆ.

Share.

About Author

Comments are closed.

scroll