Coronavirus Kannada, Fake News - Kannada
 

ಅಮಿತಾಬ್ ಬಚ್ಚನ್ ಅವರು ನಾನಾವತಿ ಆಸ್ಪತ್ರೆಯ ಸಿಬ್ಬಂದಿಯನ್ನು ಶ್ಲಾಘಿಸುವ ಹಳೆಯ ವಿಡಿಯೋವನ್ನು ಈಗಿನ ವಿಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ

0

ಇತ್ತೀಚೆಗೆ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಕೋವಿಡ್-19 ಪರೀಕ್ಷೆಯಲ್ಲಿ  ಪಾಸಿಟಿವ್ ಆಗಿದ್ದು, ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕೋವಿಡ್-19 ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಅಮಿತಾಬ್ ಬಚ್ಚನ್ ಅವರು ಚಿತ್ರೀಕರಿಸಿದ್ದಾರೆ ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೋವಿಡ್ -19 ಸಮಯದಲ್ಲಿ ನಾನಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಿಬ್ಬಂದಿಯ ಕೆಲಸವನ್ನು ಅಮಿತಾಬ್ ಬಚ್ಚನ್ ಶ್ಲಾಘಿಸಿದ್ದಾರೆ. ಪೋಸ್ಟ್ ನಲ್ಲಿ ಮಾಡಿರುವ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಮಿತಾಬ್ ಬಚ್ಚನ್ ಅವರು ಕೋವಿಡ್ -19 ಚಿಕಿತ್ಸೆಗೆ ದಾಖಲಾದ ನಂತರ ನಾನಾವತಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಶ್ಲಾಘಿಸುವ ವಿಡಿಯೋ.

ನಿಜಾಂಶ: ಅಮಿತಾಬ್ ಬಚ್ಚನ್ ಅವರು ಕೋವಿಡ್ -19 ಪರೀಕ್ಷೆಗೆ ‘11 ಜುಲೈ 2020 ’ರಂದು ಪಾಸಿಟಿವ್ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈರಲ್ ವಿಡಿಯೊ ಕನಿಷ್ಠ ‘ಏಪ್ರಿಲ್ 2020’ ರಿಂದ ಅಂತರ್ಜಾಲದಲ್ಲಿರುವುದು ಕಂಡುಬರುತ್ತದೆ. ಆದ್ದರಿಂದ, ಅವರು ಕೋವಿಡ್ -19 ಪರೀಕ್ಷೆ ಪಾಸಿಟಿವ್ ಬಂದು ನಾನಾವತಿ ಆಸ್ಪತ್ರೆಗೆ ದಾಖಲಿಸಿದ ನಂತರ ವಿಡಿಯೋವನ್ನು ತೆಗೆದಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

’11 ಜುಲೈ, 2020 ’ರಂದು ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರ ಕೋವಿಡ್ -19 ಪರೀಕ್ಷೆ ಪಾಸಿಟಿವ್ ಬಂದಿತು ಮತ್ತು ಅವರನ್ನು ಚಿಕಿತ್ಸೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಯಿತು.

ವೈರಲ್ ವಿಡಿಯೋದ ವಿವರಗಳನ್ನು ತಿಳಿಯಲು, ರಿವರ್ಸ್ ಇಮೇಜ್ ಸರ್ಚ್ ತಂತ್ರದಲ್ಲಿ ನಾವು ವಿಡಿಯೋದ ಸ್ಕ್ರೀನ್‍ಶಾಟ್‍ಗಳನ್ನು ಹುಡುಕಿದೆವು. ಅದೇ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ವಿಡಿಯೋಗೆ ‘ಅಮಿತಾಬ್ ಬಚ್ಚನ್ | ವೈದ್ಯರಿಗೆ ಸಲ್ಯೂಟ್ | ನಾನಾವತಿ ಹಾಸ್ಪಿಟಲ್ | ಕೊರೊನಾ ವಾರಿಯರ್ಸ್ | ಕೋವಿಡ್ – 19 | ಇಂಡಿಯಾ’ ಮತ್ತು ಅದರ ಟೈಮ್‍ಸ್ಟ್ಯಾಂಪ್ ‘22 ಏಪ್ರಿಲ್ 2020’ ಎಂದಿತ್ತು. ಆದ್ದರಿಂದ, ಅವರು ಕೋವಿಡ್ -19 ಪಾಸಿಟಿವ್ ಆದ ಮೇಲೆ ನಾನಾವತಿ ಆಸ್ಪತ್ರೆಗೆ ದಾಖಲಾದ ನಂತರ ವಿಡಿಯೋವನ್ನು ಚಿತ್ರೀಕರಿಸಿಲ್ಲ.

ಆರೋಗ್ಯ ಸಿಬ್ಬಂದಿಯ ಪ್ರಯತ್ನವನ್ನು ಅಮಿತಾಬ್ ಬಚ್ಚನ್ ಮೆಚ್ಚಿರುವ ವಿಡಿಯೋವನ್ನು ‘ಏಪ್ರಿಲ್ 2020’ ನಲ್ಲಿ ಚಿತ್ರೀಕರಿಸಲಾಗಿದೆ ಎಂದು ನಾನಾವತಿ ಆಸ್ಪತ್ರೆಯೂ ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೋವಿಡ್-19 ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಅಮಿತಾಬ್ ಬಚ್ಚನ್ ಅವರು ನಾನಾವತಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಯ ಪ್ರಯತ್ನವನ್ನು ಶ್ಲಾಘಿಸುವ ವಿಡಿಯೋವನ್ನು ಚಿತ್ರೀಕರಿಸಿಲ್ಲ.

Share.

About Author

Comments are closed.

scroll