Fake News - Kannada
 

ಶ್ರೀಕಾಕುಳಂ ತೀರದಲ್ಲಿ ಕಂಡುಬಂದಿರುವ ರಥವು ಚಿನ್ನದ ಬಣ್ಣದ್ದಾಗಿದೆ ಆದರೆ ಚಿನ್ನದಿಂದ ಮಾಡಲಾಗಿಲ್ಲ

0

ಆಂಧ್ರಪ್ರದೇಶದ ಶ್ರೀಕಾಕುಳಂ ಕಡಲ ತೀರದಲ್ಲಿ ಚಿನ್ನದ ರಥವೊಂದು ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ರಥವೊಂದು ಸಮುದ್ರ ತೀರದಲ್ಲಿ ತೇಲುತ್ತಿರುವ ವಿಡಿಯೊ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಚಿನ್ನದ ರಥ ಕಾಣಿಸಿಕೊಂಡಿದೆ ಎಂಬ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಆಂಧ್ರಪ್ರದೇಶದ ಶ್ರೀಕಾಕುಳಂ ಕಡಲ ತೀರದಲ್ಲಿ ಚಿನ್ನದ ರಥವನ್ನು ಕಾಣಿಸಿಕೊಂಡಿದೆ.

ನಿಜಾಂಶ : ಆಸಾನಿ ಚಂಡಮಾರುತದಿಂದ ಉಂಟಾದ ಅಲೆಗಳ ಉಬ್ಬರದಿಂದ ರಥವೊಂದು ಶ್ರೀಕಾಕುಳಂ ತೀರಕ್ಕೆ ಕೊಚ್ಚಿಕೊಂಡು ಬಂದಿರುವುದು ನಿಜ. ಆದರೆ, ರಥವು ಕೇವಲ ಚಿನ್ನದ ಬಣ್ಣದ್ದಾಗಿದೆ ಆದರೆ ಚಿನ್ನದಿಂದ ಮಾಡಲಾಗಿಲ್ಲ. ಸರ್ಕಾರಿ ಅಧಿಕಾರಿಗಳು ಇದನ್ನು ದೃಢಪಡಿಸಿದ್ದಾರೆ ಮತ್ತು ರಥದ ಮೇಲೆ ಬರೆದಿರುವ ಭಾಷೆಯ ಆಧಾರದ ಮೇಲೆ ಅದು ಮ್ಯಾನ್ಮಾರ್‌ನಿಂದ ಬಂದಿದೆ ಎಂದು ಅವರು ಗುರುತಿಸಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಅಸಾನಿ ಚಂಡಮಾರುತದಿಂದ ಉಂಟಾದ ಅಲೆಗಳ ಏರಿಳಿತದಿಂದಾಗಿ ಚಿನ್ನದ ಬಣ್ಣದ ರಥವೊಂದು ಆಂಧ್ರಪ್ರದೇಶದ ಶ್ರೀಕಾಕುಲಂ ತೀರಕ್ಕೆ ಕೊಚ್ಚಿ ಹೋಗಿದ್ದು ನಿಜವಾಗಿದ್ದು ಈ ಸುದ್ದಿಯನ್ನು ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಆದರೆ, ರಥವು ಚಿನ್ನದಿಂದ ಮಾಡಲಾಗಿಲ್ಲ ಚಿನ್ನದ ಬಣ್ಣದ್ದಾಗಿದೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಸುದ್ದಿ ವರದಿಗಳ ಪ್ರಕಾರ, ರಥವು ಚಿನ್ನದ ಬಣ್ಣದ್ದಾಗಿದೆ ಆದರೆ ಚಿನ್ನದಿಂದ ಮಾಡಲಾಗಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮುಂದೆ ರಥದಲ್ಲಿರುವ ಭಾಷೆಯ ಆಧಾರದ ಮೇಲೆ ಅದು ಮ್ಯಾನ್ಮಾರ್ ನಿಂದ ಬಂದಿರಬಹುದು ಎಂದು ಗುರುತಿಸಿದ್ದಾರೆ.

ಚಿನ್ನದ ಬಣ್ಣದ ರಥವನ್ನು ಚಿನ್ನದ ರಥ ಎಂದು ತಪ್ಪಾಗಿ ಅರ್ಥೈಸುವ ಸುದ್ದಿ ವರದಿಗಳು ಸಹ ಕಂಡುಬಂದಿವೆ. ಆದರೂ, ಹಲವು ತೆಲುಗು ಸುದ್ದಿವಾಹಿನಿಗಳು ರಥವನ್ನು ಚಿನ್ನದಿಂದ ಮಾಡಲಾಗಿಲ್ಲ ಆದರೆ ಕೇವಲ ಚಿನ್ನದ ಬಣ್ಣದ್ದಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀಕಾಕುಲಂ ತೀರದಲ್ಲಿ ಕಂಡುಬಂದಿರುವ ರಥವು ಚಿನ್ನದ ಬಣ್ಣದ್ದಾಗಿದೆ ಆದರೆ ಚಿನ್ನದಿಂದ ಮಾಡಲಾಗಿಲ್ಲ.

Share.

Comments are closed.

scroll